ಮಹಿಳಾ ಸಮ್ಮಾನ್ ಸಮರೋಹ್ ಕಾರ್ಯಕ್ರಮದಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್. 
ದೇಶ

‘ನಿಮ್ಮ ಗಂಡಂದಿರು ಮೋದಿ ಎಂದು ಜಪಿಸಿದರೆ ಊಟ ಬಡಿಸಬೇಡಿ’: ಮಹಿಳಾ ಮತದಾರರಿಗೆ ಅರವಿಂದ್ ಕೇಜ್ರಿವಾಲ್

ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಜಪಿಸಿದರೆ ನಿಮ್ಮ ಪತಿಗೆ ಊಟ ಬಡಿಸಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಮಹಿಳಾ ಮತದಾರರಿಗೆ ಮನವಿ ಮಾಡಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಜಪಿಸಿದರೆ ನಿಮ್ಮ ಪತಿಗೆ ಊಟ ಬಡಿಸಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಮಹಿಳಾ ಮತದಾರರಿಗೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ 'ಮಹಿಳಾ ಸಮ್ಮಾನ್ ಸಮರೋಹ್' ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಅನೇಕ ಪುರುಷರು ಪ್ರಧಾನಿ ಮೋದಿಯವರ ಹೆಸರನ್ನು ಜಪಿಸುತ್ತಿದ್ದಾರೆ. ಆದರೆ, ನೀವು ಅವರನ್ನು ಸರಿಪಡಿಸಬೇಕು. ನಿಮ್ಮ ಪತಿ ಮೋದಿಯವರ ಹೆಸರನ್ನು ಜಪಿಸಿದರೆ, ನೀವು ಅವರಿಗೆ ಊಟ ನೀಡುವುದಿಲ್ಲ ಎಂದು ಹೇಳಿ' ಎಂದರು.

ಸರ್ಕಾರವು ತನ್ನ 2024-25ರ ಬಜೆಟ್‌ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ಮಾಸಿಕ 1,000 ರೂ.ಗಳನ್ನು ಒದಗಿಸುವ ಯೋಜನೆಯನ್ನು ಘೋಷಿಸಿದ ನಂತರ ಮಹಿಳೆಯರೊಂದಿಗೆ ಸಂವಾದ ನಡೆಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವುದಾಗಿ ನಿಮ್ಮ ಕುಟುಂಬ ಸದಸ್ಯರು ನಿಮ್ಮ ಮೇಲೆ ಪ್ರಮಾಣ ಮಾಡುವಂತೆ ಕೇಳಿ ಎಂದು ಅರವಿಂದ್ ಕೇಜ್ರಿವಾಲ್ ಅವರು ಮಹಿಳೆಯರಿಗೆ ಹೇಳಿದರು. ಬಿಜೆಪಿಯನ್ನು ಬೆಂಬಲಿಸುವ ಇತರ ಮಹಿಳೆಯರಿಗೆ 'ನಿಮ್ಮ ಸಹೋದರ ಕೇಜ್ರಿವಾಲ್ ಮಾತ್ರ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ' ಎಂದು ಹೇಳುವಂತೆ ಹೇಳಿದರು.

'ನಾನು ಅವರಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದ್ದೇನೆ. ಅವರ ಬಸ್ ಟಿಕೆಟ್ ಉಚಿತ ಮಾಡಿದ್ದೇನೆ ಎಂದು ಹೇಳಿ. ಇದರೊಂದಿಗೆ ಈಗ ನಾನು ಪ್ರತಿ ತಿಂಗಳು ಮಹಿಳೆಯರಿಗೆ 1,000 ರೂ.ಗಳನ್ನು ನೀಡುತ್ತಿದ್ದೇನೆ. ಆದರೆ, ಬಿಜೆಪಿ ಅವರಿಗೆ ಏನು ಮಾಡಿದೆ? ಬಿಜೆಪಿಗೆ ಏಕೆ ಮತ ಹಾಕಬೇಕು? ಈ ಬಾರಿ ಕೇಜ್ರಿವಾಲ್‌ಗೆ ಮತ ಹಾಕಿ ಎಂದು ಹೇಳುವಂತೆ ಹೇಳಿದರು.

'ಮಹಿಳಾ ಸಬಲೀಕರಣದ ಹೆಸರಿನಲ್ಲಿ ಇಲ್ಲಿಯವರೆಗೆ ವಂಚನೆ ಮಾಡಲಾಗುತ್ತಿದೆ. ಕೆಲ ಪಕ್ಷಗಳು ಮಹಿಳೆಗೆ ಒಂದಷ್ಟು ಹುದ್ದೆ ನೀಡಿ ಮಹಿಳಾ ಸಬಲೀಕರಣ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಮಹಿಳೆಯರಿಗೆ ಹುದ್ದೆಗಳು ಬೇಡ ಎಂದು ನಾನು ಹೇಳುತ್ತಿಲ್ಲ. ಅವರಿಗೂ ದೊಡ್ಡ ಹುದ್ದೆ, ಟಿಕೇಟ್ ಎಲ್ಲ ಸಿಗಬೇಕು. ಆದರೆ ಇದರಿಂದ ಕೇವಲ ಎರಡ್ಮೂರು ಮಹಿಳೆಯರಿಗೆ ಮಾತ್ರ ಲಾಭವಾಗುತ್ತದೆ. ಉಳಿದ ಮಹಿಳೆಯರಿಗೆ ಏನು ಸಿಗುತ್ತದೆ?' ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ತಮ್ಮ ಸರ್ಕಾರದ ಅಡಿಯಲ್ಲಿ ಹೊಸ ಯೋಜನೆಯಾದ 'ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ'ಯು ನಿಜವಾದ ಸಬಲೀಕರಣವನ್ನು ತರುತ್ತದೆ. ಹಣವಿದ್ದಾಗ ಸಬಲೀಕರಣವಾಗುತ್ತದೆ. ಪ್ರತಿ ಮಹಿಳೆಗೆ ಪ್ರತಿ ತಿಂಗಳು 1000 ರೂ. ಸಿಕ್ಕಾಗ ನಿಜವಾದ ಸಬಲೀಕರಣವಾಗುತ್ತದೆ. ಇಡೀ ವಿಶ್ವದಲ್ಲಿ ಈ ಯೋಜನೆಯು 'ಅತಿದೊಡ್ಡ ಮಹಿಳಾ ಸಬಲೀಕರಣ ಕಾರ್ಯಕ್ರಮ'ವಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT