ಸೆಣಿಬಿನ ಬೆಂಬಲ ಬೆಲೆ ಹೆಚ್ಚಳ
ಸೆಣಿಬಿನ ಬೆಂಬಲ ಬೆಲೆ ಹೆಚ್ಚಳ 
ದೇಶ

ರೈತರಿಗೆ ಸಿಹಿಸುದ್ದಿ: ಸೆಣಬಿನ ಬೆಂಬಲ ಬೆಲೆ ಹೆಚ್ಚಳ, ಕೇಂದ್ರ ಸಂಪುಟ ಸಭೆ ಮಹತ್ವದ ನಿರ್ಧಾರ!

Srinivasamurthy VN

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕೇಂದ್ರದ ಮೋದಿ ಸರ್ಕಾರ ಸೆಣಿಬಿನ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು, ಸಚಿವ ಸಂಪುಟ ಸಭೆಯಲ್ಲಿ (Union Cabinet Meeting) ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಹೌದು.. ಕೇಂದ್ರ ಸರ್ಕಾರವು (Central Government) ಸೆಣಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ್ದು, ಕಚ್ಚಾ ಸೆಣಬಿಗೆ (Raw Jute) 285 ರೂಪಾಯಿ ಕನಿಷ್ಠ ಬೆಂಬಲ ಬೆಲೆ (MSP For Raw Jute) ಘೋಷಿಸಿದೆ. ಕೇಂದ್ರ ಸರ್ಕಾರವು 2024-25ನೇ ಹಣಕಾಸು ವರ್ಷಕ್ಕಾಗಿ ಬೆಂಬಲ ಬೆಲೆ ಹೆಚ್ಚಿಸಲಾಗಿದ್ದು, ಇದರಿಂದಾಗಿ ಸೆಣಬು ಬೆಳೆಯುವ ರೈತರು ಲಾಭ ಪಡೆಯಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕಚ್ಚಾ ಸೆಣಬಿನ ಬೆಂಬಲ ಬೆಲೆಯನ್ನು ಹೆಚ್ಚಿಸಿದ್ದು, ಒಂದು ಕ್ವಿಂಟಾಲ್‌ಗೆ 285 ರೂ. ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಇದರೊಂದಿಗೆ ಒಂದು ಕ್ವಿಂಟಾಲ್ ಕಚ್ಚಾ ಸೆಣಬಿಗೆ ಸಿಗುವ ಬೆಂಬಲ ಬೆಲೆಯು 5,335 ರೂಪಾಯಿ ಆಗಿದೆ. ಇದುವರೆಗೆ ಕ್ವಿಂಟಾಲ್‌ ಕಚ್ಚಾ ಸೆಣಬಿಗೆ 5,050 ರೂಪಾಯಿ ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿತ್ತು. ಈಗ ಬೆಂಬಲ ಬೆಲೆಯನ್ನು ಶೇ.5.6ರಷ್ಟು ಬೆಂಬಲ ಬೆಲೆಯನ್ನು ಏರಿಕೆ ಮಾಡಲಾಗಿದೆ.

ಸೆಣಬು ಬೆಂಬಲ ಬೆಲೆ ಹೆಚ್ಚಳ

ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಕುರಿತು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. “ಕಚ್ಚಾ ಸೆಣಬಿಗೆ ಬೆಂಬಲ ಬೆಲೆ ಏರಿಕೆ ಮಾಡಿರುವುದರಿಂದ ನೇರವಾಗಿ 40 ಲಕ್ಷ ರೈತರ ಕುಟುಂಬಗಳಿಗೆ ಅನುಕೂಲವಾಗಲಿದೆ. ಸೆಣಬು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ 5 ಲಕ್ಷ ಕಾರ್ಮಿಕರಿಗೂ ಕೇಂದ್ರ ಸರ್ಕಾರದ ನಿರ್ಧಾರದಿಂದ ಅನುಕೂಲವಾಗಲಿದೆ” ಎಂಬುದಾಗಿ ವಿವರಿಸಿದರು.

ಅಂದಹಾಗೆ ದೇಶದಲ್ಲಿ ಪಶ್ಚಿಮ ಬಂಗಾಳದಲ್ಲಿ ಅತೀ ಹೆಹೆಚ್ಚು ಸೆಣಬು ಬೆಳೆಯಲಾಗುತ್ತದೆ. ಕರ್ನಾಟಕದಲ್ಲೂ ಸೆಣಬು ಬೆಳೆಯುವ ರೈತರಿದ್ದಾರೆ.

SCROLL FOR NEXT