ರಾಹುಲ್ ಗಾಂಧಿ 
ದೇಶ

ಮುಚ್ಚಿರುವ ಉದ್ಯೋಗದ ಬಾಗಿಲನ್ನು ಯುವಕರಿಗೆ ಇಂಡಿಯಾ ಮೈತ್ರಿಕೂಟ ತೆರೆಯುತ್ತದೆ: ರಾಹುಲ್ ಗಾಂಧಿ

'ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವ' ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದು, ಯುವಕರಿಗೆ ಮುಚ್ಚಿರುವ ಉದ್ಯೋಗಗಳ ಬಾಗಿಲು ತೆರೆಯುವುದು ಇಂಡಿಯಾ ಮೈತ್ರಿಕೂಟದ ಬಣದ ಸಂಕಲ್ಪವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ನವದೆಹಲಿ: 'ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವ' ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದು, ಯುವಕರಿಗೆ ಮುಚ್ಚಿರುವ ಉದ್ಯೋಗಗಳ ಬಾಗಿಲು ತೆರೆಯುವುದು ಇಂಡಿಯಾ ಮೈತ್ರಿಕೂಟದ ಬಣದ ಸಂಕಲ್ಪವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಉದ್ಯೋಗ ನೀಡುವುದು ಪ್ರಧಾನಿ ಮೋದಿಯವರ ಉದ್ದೇಶವಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್‌ ಮಾಡಿರುವ ಅವರು, 'ದೇಶದ ಯುವಕರೇ, ಒಂದು ವಿಷಯವನ್ನು ಗಮನಿಸಿ! ನರೇಂದ್ರ ಮೋದಿಯವರ ಉದ್ದೇಶ ಉದ್ಯೋಗ ನೀಡುವುದಲ್ಲ. ಹೊಸ ಹುದ್ದೆಗಳನ್ನು ಸೃಷ್ಟಿಸುವುದರಿಂದ ದೂರ ಉಳಿದಿರುವ ಅವರು, ಕೇಂದ್ರ ಸರ್ಕಾರದ ಖಾಲಿ ಹುದ್ದೆಗಳ ಮೇಲೂ ಕುಳಿತಿದ್ದಾರೆ' ಎಂದು ಆರೋಪಿಸಿದ್ದಾರೆ.

'ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಅಂಕಿಅಂಶಗಳನ್ನು ಪರಿಗಣಿಸಿದರೆ, 78 ಇಲಾಖೆಗಳಲ್ಲಿ 9,64,000 ಹುದ್ದೆಗಳು ಖಾಲಿ ಇವೆ. ನಾವು ಪ್ರಮುಖ ಇಲಾಖೆಗಳನ್ನು ಮಾತ್ರ ನೋಡಿದರೆ, ರೈಲ್ವೆಯಲ್ಲಿ 2.93 ಲಕ್ಷ, ಗೃಹ ಸಚಿವಾಲಯದಲ್ಲಿ 1.43 ಲಕ್ಷ ಮತ್ತು ರಕ್ಷಣಾ ಸಚಿವಾಲಯದಲ್ಲಿ 2.64 ಲಕ್ಷ ಹುದ್ದೆಗಳು ಖಾಲಿ ಇವೆ' ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

15 ಪ್ರಮುಖ ಇಲಾಖೆಗಳಲ್ಲಿ ಶೇ 30ಕ್ಕಿಂತ ಹೆಚ್ಚು ಹುದ್ದೆಗಳು ಏಕೆ ಖಾಲಿ ಇವೆ ಎಂಬುದಕ್ಕೆ ಕೇಂದ್ರ ಸರ್ಕಾರದ ಬಳಿ ಉತ್ತರವಿದೆಯೇ. ‘ಸುಳ್ಳು ಭರವಸೆಗಳ ಚೀಲ’ವನ್ನು ಹೊತ್ತಿರುವ ಪ್ರಧಾನಿಯವರ ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಮುಖ ಹುದ್ದೆಗಳು ಏಕೆ ಖಾಲಿಯಾಗಿವೆ? ಎಂದು ಪ್ರಶ್ನಿಸಿದ್ದಾರೆ.

ಕಾಯಂ ಉದ್ಯೋಗ ನೀಡುವುದನ್ನು ಹೊರೆ ಎಂದು ಪರಿಗಣಿಸಿರುವ ಬಿಜೆಪಿ ಸರ್ಕಾರ ಗುತ್ತಿಗೆ ಪದ್ಧತಿಗೆ ನಿರಂತರವಾಗಿ ಉತ್ತೇಜನ ನೀಡುತ್ತಿದ್ದು, ಅಲ್ಲಿ ಭದ್ರತೆ, ಗೌರವ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಖಾಲಿ ಇರುವ ಹುದ್ದೆಗಳು ದೇಶದ ಯುವಕರ ಹಕ್ಕಾಗಿದ್ದು, ಅವುಗಳನ್ನು ಭರ್ತಿ ಮಾಡಲು ಸಮಗ್ರ ಯೋಜನೆ ಸಿದ್ಧಪಡಿಸಿದ್ದೇವೆ. ನಾವು ಯುವಕರಿಗೆ ಮುಚ್ಚಿರುವ ಉದ್ಯೋಗದ ಬಾಗಿಲುಗಳನ್ನು ತೆರೆಯುವುದೇ ಇಂಡಿಯಾ ಮೈತ್ರಿಕೂಟದ ಸಂಕಲ್ಪವಾಗಿದೆ. ಯುವಕರ ಭವಿಷ್ಯ ನಿರುದ್ಯೋಗದ ಕತ್ತಲನ್ನು ಭೇದಿಸಿ ಸೂರ್ಯೋದಯವನ್ನು ಕಾಣಲಿದೆ ಎಂದರು.

ರಾಹುಲ್ ಗಾಂಧಿಯವರ ಪೋಸ್ಟ್ ಅನ್ನು ಟ್ಯಾಗ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಖಾಲಿ ಇರುವ ಪ್ರತಿಯೊಂದು ಸರ್ಕಾರಿ ಕೆಲಸವು ವಿದ್ಯಾವಂತ, ಉದ್ಯೋಗಾಕಾಂಕ್ಷಿ ಯುವಕರಿಗೆ ಆಗಿರುವ ಅನ್ಯಾಯ ಮಾತ್ರವಲ್ಲ, ಆದರೆ ಮೋದಿ ಸರ್ಕಾರದ 'ವೈಫಲ್ಯ' ಎಂದು ಹೇಳಿದ್ದಾರೆ.

ಶಿಕ್ಷಕರಿಲ್ಲದ ತರಗತಿ, ಸೂಕ್ತ ನಿರ್ವಹಣೆ ಇಲ್ಲದ ರಸ್ತೆ, ನರ್ಸ್ ಇಲ್ಲದ ಆಸ್ಪತ್ರೆ, ನಿರ್ವಾಹಕರಿಲ್ಲದೆ ರೈಲ್ವೆ ಕ್ರಾಸಿಂಗ್‌ನಂತಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಸರ್ಕಾರದ ವೈಶಿಷ್ಟ್ಯವೆಂದರೆ ಅದು ತನ್ನ ಎಲ್ಲಾ ಜವಾಬ್ದಾರಿಗಳನ್ನು ಪೂರೈಸುತ್ತದೆ. 10 ಲಕ್ಷ ಖಾಲಿ ಹುದ್ದೆಗಳಿರುವ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ’ ಎಂದು ರಮೇಶ್ ಹೇಳಿದರು.

ಭರ್ತಿ ಮಾಡದ ಪ್ರತಿಯೊಂದು ಸರ್ಕಾರಿ ಹುದ್ದೆಗಳು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಕುಟುಂಬಗಳನ್ನು ಉತ್ತಮ ಗುಣಮಟ್ಟದ ಉದ್ಯೋಗದಿಂದ ವಂಚಿತರನ್ನಾಗಿಸುತ್ತದೆ ಎಂದು ರಮೇಶ್ ಹೇಳಿದರು.

ಕಾಂಗ್ರೆಸ್‌ನ 'ಯುವ ನ್ಯಾಯ' ಕಾರ್ಯಕ್ರಮವು ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತದೆ, ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಬಲಪಡಿಸುತ್ತದೆ, ವಿದ್ಯಾವಂತ ಮತ್ತು ಮಹತ್ವಾಕಾಂಕ್ಷೆಯ ಯುವಕರಿಗೆ ಉದ್ಯೋಗಗಳನ್ನು ಒದಗಿಸುತ್ತದೆ ಮತ್ತು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT