ಪಾಟ್ನಾ: 18ನೇ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಮೋದಿ ಅಂಶ ಮುಗಿದಿದೆ ಎಂಬುದು ಬಹಳ ಸ್ಪಷ್ಟವಾಗಿದೆ ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಬುಧವಾರ ಹೇಳಿದ್ದಾರೆ.
ನವದೆಹಲಿಯಲ್ಲಿ INDIA ಬಣ ನಾಯಕರ ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆತಿಲ್ಲ. ಹಾಗಾಗೀ ಮಿತ್ರ ಪಕ್ಷಗಳ ಮೇಲೆ ಅವಲಂಬಿತವಾಗಿದೆ. ಬಿಹಾರದಲ್ಲಿ ಆರ್ ಜೆಡಿ ಗರಿಷ್ಟ ಸಂಖ್ಯೆಯ ಮತಗಳನ್ನು ಪಡೆದಿದೆ. ನಮ್ಮ ಶೇಕಡಾವಾರು ಮತದಾನ ಹೆಚ್ಚಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವೆ. ದೇಶದ ಜನರು ಬಿಜೆಪಿಗೆ ಪಾಠ ಕಲಿಸಿದ್ದಾರೆ. ವಿಜಭನೆ ನೀತಿ ಮತ್ತು ದ್ವೇಷದ ರಾಜಕೀಯದ ವಿರುದ್ಧ ಮತ ಚಲಾಯಿಸಿದ್ದಾರೆ. ಸರ್ವಾಧಿಕಾರಿ ಆಡಳಿತವನ್ನು ತಡೆಗಟ್ಟಿದ್ದಾರೆ ಎಂದರು.
ದೇಶದ ಜನರು ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ವೋಟ್ ಮಾಡಿದ್ದಾರೆ. ಅಯೋಧ್ಯೆಯಲ್ಲಿಯೂ ಇಂಡಿಯಾ ಬಣ ಗೆಲುವು ಸಾಧಿಸಿದ್ದಾರೆ. ಪ್ರಧಾನಿ ಮೋದಿ ಮುಸ್ಲಿಂ ಸಹೋದರರ ವಿರುದ್ಧ ಹೆಚ್ಚಾಗಿ ಮಾತನಾಡಿದ್ದರು. ಅವರಿಗೆ ರಾಮ ಕೂಡಾ ಪಾಠ ಕಲಿಸಿದ್ದಾರೆ. ನಮ್ಮ ಸಾಧನೆ ಅತ್ಯುತ್ತಮವಾಗಿದೆ. ನೈಜ ಆಧಾರಿತ ವಿಷಯಗಳ ಮೇಲೆ ಹೋರಾಟ ನಡೆಸಿದೇವು. ಅಯೋಧ್ಯೆಯಲ್ಲಿ ರಾಮ ಇಂಡಿಯಾ ಮೈತ್ರಿಗೆ ಆಶೀರ್ವಾದ ಮಾಡಿದ್ದಾನೆ. ಹಾಗಾಗೀ ಮೋದಿ ಅಂಶ ಮುಗಿದಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗೆಯಲ್ಲಿ ಯಶಸ್ಸು ಸಿಕ್ಕಿರುವುದಕ್ಕೆ ತುಂಬಾ ಸಂತಸವಾಗಿದೆ ಎಂದರು.
40 ಸ್ಥಾನವಿರುವ ಬಿಹಾರದಲ್ಲಿ ಜೆಡಿಯು 12, ಬಿಜೆಪಿ 12, ಆರ್ ಜೆಡಿ 4, ಕಾಂಗ್ರೆಸ್ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.