ದೇಬಶಿಶ್ ಸೆಂಗುಪ್ತಾ ಆತ್ಮಹತ್ಯೆಗೆ ಶರಣು
ದೇಬಶಿಶ್ ಸೆಂಗುಪ್ತಾ ಆತ್ಮಹತ್ಯೆಗೆ ಶರಣು TNIE
ದೇಶ

CAA ಭಯ: ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣು!

Vishwanath S

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸುಭಾಷ್‌ಗ್ರಾಮ್‌ನಲ್ಲಿ 37 ವರ್ಷದ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಘೋಷಣೆಯಾದ ನಂತರ ತನ್ನ ಮಗ ಗಾಬರಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರ ತಂದೆ ಹೇಳಿದ್ದಾರೆ.

ಮೃತನನ್ನು ದೇಬಶಿಶ್ ಸೆಂಗುಪ್ತಾ ಎಂದು ಹೇಳಲಾಗಿದೆ. ಈ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನೇತೃತ್ವದಲ್ಲಿ ನಿಯೋಗವನ್ನು ರಚಿಸಿದೆ. ನಿಯೋಗವು ಗುರುವಾರ ಸಂಜೆ ಮೃತ ದೇಬಶಿಶ್ ಸೆಂಗುಪ್ತಾ ಅವರ ಕುಟುಂಬವನ್ನು ಭೇಟಿ ಮಾಡಿದೆ.

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸುಭಾಷ್‌ಗ್ರಾಮ್‌ನಲ್ಲಿ 37 ವರ್ಷದ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಘೋಷಣೆಯಾದ ನಂತರ ತನ್ನ ಮಗ ಗಾಬರಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರ ತಂದೆ ಹೇಳಿದ್ದಾರೆ.

ಪೌರತ್ವ ರದ್ದಾಗುವ ಆತಂಕ ದೇಬಾಶಿಶ್ ನನ್ನು ನಿರಂತರವಾಗಿ ಖಿನ್ನತೆಗೆ ಒಳಗಾಗುವಂತೆ ಮಾಡಿದೆ ಎಂದು ದೇಬಾಶಿಶ್ ಸೆಂಗುಪ್ತಾ ಅವರ ಕುಟುಂಬವನ್ನು ಉಲ್ಲೇಖಿಸಿ ತೃಣಮೂಲ ಕಾಂಗ್ರೆಸ್ ಟ್ವಿಟರ್‌ನಲ್ಲಿ ಬರೆದುಕೊಂಡಿದೆ. ಸಿಎಎ ದೃಷ್ಟಿಯಿಂದ ದೇಬಶಿಶ್ ತನ್ನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು ಎಂದು ಅವರ ಸಂಬಂಧಿಕರು ಹೇಳುತ್ತಾರೆ.

ಟಿಎಂಸಿ ರಾಜಕೀಯ ಮಾಡುತ್ತಿದೆ- ಬಿಜೆಪಿ

ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಾವು ದುರದೃಷ್ಟಕರ ಎಂದು ಹೇಳಿದ್ದು ಘಟನೆಯು ಸಿಎಎ ಅಧಿಸೂಚನೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಈ ವಿಚಾರದಲ್ಲಿ ಟಿಎಂಸಿ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಮಮತಾ ಬ್ಯಾನರ್ಜಿ ಅವರ ಪಕ್ಷವು ಈಗಾಗಲೇ ಹೆದರುತ್ತಿದೆ ಎಂದು ಇದು ಸ್ಪಷ್ಟಪಡಿಸುತ್ತದೆ ಎಂದರು.

SCROLL FOR NEXT