ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್ 
ದೇಶ

True caller ವಿರುದ್ಧದ ಪಿಐಎಲ್ ವಜಾಗೊಳಿಸಿದ ದೆಹಲಿ ಹೈಕೋರ್ಟ್

Srinivas Rao BV

ನವದೆಹಲಿ: ದೆಹಲಿ ಹೈಕೋರ್ಟ್ ಬುಧವಾರದಂದು True caller ಕುರಿತ ತನ್ನ ಆದೇಶವನ್ನು ಮರುಪರಿಶೀಲಿಸಲು ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ನ್ನು ವಜಾಗೊಳಿಸಿದೆ. ಪಿಐಎಲ್ ಸಲ್ಲಿಸಿದವರಿಗೆ 10,000 ರೂಪಾಯಿ ವೆಚ್ಚವನ್ನು ಹೈಕೋರ್ಟ್ ವಿಧಿಸಿದೆ. ಜಾಗತಿಕ ಮಟ್ಟದ ಕಾಲರ್ ಐಡಿ ವೇದಿಕೆಯಾಗಿರುವ True caller ನಿಂದ ಜನರ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದು ಪಿಐಎಲ್ ನಲ್ಲಿ ಆರೋಪಿಸಲಾಗಿತ್ತು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪಿಎಸ್ ಅರೋರಾ ಅವರ ಪೀಠ ಫೆಬ್ರವರಿ 12ರ ತನ್ನ ಆದೇಶವನ್ನು ಪರಿಶೀಲಿಸಲು ಯಾವುದೇ ಆಧಾರಗಳನ್ನು ನೀಡಲಾಗಿಲ್ಲ ಎಂದು ಹೇಳಿದೆ. 10,000 ರೂಪಾಯಿ ವೆಚ್ಚವನ್ನು ಕೇಂದ್ರ ಸರ್ಕಾರಕ್ಕೆ ಪಾವತಿ ಮಾಡಬೇಕೆಂದು ನ್ಯಾಯಪೀಠ ಅರ್ಜಿದಾರರಿಗೆ ಸೂಚನೆ ನೀಡಿದೆ.

ಅರ್ಜಿದಾರ ಅಜಯ್ ಶುಕ್ಲಾ ತನ್ನ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿದ್ದರು.

ಪ್ರತಿವಾದಿ ಅಧಿಕಾರಿಗಳ ಪರವಾಗಿ ಮಾಡಿದ ಮೌಖಿಕ ಸಲ್ಲಿಕೆಗಳ ಆಧಾರದ ಮೇಲೆ ಮಾತ್ರ ಆದೇಶವನ್ನು ನೀಡಲಾಗಿದೆ ಎಂದು ಅರ್ಜಿದಾರರ ವಕೀಲರು ಹೇಳಿದರು. ಕೇಂದ್ರದ ವಕೀಲರು ಮರುಪರಿಶೀಲನಾ ಅರ್ಜಿಯನ್ನು ವಿರೋಧಿಸಿದರು, ಇದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ ಮತ್ತು ಈ ರೀತಿಯ ದುರುಪಯೋಗವನ್ನು ಕಟ್ಟುನಿಟ್ಟಾಗಿ ವ್ಯವಹರಿಸಬೇಕು ಎಂದು ವಾದ ಮಂಡಿಸಿದ್ದರು.

ಅಂತಹ ಅರ್ಜಿಗಳು ಸಲ್ಲಿಕೆಯಾದಾಗಲೆಲ್ಲಾ ಇಡೀ ಸರ್ಕಾರಿ ಯಂತ್ರವು ಚಲನೆಗೆ ಬರುವುದರಿಂದ ಹೆಚ್ಚಿನ ವೆಚ್ಚದೊಂದಿಗೆ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೇಂದ್ರದ ಪರ ವಕೀಲರು ವಾದಿಸಿದರು.

SCROLL FOR NEXT