ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅಭ್ಯರ್ಥಿಗಳು ಜಾತಿ ಸಮೀಕರಣ ಅನುಸರಿಸಿದರೆ ಗೆಲ್ಲುವುದಿಲ್ಲ: ಗುಜರಾತ್ ಕಾಂಗ್ರೆಸ್ ಸಂಸದೆ ಗನಿಬೆನ್ ಠಾಕೂರ್

ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ನಾಯಕಿ ಗನಿಬೆನ್ ಠಾಕೂರ್ ಅವರು ಗುಜರಾತ್‌ನಲ್ಲಿ ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದಾರೆ.

ಗನಿಬೆನ್ ಠಾಕೂರ್
Lingaraj Badiger
Updated On : 7 Jun 2024, 11:37 pm

ಅಹಮದಾಬಾದ್: ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ನಾಯಕಿ ಗನಿಬೆನ್ ಠಾಕೂರ್ ಅವರು ಗುಜರಾತ್‌ನಲ್ಲಿ ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದಾರೆ.

ಇತ್ತೀಚೆಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಕಾಂಗ್ರೆಸ್ ಸಂಸದೆ, ತಮ್ಮ ಪಕ್ಷದ ನೀತಿಗಳ ಬಗ್ಗೆ ವಿಶೇಷವಾಗಿ ಜಾತಿ ಸಮೀಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

"ಅಭ್ಯರ್ಥಿಯು ತಮ್ಮ ಜಾತಿಯ ಬಲವನ್ನು ಅವಲಂಬಿಸುವುದು ದುರದೃಷ್ಟಕರ" ಎಂದು ಗನಿಬೆನ್ ಹೇಳಿದ್ದಾರೆ. ಪಕ್ಷದ ಸಂಘಟನೆಯ ಸಕ್ರಿಯ ಬೆಂಬಲವಿಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.

Advertisement

Advertisement

"ಕಾಂಗ್ರೆಸ್ ವ್ಯವಸ್ಥೆಗೆ ಗಮನಾರ್ಹ ಸುಧಾರಣೆಗಳ ಅಗತ್ಯವಿದೆ. ಸಮುದಾಯ ಆಧಾರಿತ ಬೆಂಬಲವನ್ನು ಅವಲಂಬಿಸುವ ಬದಲು, ಪಕ್ಷವು ತನ್ನ ಶಕ್ತಿಯ ಮೇಲೆ ನಿಲ್ಲಬೇಕು ಎಂದು ಎಂದು ಒತ್ತಿ ಹೇಳಿದ್ದಾರೆ.

Also Read

ಲೋಕಸಭೆ ಚುನಾವಣೆ ಫಲಿತಾಂಶ: ಗುಜರಾತ್ ನಲ್ಲಿ ದಶಕಗಳ ನಂತರ ಖಾತೆ ತೆರೆದ ಕಾಂಗ್ರೆಸ್!

ಬನಸ್ಕಾಂತದಲ್ಲಿ ಈ ಉಪಕ್ರಮವು ಪ್ರಾರಂಭವಾಗಿದೆ. ಪಕ್ಷದ ವಿರುದ್ಧ ಕೆಲಸ ಮಾಡುವವರನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಅವರನ್ನು ಶಿಕ್ಷಿಸಬೇಕು. ಅಂತಹ ವ್ಯಕ್ತಿಗಳಿಗೆ ಶಿಕ್ಷೆ ನೀಡದಿದ್ದರೆ, ಅವರು ಇತರರಿಗೆ ಸ್ಫೂರ್ತಿ ನೀಡುತ್ತಾರೆ ಮತ್ತು ಅಂತಿಮವಾಗಿ ಕಾಂಗ್ರೆಸ್ ಹಾನಿ ಮಾಡುತ್ತಾರೆ ಎಂದು ಠಾಕೂರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement