ಖರ್ಗೆ 
ದೇಶ

ಮೋದಿ ಸರ್ಕಾರ 'ಪೇಪರ್ ಲೀಕ್ ಸರ್ಕಾರ': ಯುಜಿಸಿ-ನೆಟ್ ಪರೀಕ್ಷೆ ರದ್ದು ಕುರಿತು ಕಾಂಗ್ರೆಸ್ ವಾಗ್ದಾಳಿ

UGC-NET ಪರೀಕ್ಷೆ ರದ್ದಾದ ನಂತರ ಕಾಂಗ್ರೆಸ್ ಮೋದಿ ಸರ್ಕಾರವನ್ನು "ಪೇಪರ್ ಲೀಕ್ ಸರ್ಕಾರ" ಎಂದು ಕರೆದಿದೆ ಮತ್ತು ಶಿಕ್ಷಣ ಸಚಿವರು ಈಗ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆಯೇ ಎಂದು ಕೇಳಿದೆ.

ನವದೆಹಲಿ: UGC-NET ಪರೀಕ್ಷೆ ರದ್ದಾದ ನಂತರ ಕಾಂಗ್ರೆಸ್ ಮೋದಿ ಸರ್ಕಾರವನ್ನು "ಪೇಪರ್ ಲೀಕ್ ಸರ್ಕಾರ" ಎಂದು ಕರೆದಿದೆ ಮತ್ತು ಶಿಕ್ಷಣ ಸಚಿವರು ಈಗ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆಯೇ ಎಂದು ಕೇಳಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವೈದ್ಯಕೀಯ ಪ್ರವೇಶ ಪರೀಕ್ಷೆ NEET ನಲ್ಲಿನ ಅಕ್ರಮಗಳ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು "ನೀಟ್ ಪರೀಕ್ಷೆಯನ್ನು ಯಾವಾಗ ನಡೆಸುತ್ತಾರೆ" ಎಂದು ಕೇಳಿದ್ದಾರೆ.

ಶಿಕ್ಷಣ ಸಚಿವಾಲಯ ಯುಜಿಸಿ-ನೆಟ್ ಪರೀಕ್ಷೆ ರದ್ದುಗೊಳಿಸಿ ಆದೇಶಿಸಿದ ನಂತರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಹೊಣೆಗಾರಿಕೆ ಪ್ರಶ್ನಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಖರ್ಗೆ, ನರೇಂದ್ರ ಮೋದಿ ಅವರೇ, ನೀವು ಪರೀಕ್ಷೆಗಳ ಬಗ್ಗೆ ಸಾಕಷ್ಟು ಚರ್ಚಿಸುತ್ತೀರಿ, ಆದರೆ ನೀವು ಯಾವಾಗ 'ನೀಟ್ ಪರೀಕ್ಷಾ ಪೇ ಚರ್ಚಾ' ನಡೆಸುತ್ತೀರಿ. ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸುವುದು ಲಕ್ಷಾಂತರ ವಿದ್ಯಾರ್ಥಿಗಳ ಗೆಲುವಾಗಿದೆ ಎಂದಿದ್ದಾರೆ.

"ಇದು ಮೋದಿ ಸರ್ಕಾರದ ದುರಹಂಕಾರದ ಸೋಲು, ಇದರಿಂದಾಗಿ ಅವರು ನಮ್ಮ ಯುವ ಜನತೆಯ ಭವಿಷ್ಯವನ್ನು ತುಳಿಯುವ ಹೇಯ ಪ್ರಯತ್ನವನ್ನು ಮಾಡಿದ್ದಾರೆ. NEET ಪರೀಕ್ಷೆಯಲ್ಲಿ ಯಾವುದೇ ಪೇಪರ್ ಸೋರಿಕೆಯಾಗಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವರು ಮೊದಲು ಹೇಳುತ್ತಾರೆ. ಆದರೆ ಬಿಹಾರ, ಗುಜರಾತ್ ಮತ್ತು ಹರಿಯಾಣದಲ್ಲಿ ಶಿಕ್ಷಣ ಮಾಫಿಯಾದವರನ್ನು ಬಂಧಿಸಿದಾಗ "ಏನೋ ಹಗರಣ" ನಡೆದಿದೆ ಎಂದು ಸಚಿವರು ಒಪ್ಪಿಕೊಳ್ಳುತ್ತಾರೆ. NEET ಪರೀಕ್ಷೆಯನ್ನು ಯಾವಾಗ ರದ್ದುಗೊಳಿಸಲಾಗುತ್ತದೆ ಎಂದು ಕೇಳಿದ್ದು, ನೀಟ್ ಪರೀಕ್ಷೆಯಲ್ಲೂ ಪೇಪರ್ ಸೋರಿಕೆ ಮತ್ತು ಸರ್ಕಾರದ ಗೊಂದಲ ತಡೆಯುವ ಜವಾಬ್ದಾರಿಯನ್ನು ಮೋದಿ ಅವರು ತೆಗೆದುಕೊಳ್ಳಲಿ ಎಂದಿದ್ದಾರೆ.

ಮತ್ತೊಂದೆದೆ ಮೋದಿ ಸರ್ಕಾರ ಯುವಜನರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಜೂನ್ 18ರಂದು UGC-NET ಪರೀಕ್ಷೆಯನ್ನು ದೇಶದ ವಿವಿಧ ನಗರಗಳಲ್ಲಿ ನಡೆಸಲಾಗಿತ್ತು. ಪೇಪರ್ ಸೋರಿಕೆಯ ಶಂಕೆಯಿಂದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಮೊದಲು NEET ಪತ್ರಿಕೆ ಸೋರಿಕೆಯಾಗಿತ್ತು. ಈಗ UGC-NET ಪತ್ರಿಕೆ ಸೋರಿಕೆಯಾಗಿದ್ದು, ಮೋದಿ ಸರ್ಕಾರವು 'ಪೇಪರ್ ಲೀಕ್ ಸರ್ಕಾರ' ಎಂದು ವಾಗ್ದಾಳಿ ನಡೆಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT