ನವದೆಹಲಿ: ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ಬದ್ಧವಾಗಿರುವ ಎಲ್ಲ ರಾಜಕೀಯ ಪಕ್ಷಗಳನ್ನು ಇಂಡಿಯಾ ಬಣ ಮುಕ್ತವಾಗಿ ಸ್ವಾಗತಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಪರೋಕ್ಷವಾಗಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರಿಗೆ ಆಹ್ವಾನ ನೀಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ ನಂತರ ತಮ್ಮ ನಿವಾಸದಲ್ಲಿ ನಡೆದ ಮೊದಲ ಪ್ರತಿಪಕ್ಷಗಳ ಮಾತನಾಡಿದ ಖರ್ಗೆ, ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳು ಉತ್ತಮವಾಗಿ, ಒಗ್ಗಟ್ಟಿನಿಂದ ಮತ್ತು ದೃಢವಾಗಿ ಹೋರಾಡಿವೆ ಎಂದರು.
ಜನಾದೇಶವು ನಿರ್ಣಾಯಕವಾಗಿ ಮೋದಿಯವರ ವಿರುದ್ಧ ಬಂದಿದೆ. ಜನಾದೇಶ ಮೋದಿ ವಿರುದ್ಧ ಮತ್ತು ಅವರ ರಾಜಕೀಯದ ಶೈಲಿಯ ವಿರುದ್ಧವಾಗಿದೆ. ಇದು ಸ್ಪಷ್ಟವಾಗಿ ನೈತಿಕ ಸೋಲು. ವೈಯಕ್ತಿಕವಾಗಿ ಅವರಿಗೆ ದೊಡ್ಡ ರಾಜಕೀಯ ನಷ್ಟವಾಗಿದೆ. ಆದಾಗ್ಯೂ, ಅವರು ಜನರು ಇಚ್ಛೆಯನ್ನು ಬುಡಮೇಲು ಮಾಡಲು ನಿರ್ಧರಿಸಿದ್ದಾರೆ ಖರ್ಗೆ ಹೇಳಿದರು.
"ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ಬದ್ಧವಾಗಿರುವ ಎಲ್ಲಾ ಪಕ್ಷಗಳನ್ನು ಇಂಡಿಯಾ ಮೈತ್ರಿಕೂಟ ಸ್ವಾಗತಿಸುತ್ತದೆ" ಎಂದು ಕಾಂಗ್ರೆಸ್ ಮುಖ್ಯಸ್ಥರು ತಮ್ಮ ಆರಂಭಿಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂಡಿಯಾ ಬ್ಲಾಕ್ ಪಕ್ಷಗಳಿಗೆ ಧನ್ಯವಾದ ಅರ್ಪಿಸಿದ ಖರ್ಗೆ, "ನಾನು ಎಲ್ಲಾ ಇಂಡಿಯಾ ಮೈತ್ರಿಕೂಟದ ನಾಯಕರನ್ನು ಸ್ವಾಗತಿಸುತ್ತೇನೆ. ನಾವು ಚೆನ್ನಾಗಿ ಹೋರಾಡಿದ್ದೇವೆ, ಒಗ್ಗಟ್ಟಿನಿಂದ ಹೋರಾಡಿದ್ದೇವೆ, ದೃಢವಾಗಿ ಹೋರಾಡಿದ್ದೇವೆ" ಎಂದು ಹೇಳಿದರು.