ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಫುಟಿನ್, ಪ್ರಧಾನಿ ಮೋದಿ 
ದೇಶ

ಉಕ್ರೇನ್ ಮೇಲಿನ ರಷ್ಯಾದ ‘ಸಂಭಾವ್ಯ ಪರಮಾಣು’ ದಾಳಿ ತಪ್ಪಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ಕಾರಣ- ವರದಿಗಳು

ಉಕ್ರೇನ್‌ನೊಂದಿಗಿನ 2022ರ ಸಂಘರ್ಷದ ಸಂದರ್ಭದಲ್ಲಿ ರಷ್ಯಾ ಪರಮಾಣು ಕ್ರಮ ಕೈಗೊಳ್ಳದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆ ತಡೆಯಿತು ಎಂದು ಸಿಎನ್‌ಎನ್ ವರದಿ ತಿಳಿಸಿದೆ.

ನವದೆಹಲಿ: ಉಕ್ರೇನ್‌ನೊಂದಿಗಿನ 2022ರ ಸಂಘರ್ಷದ ಸಂದರ್ಭದಲ್ಲಿ ರಷ್ಯಾ ಪರಮಾಣು ಕ್ರಮ ಕೈಗೊಳ್ಳದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆ ತಡೆಯಿತು ಎಂದು ಸಿಎನ್‌ಎನ್ ವರದಿ ತಿಳಿಸಿದೆ.

2022 ರ ಕೊನೆಯಲ್ಲಿ, ಉಕ್ರೇನ್ ವಿರುದ್ಧ ಮಾಸ್ಕೋದಿಂದ ಸಂಭಾವ್ಯ ಪರಮಾಣು ದಾಳಿಗೆ ಯುಎಸ್ "ಕಠಿಣ ತಯಾರಿ" ಪ್ರಾರಂಭಿಸಿತು. ಏಕೆಂದರೆ ರಷ್ಯಾ ಯುದ್ಧತಂತ್ರದ ಅಥವಾ ಯುದ್ಧಭೂಮಿ ಪರಮಾಣು ಅಸ್ತ್ರವನ್ನು ಬಳಸಬಹುದೆಂದು ಬಿಡೆನ್ ಆಡಳಿತ ಕಳವಳಗೊಂಡಿತ್ತು ಎಂದು ಇಬ್ಬರು ಹಿರಿಯ ಅಧಿಕಾರಿಗಳು ಸಿಎನ್‌ಎನ್‌ಗೆ ತಿಳಿಸಿದ್ದಾರೆ ಎಂದು ವರದಿ ಹೇಳಿದೆ. ಕೆಲವು ಹಿರಿಯ ಅಧಿಕಾರಿಗಳ ಪ್ರಕಾರ ಪ್ರಧಾನಿ ಮೋದಿ ಇಲ್ಲದಿದ್ದರೆ, ರಷ್ಯಾ ಉಕ್ರೇನ್ ಮೇಲೆ ಪರಮಾಣು ದಾಳಿ ನಡೆಸುವ ಸಾಧ್ಯತೆಯಿತ್ತು. ರಷ್ಯಾ 2022 ರಲ್ಲಿ ಕೈವ್ ವಿರುದ್ಧ ಸಂಭಾವ್ಯ ಪರಮಾಣು ದಾಳಿಗೆ ತಯಾರಿ ನಡೆಸಿತ್ತು ಎಂದು ವರದಿ ಹೇಳುತ್ತದೆ.

ಅದು ಸಂಭವಿಸಿದಲ್ಲಿ ಪರಿಣಾಮ ಭೀಕರವಾಗುತ್ತಿತ್ತು. 1945 ರಲ್ಲಿ ಹಿರೋಷಿಮಾ ಮತ್ತು ನಾಗಾಸಾಕಿಯಲ್ಲಿ ಯುಎಸ್ ಪರಮಾಣು ಬಾಂಬ್ ಹಾಕಿದ ನಂತರ ಇದು ಮೊದಲ ಪರಮಾಣು ದಾಳಿಯಾಗುತ್ತಿತ್ತು. ಈ ವಿಪತ್ತನ್ನು ತಡೆಗಟ್ಟುವಲ್ಲಿ ಪ್ರಧಾನಿ ಮೋದಿ ಮತ್ತು ಇತರ ರಾಷ್ಟ್ರಗಳ ಪ್ರಯತ್ನಗಳು ನಿರ್ಣಾಯಕವಾಗಿವೆ. ಬೈಡನ್ ಆಡಳಿತ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಗಂಭೀರವಾಗಿ ಪರಿಣಮಿಸುವ ಪಿಎಂ ಮೋದಿಯಂತಹ ನಾಯಕರನ್ನು ಸಂಪರ್ಕಿಸಿತು ಎಂದು ವರದಿ ತಿಳಿಸಿದೆ.

ಪಿಎಂ ಮೋದಿಯವರ ಪ್ರಭಾವ ಮತ್ತು ಹೇಳಿಕೆಗಳು ದುರಂತವನ್ನು ತಪ್ಪಿಸಲು ಸಹಾಯ ಮಾಡಿದೆ. ಪ್ರಸ್ತುತ ಸಂದರ್ಭ ಯುದ್ಧದಲ್ಲಿ ತೊಡಗಿಸಿಕೊಳ್ಳಲು ಸೂಕ್ತವಲ್ಲ ಎಂದು ಭಾರತ ತನ್ನ ನಿಲುವನ್ನು ವ್ಯಕ್ತಪಡಿಸಿತು.

ಇದಲ್ಲದೆ, ಶಾಂತಿಯುತ ಚರ್ಚೆಗಳು ಮತ್ತು ರಾಜತಾಂತ್ರಿಕ ವಿಧಾನಗಳ ಮೂಲಕ ತಮ್ಮ ಸಂಘರ್ಷಗಳನ್ನು ಪರಿಹರಿಸಲು ರಷ್ಯಾ ಮತ್ತು ಉಕ್ರೇನ್ ಎರಡನ್ನೂ ಭಾರತ ಪ್ರೋತ್ಸಾಹಿಸಿತು.

ವಾಸ್ತವವಾಗಿ, ಇದು ಯುದ್ಧದ ಯುಗವಲ್ಲ ಎಂಬ ಪ್ರಧಾನಿ ಮೋದಿಯವರ ಹೇಳಿಕೆಯನ್ನು 2022 ರಲ್ಲಿ ಬಾಲಿಯಲ್ಲಿ ನಡೆದ G20 ಶೃಂಗಸಭೆಯ ನಂತರ ನಾಯಕರು ತಮ್ಮ ಹೇಳಿಕೆಯಲ್ಲಿ ಹೇಳಿದ್ದರು.

ಪ್ರಧಾನಿ ಮೋದಿ ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳ ಮೂಲಕ ಶಾಂತಿ ಪ್ರಚಾರ ಮಾಡಿದ್ದಾರೆ ಮತ್ತು ಸಂಘರ್ಷದಲ್ಲಿ ನಾಗರಿಕರ ಸಾವನ್ನು ಖಂಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT