ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ online desk
ದೇಶ

ಮಹಾಯುತಿಯಿಂದ ಅಜಿತ್ ಪವಾರ್ ನ್ನು ಕೈಬಿಡಿ: ಬಿಜೆಪಿ ನಾಯಕನ ಆಗ್ರಹ!

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದಲ್ಲಿ ಅಪಸ್ವರವೆದ್ದಿರುವ ಲಕ್ಷಣಗಳು ಗೋಚರಿಸುತ್ತಿವೆ.

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದಲ್ಲಿ ಅಪಸ್ವರವೆದ್ದಿರುವ ಲಕ್ಷಣಗಳು ಗೋಚರಿಸುತ್ತಿವೆ.

ಮಹಾರಾಷ್ಟ್ರದ ಪುಣೆಯ ಶಿರೂರ್ ನ ಬಿಜೆಪಿ ಪದಾಧಿಕಾರಿಯೊಬ್ಬರು ಡಿಸಿಎಂ ಅಜಿತ್ ಪವಾರ್ ಹಾಗೂ ಅವರ ನೇತೃತ್ವದ ಎನ್ ಸಿಪಿಯನ್ನು ಆಡಳಿತಾರೂಢ ಮೈತ್ರಿಯಿಂದ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

ಶಿರೂರ್ ತಹಶೀಲ್ ನ ಉಪಾಧ್ಯಕ್ಶ್ಜಸುದರ್ಶನ್ ಚೌಧರಿ ಪಕ್ಷದ ಸಭೆಯಲ್ಲಿ ಈ ಮನವಿ ಮಾಡಿದ್ದು, ಇದರ ವಿಡಿಯೋ ವೈರಲ್ ಆಗತೊಡಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎನ್ ಸಿಪಿ ತೀವ್ರ ಆಕ್ರೋಶ ಹೊರಹಾಕಿದ್ದು, ಎನ್ ಸಿಪಿ ಕಾರ್ಯಕರ್ತರು ಬಿಜೆಪಿ ಪದಾಧಿಕಾರಿಯನ್ನು ಸುತ್ತುವರೆದು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.

"ಇದು ನಿಮಗೆ ಸಲಹೆಯಾಗಿದೆ. ಪಕ್ಷದ ಕಾರ್ಯಕರ್ತರು ಏನು ಯೋಚಿಸುತ್ತಿದ್ದಾರೆ ಎಂಬುದನ್ನು ಆಲಿಸಿ. ನೀವು ನಿಜವಾಗಿಯೂ ನಿರ್ಧಾರ ತೆಗೆದುಕೊಳ್ಳಲು ಬಯಸಿದರೆ, ಅಜಿತ್ ಪವಾರ್ ಅವರನ್ನು ಮಹಾಯುತಿ (ಆಡಳಿತದ ಮೈತ್ರಿ) ನಿಂದ ತೆಗೆದುಹಾಕಿ," ಎಂದು ಚೌಧರಿ ವೀಡಿಯೊದಲ್ಲಿ ಬಿಜೆಪಿ ನಾಯಕತ್ವಕ್ಕೆ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: 'ಉದರನಿಮಿತ್ತಂ ಬಹುಕೃತ ವೇಷಂ' ಕರ್ನಾಟಕ ನನ್ನ ಕರ್ಮ ಭೂಮಿ- ಅನಂತ್ ನಾಗ್ ಭಾವುಕ ಮಾತು!

ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ!

ಅಕ್ರಮ ಆಸ್ತಿ ಗಳಿಕೆ: ರಾಜ್ಯಾದ್ಯಂತ ಎಂಟು ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ, ಒಟ್ಟು 29.61 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ!

ಪಶ್ಚಿಮ ಬಂಗಾಳ ಪ್ರವೇಶಿಸಲು ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಹಾಯ: ಭಾರತೀಯ ಯೋಧನ ಬಂಧನ