ಮುಖ್ಯ ಚುನಾವಣಾ ಆಯುಕ್ತರು ರಾಜೀವ್ ಕುಮಾರ್
ಮುಖ್ಯ ಚುನಾವಣಾ ಆಯುಕ್ತರು ರಾಜೀವ್ ಕುಮಾರ್ TNIE
ದೇಶ

ಈ ಬಾರಿ ಮಾತು ಕಡಿಮೆ, ಕ್ರಮ ಜಾಸ್ತಿ: ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಪಕ್ಷಗಳಿಗೆ EC ಎಚ್ಚರಿಕೆ!

Vishwanath S

ನವದೆಹಲಿ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿರುವ ಕೇಂದ್ರ ಚುನಾವಣಾ ಆಯೋಗ ಈ ಬಾರಿ ಮಾತು ಕಡಿಮೆ, ಕಠಿಣ ಕ್ರಮಗಳು ಹೆಚ್ಚಿರುತ್ತದೆ ಎಂದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.

ನೀತಿ ಸಂಹಿತೆ ಉಲ್ಲಂಘಿಸುವವರು ಆಯೋಗದ ಕಠಿಣ ಪರಿಣಾಮಗಳನ್ನು ಅನುಭವಿಸಲು ಸಿದ್ಧರಾಗಿರಬೇಕು ಎಂದು ಭಾರತ ಚುನಾವಣಾ ಆಯೋಗ ಎಚ್ಚರಿಸಿದೆ.

ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ವಿಫಲವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ವರ್ತಿಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ.

ಕಳೆದ ಬಾರಿ, ಆಯೋಗ ತುಂಬಾ ನೋಟಿಸ್ ನೀಡಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪವಿದೆ. ಆದರೆ ಈ ಬಾರಿ ನಾವು ಎಲ್ಲರಿಗೂ ಎಚ್ಚರಿಕೆ ನೀಡುತ್ತೇವೆ. ನಾವು ಸೂಚನೆ ಮೀರಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ಸೌಜನ್ಯವನ್ನು ಕಾಪಾಡಿಕೊಳ್ಳಬೇಕು . ವೈಯಕ್ತಿಕ ದಾಳಿಯಿಂದ ದೂರವಿರಬೇಕು ಎಂದು ಚುನಾವಣಾ ಸಂಸ್ಥೆ ಎಚ್ಚರಿಸಿದೆ. ರಾಜಕೀಯ ಪಕ್ಷಗಳನ್ನು ಸಂವೇದನೆಯಿಂದ ನಡೆದುಕೊಳ್ಳುವಂತೆ ಕೇಳಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಪಕ್ಷಗಳು ಎಷ್ಟು ಬೇಗ ಶತ್ರುಗಳಾಗುತ್ತಾರೆ ಅಷ್ಟೇ ಬೇಗ ಮಿತ್ರರೂ ಆಗುತ್ತಾರೆ ಎಂದು ಆಯೋಗ ಹೇಳಿದೆ.

ಎಲ್ಲಾ ಸ್ಟಾರ್ ಪ್ರಚಾರಕರಿಗೆ ಎಂಸಿಸಿ ಮಾರ್ಗಸೂಚಿಗಳನ್ನು ಹಸ್ತಾಂತರಿಸಲು ರಾಜಕೀಯ ಪಕ್ಷಗಳಿಗೆ ಸೂಚಿಸಲಾಗಿದೆ. "ದಯವಿಟ್ಟು ನಿಮ್ಮ ಬಾಯಿಂದ ಬರುವ ಕೆಟ್ಟ ಪದಗಳು ಡಿಜಿಟಲ್ ಜಗತ್ತಿನಲ್ಲಿ ನಮೂದಾಗುವುದನ್ನು ತಪ್ಪಿಸಿ" ಎಂದು ಸಿಇಸಿ ಹೇಳಿದೆ.

SCROLL FOR NEXT