ನವದೆಹಲಿ: ಈ ಹಿಂದೆ ಉತ್ತರ ಭಾರತವನ್ನು ತತ್ತರಿಸುವಂತೆ ಮಾಡಿದ್ದ ಹೀಟ್ ವೇವ್ ಇದೀಗ ವಾಯುವ್ಯ, ಪೂರ್ವ ಭಾರತಕ್ಕೂ ಆಘಾಚ ನೀಡಿದ್ದು, ಮುಂದಿನ 5 ದಿನಗಳ ಕಾಲ ತಾಪಮಾನ ತೀವ್ರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ವಾಯುವ್ಯ ಮತ್ತು ಪೂರ್ವ ಭಾರತದಲ್ಲಿ ತೀವ್ರತರವಾದ ಉಷ್ಣ ಅಲೆ ಬೀಸುತ್ತಿದ್ದು, ಮುಂದಿನ ಐದು ದಿನಗಳಲ್ಲಿ ತಾಪಮಾನವು ಎರಡರಿಂದ ಮೂರು ಡಿಗ್ರಿಗಳಷ್ಟು ಹೆಚ್ಚಾಗುತ್ತದೆ. ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳು ಉಷ್ಣ ಅಲೆ ತತ್ತರಿಸಿದ್ದು, ಇಲ್ಲಿ ಹೀಟ್ ವೇವ್ ಗೆ ಸಾಕಷ್ಟು ಸಾವುಗಳು ಸಂಭವಿಸಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಭಾರತವು ಅನೇಕ ತೀವ್ರವಾದ ಮತ್ತು ದೀರ್ಘಕಾಲದ ಶಾಖದ ಅಲೆಗಳನ್ನು ಅನುಭವಿಸಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.
"ಮುಂದಿನ ಐದು ದಿನಗಳಲ್ಲಿ ವಾಯುವ್ಯ ಮತ್ತು ಪೂರ್ವ ಭಾರತದಲ್ಲಿ ಉಷ್ಣ ಅಲೆಯಿಂದ ತಾಪಮಾನ ಏರಿಕೆಯಾಗಬಹುದು. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ ಮತ್ತು ಗಂಗಾನದಿ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.