ಸಚಿವೆ ಅತಿಶಿ 
ದೇಶ

ರಾಷ್ಟ್ರ ರಾಜಧಾನಿಗೆ ನೀರು ಹರಿಸುತ್ತಿದ್ದ ಬ್ಯಾರೇಜ್ ನ ಗೇಟ್ ಗಳನ್ನು ಮುಚ್ಚಿದ ಹರಿಯಾಣ: ಉಪವಾಸ ಸತ್ಯಾಗ್ರಹ ಮುಂದುವರಿಕೆ- ಅತಿಶಿ

ದೆಹಲಿಗೆ ನೀರು ಹರಿಸುತ್ತಿದ್ದ ಹತ್ನಿಕುಂಡ್ ಬ್ಯಾರೇಜ್ ನ ಎಲ್ಲಾ ಗೇಟ್ ಗಳನ್ನು ಹರಿಯಾಣ ಸರ್ಕಾರ ಮುಚ್ಚಿದ್ದು, ಇದರ ವಿರುದ್ಧ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುವುದಾಗಿ ದೆಹಲಿ ಜಲ ಸಚಿವೆ ಅತಿಶಿ ಹೇಳಿದ್ದಾರೆ.

ನವದೆಹಲಿ: ದೆಹಲಿಗೆ ನೀರು ಹರಿಸುತ್ತಿದ್ದ ಹತ್ನಿಕುಂಡ್ ಬ್ಯಾರೇಜ್ ನ ಎಲ್ಲಾ ಗೇಟ್ ಗಳನ್ನು ಹರಿಯಾಣ ಸರ್ಕಾರ ಮುಚ್ಚಿದ್ದು, ಇದರ ವಿರುದ್ಧ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುವುದಾಗಿ ದೆಹಲಿ ಜಲ ಸಚಿವೆ ಅತಿಶಿ ಹೇಳಿದ್ದಾರೆ.

ತೀವ್ರ ನೀರಿನ ಸಮಸ್ಯೆಯಿಂದ ಕಂಗೆಟ್ಟಿರುವ ದೆಹಲಿಗೆ ನೀರು ಹರಿಸುವಂತೆ ಆಗ್ರಹಿಸಿ ಸಚಿವೆ ಅತಿಶಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಸಂದೇಶ ನೀಡಿರುವ ಅತಿಶಿ, ದೆಹಲಿ ಪಾಲಿನ ನೀರಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ. ಹರಿಯಾಣ ಸರ್ಕಾರ 100 ಎಂಜಿಡಿ ಕೊರತೆಯಷ್ಟು ನೀರನ್ನು ಹರಿಸುತ್ತಿರುವುದರಿಂದ ದೆಹಲಿಯ 28 ಲಕ್ಷ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹತ್ನಿಕುಂಡ್ ಬ್ಯಾರೇಜ್ ನೀರಿನಿಂದ ತುಂಬಿದೆ. ಆದರೆ, ದೆಹಲಿಗೆ ನೀರು ತಲುಪಬಾರದೆಂಬ ಉದ್ದೇಶದಿಂದ ಬ್ಯಾರೇಜ್ ನ ಎಲ್ಲ ಬಾಗಿಲುಗಳನ್ನು ಮುಚ್ಚಲಾಗಿದೆ ಎಂದು ಕೆಲವು ಪತ್ರಕರ್ತರು ಹೇಳಿರುವುದಾಗಿ ಅವರು ತಿಳಿಸಿದ್ದಾರೆ. ದೆಹಲಿ ಪಾಲಿನ ನೀರು ಪಡೆಯುವವರೆಗೂ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುವುದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!