ಎನ್ ಡಿಎ ಮೈತ್ರಿಕೂಟ ಸಭೆಯಲ್ಲಿ ನರೇಂದ್ರ ಮೋದಿ, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್  
ದೇಶ

ಚಂದ್ರಬಾಬು ನಾಯ್ಡು 'ಭಾರತದ ಕುಮಾರಸ್ವಾಮಿ' ಎಂದು ಕೆಲವರು ಕರೆಯುತ್ತಿದ್ದಾರೆ, ಕಾರಣವೇನು?

ಶೀಘ್ರದಲ್ಲೇ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಲಿರುವ ಅವರು ಕೇವಲ 16 ಸಂಸದರನ್ನು ಹೊಂದಿದ್ದು, ಕೇಂದ್ರದಲ್ಲಿ ಸರ್ಕಾರ ರಚನೆಗೆ ಮುಂಚಿತವಾಗಿ ಸಚಿವ ಸ್ಥಾನ ಹಂಚಿಕೆಯಲ್ಲಿ ಬಿಜೆಪಿ ಜೊತೆ ಭಾರೀ ಚೌಕಾಸಿ ನಡೆಸುತ್ತಿರುವುದನ್ನು ಕಂಡು ಹಲವರು ಹೀಗೆ ಕರೆಯುತ್ತಿದ್ದಾರೆ

ನವದೆಹಲಿ: ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವುದರ ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಕೂಡ ಅವರ ಪಕ್ಷದ 16 ನಾಯಕರು ಸಂಸದರಾಗಿ ಹೊರಹೊಮ್ಮಿದ್ದಾರೆ. ಇದೀಗ ಎನ್‌ಡಿಎ ಸರ್ಕಾರದಲ್ಲಿ ಕಿಂಗ್ ಮೇಕರ್ ಆಗಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕೆಲವರು ಅವರನ್ನು "ಭಾರತದ ಕುಮಾರಸ್ವಾಮಿ" ಎಂದು ಕರೆಯುತ್ತಿದ್ದಾರೆ.

ಶೀಘ್ರದಲ್ಲೇ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಲಿರುವ ಅವರು ಕೇವಲ 16 ಸಂಸದರನ್ನು ಹೊಂದಿದ್ದು, ಕೇಂದ್ರದಲ್ಲಿ ಸರ್ಕಾರ ರಚನೆಗೆ ಮುಂಚಿತವಾಗಿ ಸಚಿವ ಸ್ಥಾನ ಹಂಚಿಕೆಯಲ್ಲಿ ಬಿಜೆಪಿ ಜೊತೆ ಭಾರೀ ಚೌಕಾಸಿ ನಡೆಸುತ್ತಿರುವುದನ್ನು ಕಂಡು ಹಲವರು ಹೀಗೆ ಕರೆಯುತ್ತಿದ್ದಾರೆ. ಚಂದ್ರಬಾಬು ನಾಯ್ಡು ಅವರು ಸ್ಪೀಕರ್ ಸ್ಥಾನ ಮತ್ತು ಇತರ ಸ್ಥಾನಗಳಿಗೆ ಬೇಡಿಕೆಯಿಡುತ್ತಿದ್ದು, ಹೆಚ್ ಡಿ ಕುಮಾರಸ್ವಾಮಿಯವರಂತೆ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಡುತ್ತಿದ್ದಾರೆ.

ಕರ್ನಾಟಕದ ಮಾಜಿ ಸಿಎಂ ಆಗಿರುವ ಕುಮಾರಸ್ವಾಮಿ 2018ರಲ್ಲಿ ವಿಧಾನಸಭೆ ಚುನಾವಣೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಜೆಡಿಎಸ್ ಶಾಸಕ ಸ್ಥಾನ ಹೊಂದಿದ್ದರೂ ಸಿಎಂ ಹುದ್ದೆ ಸೇರಿದಂತೆ ಹಲವು ಸಚಿವ ಸ್ಥಾನದ ಬೇಡಿಕೆಯಿಟ್ಟಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಹುದ್ದೆಯನ್ನೇ ಕುಮಾರಸ್ವಾಮಿ ಪಡೆಡಿದ್ದರು. ಚಂದ್ರಬಾಬು ನಾಯ್ಡು ಅವರು ಸಹ ಈಗ ಕೇಂದ್ರ ಎನ್ ಡಿಎ ಮೈತ್ರಿಕೂಟದಲ್ಲಿ ಅದೇ ರೀತಿ ಬಿಜೆಪಿ ಮುಂದೆ ಬೇಡಿಕೆಯೊಡ್ಡುತ್ತಿದ್ದು ಅದರಲ್ಲಿ ಅವರು ಯಶಸ್ವಿಯಾಗುತ್ತಾರಾ ಎಂದು ಕಾದುನೋಡಬೇಕಿದೆ.

ಈ ಮೇಲಿನ ಫೋಟೋದಲ್ಲಿ ಚಿಂತಾಕ್ರಾಂತರಾಗಿರುವ ನರೇಂದ್ರ ಮೋದಿಯವರ ಫೋಟೋ ನೋಡಿದ ಜನರು, ಪೆಟ್ರೋಲ್, ಎಲ್‌ಪಿಜಿ ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳದ, ಎಲ್ಲದಕ್ಕೂ ತೆರಿಗೆ ವಿಧಿಸುವ ಬಿಜೆಪಿಯವರು ಈಗ ಗಂಭೀರ ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.

ಶಿವರಾಜ್ ಚೌಹಾಣ್ ಗೆ ದೊಡ್ಡ 'ಗಿಫ್ಟ್'?: ಮಧ್ಯಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದ್ದು, ಭೋಪಾಲ್ ನ ಪವರ್ ಕಾರಿಡಾರ್‌ಗಳು ಮೂರು ಪ್ರಮುಖ ರಾಜಕಾರಣಿಗಳಾದ ಶಿವರಾಜ್ ಸಿಂಗ್ ಚೌಹಾಣ್, ದಿಗ್ವಿಜಯ ಸಿಂಗ್ ಮತ್ತು ಕಮಲ್ ನಾಥ್ ಅವರ ಭವಿಷ್ಯವನ್ನು ಊಹಿಸುವಲ್ಲಿ ನಿರತವಾಗಿವೆ.

ವಿದಿಶಾ, ಚೌಹಾಣ್‌ರಿಂದ ಆರು ಬಾರಿ ಲೋಕಸಭಾ ಚುನಾವಣೆಯಲ್ಲಿ ವಿಜೇತರಾಗಿದ್ದು ಮುಂಬರುವ ದಿನಗಳಲ್ಲಿ ಅವರಿಗೆ ಪ್ರಮುಖ ಖಾತೆ ಸಿಗಬಹುದು ಎಂದು ಹೇಳಲಾಗಿದೆ. ಪವರ್ ಕಾರಿಡಾರ್‌ಗಳು ಮೋದಿ 3.0 ಆಡಳಿತದಲ್ಲಿ ಕೃಷಿ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಎಂಬ ಎರಡು ಪ್ರಮುಖ ಸಚಿವ ಖಾತೆಗಳಲ್ಲಿ ಯಾವುದನ್ನಾದರೂ ಪಡೆಯುವುದು ಅಥವಾ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರ ಹುದ್ದೆಗೆ ಮುಂಚೂಣಿಯಲ್ಲಿರುವ ಮಾಮಾ (ಚೌಹಾಣ್ ಅವರು ಮಧ್ಯ ಪ್ರದೇಶದಲ್ಲಿ ಜನಪ್ರಿಯವಾಗಿ ತಿಳಿದಿರುವಂತೆ) ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದಾರೆ.

ಕರ್ನಾಟಕದಲ್ಲಿ ಜೆಡಿಎಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೂಡ ತಮ್ಮ ಪಕ್ಷವು ಹೊಸ NDA ಸರ್ಕಾರದಲ್ಲಿ ಕೃಷಿ ಖಾತೆಯ ಬಗ್ಗೆ ಆಸಕ್ತಿ ಹೊಂದಿದೆ ಎಂದು ಸುಳಿವು ನೀಡಿದ್ದರು.

ಅಸ್ಸಾಂನಲ್ಲಿ, ಜೋರ್ಹತ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಅವರು ಬಿಜೆಪಿಯ ಟೊಪೊನ್ ಗೊಗೊಯ್ ವಿರುದ್ಧ ಸಮಗ್ರ ಗೆಲುವು ಸಾಧಿಸಿರುವುದು ರಾಜಕೀಯ ದಿಕ್ಸೂಚಿಗೆ ಕಾರಣವಾಗುತ್ತದೆ. ಗೊಗೊಯ್ ಗೆದ್ದರೆ ರಾಜಕೀಯ ತ್ಯಜಿಸುವುದಾಗಿ ಚುನಾವಣೆಗೂ ಮುನ್ನ ಸಾರ್ವಜನಿಕವಾಗಿ ಘೋಷಿಸಿದ್ದ ಬಿಜೆಪಿ ಸಚಿವ ಪಿಜೂಷ್ ಹಜಾರಿಕಾ ಅವರನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ.

ಬಿಜೆಪಿ ಶಾಸಕರಾಗಿರುವ ಮೃಣಾಲ್ ಸೈಕಿಯಾ ಅವರು ಗೊಗೊಯ್ ಅವರ "ಅಸಾಧಾರಣ ವಿಜಯ" ವನ್ನು ಅಭಿನಂದಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದರು. ಕಾಂಗ್ರೆಸ್ ಬಿಗ್ಜಿಯನ್ನು "ಹೋರಾಟಗಾರ" ಎಂದು ಕರೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT