ದೆಹಲಿಯಲ್ಲಿ ಸಭೆಯ ನಂತರ ಎನ್ ಡಿಎ ಮೈತ್ರಿಕೂಟ ನಾಯಕರ ಗ್ರೂಪ್ ಫೋಟೋ  
ದೇಶ

NDA ಮೈತ್ರಿ ಸರ್ಕಾರದಲ್ಲಿ ಖಾತೆ ಹಂಚಿಕೆ ಸವಾಲು: 6 ಖಾತೆಗಳ ಬಿಟ್ಟುಕೊಡಲು ಬಿಜೆಪಿಗೆ ಸುತಾರಾಂ ಇಷ್ಟವಿಲ್ಲ!

ಎನ್‌ಡಿಎ ಪಾಲುದಾರ ಪಕ್ಷಗಳಿಗೆ ಬಿಜೆಪಿ ರೈಲ್ವೆ, ಗೃಹ, ಹಣಕಾಸು, ರಕ್ಷಣೆ, ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಖಾತೆಗಳನ್ನು ಬಿಟ್ಟುಕೊಡುವ ಸಾಧ್ಯತೆ ಕಡಿಮೆಯಾಗಿದೆ.

ನವದೆಹಲಿ: ನರೇಂದ್ರ ಮೋದಿ ನಾಯಕತ್ವದಲ್ಲಿ ಒಟ್ಟಾಗಿ ಉಳಿಯುವ ಮೈತ್ರಿಕೂಟದ ಭರವಸೆಯನ್ನು ತನ್ನ ಮಿತ್ರಪಕ್ಷಗಳಿಂದ ಪಡೆದಿರುವ ಭಾರತೀಯ ಜನತಾ ಪಾರ್ಟಿ ಮುಂದೆ ಸಂಪುಟ ದರ್ಜೆ ಸ್ಥಾನಗಳಿಗೆ ಮಿತ್ರ ಪಕ್ಷಗಳು ಬೇಡಿಕೆಯಿಡುವ ಸಾಧ್ಯತೆಯಿದೆ.

ಆದರೆ ಎನ್‌ಡಿಎ ಪಾಲುದಾರ ಪಕ್ಷಗಳಿಗೆ ಬಿಜೆಪಿ ರೈಲ್ವೆ, ಗೃಹ, ಹಣಕಾಸು, ರಕ್ಷಣೆ, ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಖಾತೆಗಳನ್ನು ಬಿಟ್ಟುಕೊಡುವ ಸಾಧ್ಯತೆ ಕಡಿಮೆಯಾಗಿದೆ.

10-12 ಸಚಿವಾಲಯಗಳ ಮೇಲೆ ಮಿತ್ರಪಕ್ಷಗಳು ಕಣ್ಣಿಟ್ಟಿವೆ ಮೂಲಗಳು ತಿಳಿಸಿವೆ. ಬಿಜೆಪಿ ತನ್ನ ಮಿತ್ರಪಕ್ಷದ ಬೆಂಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಏಳು ಸ್ವತಂತ್ರ ಮತ್ತು 3 ಸಣ್ಣ ಪಕ್ಷಗಳು ಬಿಜೆಪಿ ಬೆಂಬಲಕ್ಕೆ ನಿಂತಿವೆ. ಇನ್ನು 10 ಮಂದಿ ಹೆಚ್ಚು ಸಂಸದರನ್ನು ಹೊಂದಿರುವ ಎನ್‌ಡಿಎಗೆ 303 ಸಂಸದರ ಬೆಂಬಲವಿದೆ.

ಮೋದಿ ಸರ್ಕಾರವು ಸತತ ಮೂರನೇ ಅವಧಿಯಲ್ಲಿ ತನ್ನ ಸಂಕಲ್ಪ ಪ್ರಕಾರ ಪ್ರಮುಖ ಸಚಿವಾಲಯಗಳಿಗೆ ಸಂಬಂಧಿಸಿದ ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಭಾರತವನ್ನು ಜಾಗತಿಕವಾಗಿ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ಮೋದಿಯವರ ದೃಷ್ಟಿಕೋನ ಮಿತ್ರಕೂಟಗಳನ್ನು ಪ್ರೇರೇಪಿಸಿವೆ. ರೈಲ್ವೆ ಮೂಲಸೌಕರ್ಯ ಮತ್ತು ರಕ್ಷಣಾ ವಲಯದಲ್ಲಿ ಸ್ವಾವಲಂಬನೆಗೆ ನವೀಕೃತ ಉತ್ತೇಜನದ ಬಗ್ಗೆ ಮೋದಿ ಈಗಾಗಲೇ ಮಾತನಾಡಿದ್ದಾರೆ.

ಮುಂದಿನ ದಿನಗಳಲ್ಲಿ, ಪ್ರಧಾನಿಯವರು ಚುನಾವಣಾ ಪೂರ್ವ ಭಾಷಣಗಳಲ್ಲಿ ಹೇಳಿದ್ದಂತೆ, ಈ ಬಾರಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಕೆಲವು ನಿರ್ಧಾರಗಳ ಅನುಷ್ಠಾನವನ್ನು ಸುಲಭಗೊಳಿಸುವಲ್ಲಿ ಗೃಹ ಸಚಿವಾಲಯದ ಪಾತ್ರವು ನಿರ್ಣಾಯಕವಾಗಿರುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳುತ್ತಾರೆ. ಈ ಆರು ಸಚಿವಾಲಯಗಳನ್ನು ಹೊರತುಪಡಿಸಿ ಮಿತ್ರಪಕ್ಷಗಳ ಸಚಿವ ಸ್ಥಾನದ ಬೇಡಿಕೆಗಳನ್ನು ಬಿಜೆಪಿ ಪರಿಗಣಿಸುತ್ತದೆ ಎನ್ನುತ್ತಾರೆ ಅವರು.

ನಿನ್ನೆ ಬುಧವಾರ ನಡೆದ ಸಭೆಯಲ್ಲಿ ಸರ್ಕಾರ ರಚನೆಯಂತಹ ಬೆಂಬಲ ಒಪ್ಪಂದದ ಸೂಕ್ಷ್ಮ ಅಂಶಗಳ ಬಗ್ಗೆ ಎನ್‌ಡಿಎ ನಾಯಕರು ಚರ್ಚಿಸಿದ್ದರೂ, ಪ್ರಮುಖ ಖಾತೆಗಳ ಹಂಚಿಕೆ ಬಗ್ಗೆ ಯಾವುದೇ ದೃಢ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜೆಡಿ (ಯು) ಕ್ರಮವಾಗಿ 16 ಮತ್ತು 12 ಸ್ಥಾನಗಳನ್ನು ಗೆದ್ದಿದ್ದು ಅವುಗಳಿಂದ ಪ್ರಮುಖ ಬೇಡಿಕೆಗಳು ಬರುವ ಸಾಧ್ಯತೆಯಿದೆ. ಈ ಎರಡು ಪಕ್ಷಗಳ ಹೊರತಾಗಿ, ಶಿವಸೇನೆ (ಶಿಂಧೆ ಬಣ) 7, ಎಲ್‌ಜೆಪಿ (RV) 5 ಮತ್ತು ಎಚ್‌ಎಎಂ 1 ಸ್ಥಾನಗಳನ್ನು ಗೆದ್ದಿದೆ. ನಾಳೆ ನಡೆಯಲಿರುವ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಸಚಿವ ಸ್ಥಾನಕ್ಕಾಗಿ ಅವರು ಬೇಡಿಕೆ ಮಂಡಿಸುವ ಸಾಧ್ಯತೆಯಿದೆ.

ಜೆಡಿ(ಯು) ಎರಡು MoS ಹುದ್ದೆಗಳನ್ನು ಪರಿಗಣಿಸುತ್ತಿದೆ ಎಂದು NDA ಮೂಲಗಳು ತಿಳಿಸಿದ್ದು, ಶಿವಸೇನೆ (ಶಿಂಧೆ) ಕ್ಯಾಬಿನೆಟ್ ಸ್ಥಾನ ಮತ್ತು ಎರಡು ರಾಜ್ಯ ಸಚಿವ (MoS) ಹುದ್ದೆಗಳಿಗೆ ತನ್ನ ಬೇಡಿಕೆಯನ್ನು ಮುಂದಿಟ್ಟಿದೆ ಎಂದು ತಿಳಿದುಬಂದಿದೆ.

ಎಲ್ ಜೆಪಿ (ಆರ್ ವಿ) ಇನ್ನೂ ತನ್ನ ಬೇಡಿಕೆಗಳನ್ನು ಅಧಿಕೃತವಾಗಿ ತಿಳಿಸಿಲ್ಲ. ಆದಾಗ್ಯೂ, ಪಕ್ಷದ ಮೂಲಗಳು ಚಿರಾಗ್ ಪಾಸ್ವಾನ್‌ಗೆ ಒಂದು ಕ್ಯಾಬಿನೆಟ್ ಮತ್ತು ಬಿಹಾರದ ಸಮಸ್ತಿಪುರದಿಂದ ಗೆದ್ದ ದೇಶದ ಕಿರಿಯ ಸಂಸದ ಶಾಂಭವಿ ಚೌಧರಿ ಸೇರಿದಂತೆ ಅದರ ಇತರ ಸಂಸದರಿಗೆ ಎರಡು MoS ಹುದ್ದೆಗಳನ್ನು ಬಯಸುತ್ತಿದೆ ಎಂದು ಹೇಳಲಾಗುತ್ತಿದೆ.

ಗಯಾದಿಂದ ಆಯ್ಕೆಯಾಗಿರುವ ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ನೇತೃತ್ವದ HAM, ಒಂದು ಕ್ಯಾಬಿನೆಟ್ ದರ್ಜೆಯ ಹುದ್ದೆಯನ್ನು ಕೇಳಿದೆ ಎಂದು ತಿಳಿದುಬಂದಿದೆ. ಪಕ್ಷವು ತನ್ನ ಸಂಸ್ಥಾಪಕ ನಾಯಕ ಮಾಂಝಿಗೆ ಕೇಂದ್ರ ಸರ್ಕಾರದಿಂದ ಸ್ಥಾನಮಾನ ಬಯಸುತ್ತಿದೆ. ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಸಿಂಗ್ ಅವರು ಎನ್‌ಡಿಎ ಘಟಕಗಳ ನಾಯಕರ ಫೋಟೋವನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ‘ರಾಷ್ಟ್ರಕ್ಕಾಗಿ ಒಗ್ಗೂಡಿ! #NDA'.

“ಭಾರತದ ರೋಮಾಂಚಕ ಪ್ರಜಾಪ್ರಭುತ್ವವು ಈ ಪ್ರದೇಶದಲ್ಲಿ ನಮ್ಮ ಸ್ಥಾನವನ್ನು ಉಜ್ವಲ ತಾಣವಾಗಿ ಖಚಿತಪಡಿಸುತ್ತದೆ. ಎನ್‌ಡಿಎ ತನ್ನ 3 ನೇ ಅವಧಿಯಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ನಮ್ಮ ನಾಯಕತ್ವವನ್ನು ಮತ್ತಷ್ಟು ಭದ್ರಪಡಿಸುತ್ತದೆ, ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT