ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಭಾರಿ ಹಿಮಪಾತದ ನಂತರ ಹಿಮದಿಂದ ಆವೃತವಾದ ಪ್ರದೇಶದಲ್ಲಿ ಛತ್ರಿ ಹಿಡಿದು ನಡೆಯುತ್ತಿರುವ ಜನರು.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಭಾರಿ ಹಿಮಪಾತದ ನಂತರ ಹಿಮದಿಂದ ಆವೃತವಾದ ಪ್ರದೇಶದಲ್ಲಿ ಛತ್ರಿ ಹಿಡಿದು ನಡೆಯುತ್ತಿರುವ ಜನರು. 
ದೇಶ

ಜಮ್ಮು ಮತ್ತು ಕಾಶ್ಮೀರ: ರಿಯಾಸಿಯಲ್ಲಿ ಭಾರಿ ಮಳೆಗೆ ಮನೆ ಕುಸಿದು ಮಹಿಳೆ, ಮೂವರು ಪುತ್ರಿಯರ ಸಾವು

Ramyashree GN

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಗುಡಿಸಲು ಕುಸಿದು ಬಿದ್ದ ಪರಿಣಾಮ ಮಹಿಳೆ ಮತ್ತು ಅವರ ಎರಡು ಮತ್ತು ಐದು ವರ್ಷದೊಳಗಿನ ಮೂವರು ಪುತ್ರಿಯರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಮಾರ್ಚ್ 1 ಮತ್ತು 2 ರಂದು ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದೆ.

ಜಮ್ಮು ಪ್ರದೇಶದ ವಿವಿಧ ಭಾಗಗಳಲ್ಲಿ ಬಲವಾದ ಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ವಸತಿ ಗೃಹಗಳು ಸೇರಿದಂತೆ ಹತ್ತಾರು ಕಟ್ಟಡಗಳು ಹಾನಿಗೊಳಗಾಗಿವೆ.

ರಿಯಾಸಿ ಜಿಲ್ಲೆಯ ಚಸ್ಸಾನಾ ತಹಸಿಲ್‌ನ ಕುಂದರ್‌ಧನ್ ಮೊಹ್ರಾ ಗ್ರಾಮದಲ್ಲಿ ಭಾರಿ ಮಳೆಯ ನಂತರ ಮನೆ ಕುಸಿದು ಫಲ್ಲಾ ಅಖ್ತರ್ (30), ಅವರ ಪುತ್ರಿಯರಾದ ನಸೀಮಾ (5), ಸಫೀನಾ ಕೌಸರ್ (3) ಮತ್ತು ಸಮ್ರೀನ್ ಕೌಸರ್ (2) ಎಂಬುವವರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಕುಟುಂಬದ ಇಬ್ಬರು ಹಿರಿಯ ಸದಸ್ಯರಾದ ಕಾಲು (60) ಮತ್ತು ಅವರ ಪತ್ನಿ ಬಾನೋ ಬೇಗಂ (58) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅವರು ಹೇಳಿದರು.

SCROLL FOR NEXT