ಕಂಗನಾ ರಣಾವತ್, CISF ಮಹಿಳಾ ಪೇದೆ 
ದೇಶ

ಕಪಾಳಮೋಕ್ಷ ಮಾಡಿದ CISF ಮಹಿಳಾ ಪೇದೆಯನ್ನು ಹೊಗಳಿದವರ ವಿರುದ್ಧ ಕಂಗನಾ ರಣಾವತ್ ಕಿಡಿ!

ಯಾವುದೇ ಅಪರಾಧವಾದರೂ ಅದು ಕಾರಣವಿಲ್ಲದೆ ಎಂದಿಗೂ ಸಂಭವಿಸುವುದಿಲ್ಲ. ಆದರೂ ಅವರನ್ನು ಅಪರಾಧಿ ಎಂದು ನಿರ್ಣಯಿಸಲಾಗುತ್ತದೆ ಮತ್ತು ಜೈಲಿಗೆ ಹಾಕಲಾಗುತ್ತದೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ.

ನವದೆಹಲಿ: ತನಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಮಹಿಳಾ ಪೇದೆಯನ್ನು ಹೊಗಳುತ್ತಿರುವ ಜನರು 'ಅತ್ಯಾಚಾರ ಅಥವಾ ಕೊಲೆ'ಯನ್ನು ಸಮರ್ಥಿಸುತ್ತಾರೆಯೇ ಎಂದು ನಟಿ-ರಾಜಕಾರಣಿ ಕಂಗನಾ ರಣಾವತ್ ಶನಿವಾರ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರತಿಯೊಬ್ಬ ಅತ್ಯಾಚಾರಿ, ಕೊಲೆಗಾರ ಅಥವಾ ಕಳ್ಳ ಯಾವಾಗಲೂ ಅಪರಾಧವನ್ನು ಮಾಡಲು ಬಲವಾದ ಭಾವನಾತ್ಮಕ, ದೈಹಿಕ, ಮಾನಸಿಕ ಅಥವಾ ಆರ್ಥಿಕ ಕಾರಣವನ್ನು ಹೊಂದಿರುತ್ತಾನೆ. ಯಾವುದೇ ಅಪರಾಧವಾದರೂ ಅದು ಕಾರಣವಿಲ್ಲದೆ ಎಂದಿಗೂ ಸಂಭವಿಸುವುದಿಲ್ಲ. ಆದರೂ ಅವರನ್ನು ಅಪರಾಧಿ ಎಂದು ನಿರ್ಣಯಿಸಲಾಗುತ್ತದೆ ಮತ್ತು ಜೈಲಿಗೆ ಹಾಕಲಾಗುತ್ತದೆ ಎಂದಿದ್ದಾರೆ.

ಮುಂದುವರಿದು, 'ನೀವು ಅಪರಾಧಿಗಳನ್ನು ಬೆಂಬಲಿಸಿದರೆ, ದೇಶದ ಎಲ್ಲ ಕಾನೂನುಗಳನ್ನು ಉಲ್ಲಂಘಿಸುವ ಅಪರಾಧವನ್ನು ಮಾಡಲು ಬಲವಾದ ಭಾವನಾತ್ಮಕ ಪ್ರಚೋದನೆ ನೀಡಿದಂತಾಗುತ್ತದೆ. ಯಾರೊಬ್ಬರ ಆತ್ಮೀಯ ವಲಯಕ್ಕೆ ನುಗ್ಗುವುದು, ಅವರ ಅನುಮತಿಯಿಲ್ಲದೆ ಅವರ ದೇಹವನ್ನು ಸ್ಪರ್ಶಿಸುವುದು ಮತ್ತು ಅವರ ಮೇಲೆ ಹಲ್ಲೆ ಮಾಡುವುದು ನಿಮಗೆ ಸರಿಯೆನಿಸಿದರೆ, ನೀವು ಅತ್ಯಾಚಾರ ಅಥವಾ ಕೊಲೆಯನ್ನು ಸಮರ್ಥಿಸುವಿರಿ. ಏಕೆಂದರೆ ಅದು ಕೂಡ ನಿಮ್ಮ ದೃಷ್ಟಿಯಲ್ಲಿ ದೊಡ್ಡ ವಿಚಾರವಾಗಿರುವುದಿಲ್ಲ. ನಿಮ್ಮ ಮಾನಸಿಕ ಅಪರಾಧ ಪ್ರವೃತ್ತಿಯನ್ನು ನೀವು ಆಳವಾಗಿ ನೋಡಬೇಕು' ಎಂದು ಟ್ವೀಟ್ ಮಾಡಿದ್ದಾರೆ.

'ದಯವಿಟ್ಟು ಯೋಗ ಮತ್ತು ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವಂತೆ ನಾನು ಸಲಹೆ ನೀಡುತ್ತೇನೆ. ಇಲ್ಲದಿದ್ದರೆ ಜೀವನವು ಕಹಿ ಮತ್ತು ಹೊರೆಯ ಅನುಭವವಾಗುತ್ತದೆ. ತುಂಬಾ ದ್ವೇಷ ಮತ್ತು ಅಸೂಯೆಯನ್ನು ಹೊಂದಬೇಡಿ. ದಯವಿಟ್ಟು ಇದರಿಂದ ನಿಮ್ಮನ್ನು ಮುಕ್ತಗೊಳಿಸಿಕೊಳ್ಳಿ' ಎಂದು ಕಂಗನಾ ಸಲಹೆ ನೀಡಿದ್ದಾರೆ.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ರೈತ ಪ್ರತಿಭಟನೆಯ ವೇಳೆ ನೀಡಿದ್ದ ಹೇಳಿಕೆಯ ವಿರುದ್ಧ ಅಸಮಾಧಾನಗೊಂಡಿದ್ದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ತನ್ನ ಮುಖಕ್ಕೆ ಹೊಡೆದಿದ್ದಾರೆ ಮತ್ತು ನಿಂದಿಸಿದ್ದಾರೆ ಎಂದು ರಣಾವತ್ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಮುಕ್ತಾಯಗೊಂಡ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಭೆಯಲ್ಲಿ ಭಾಗವಹಿಸಲು ಕಂಗನಾ ದೆಹಲಿಗೆ ವಿಮಾನ ಏರಲು ಹೊರಟಿದ್ದಾಗ ಜೂನ್ 6 ರಂದು ಮಧ್ಯಾಹ್ನ 3.30ರ ಸುಮಾರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಹಿಮಾಚಲ ಪ್ರದೇಶದ ಮಂಡಿಯಿಂದ ಕಂಗನಾ ರಣಾವತ್ ಅವರು ಲೋಕಸಭೆಗೆ ಚುನಾಯಿತರಾಗಿದ್ದಾರೆ.

ಆರೋಪಿ ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಒದಗಿಸುವ ಹೊಣೆ ಹೊತ್ತಿರುವ ಸಿಐಎಸ್‌ಎಫ್, ಘಟನೆಯ ಕುರಿತು ನ್ಯಾಯಾಲಯದ ವಿಚಾರಣೆಗೆ ಆದೇಶಿಸಿದೆ.

ಚಿತ್ರರಂಗದ ಹಿರಿಯ ನಟಿ ಶಬಾನಾ ಅಜ್ಮಿ ಅವರು, ನನಗೆ ಕಂಗನಾ ರಣಾವತ್ ಬಗ್ಗೆ ಯಾವುದೇ ಪ್ರೀತಿ ಇಲ್ಲ. ಆದರೆ, ನಟಿಗೆ ಕಪಾಳಮೋಕ್ಷ ಮಾಡಿದ ಘಟನೆಯನ್ನು ಸಂಭ್ರಮಿಸುವ ಜನರೊಂದಿಗೆ ನಾನು ಸೇರುವುದಿಲ್ಲ. ಭದ್ರತಾ ಸಿಬ್ಬಂದಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಪ್ರಾರಂಭಿಸಿದರೆ, ನಾವು ಯಾರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.

ಇಲ್ಲಿಯವರೆಗೆ, ಅನುಪಮ್ ಖೇರ್, ಶೇಖರ್ ಸುಮನ್, ಅಧ್ಯಾನ್ ಸುಮನ್, ಉರ್ಫಿ ಜಾವೇದ್ ಮತ್ತು ದೇವೋಲೀನಾ ಭಟ್ಟಾಚಾರ್ಜಿ ಸೇರಿದಂತೆ ಹಲವಾರು ಬಾಲಿವುಡ್ ನಟರು ಕಂಗನಾ ರಣಾವತ್ ಅವರನ್ನು ಬೆಂಬಲಿಸಿ, ಅಹಿತಕರ ಘಟನೆಯನ್ನು ಖಂಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT