ಬಿಆರ್ ಎಸ್ ನಾಯಕಿ ಕವಿತಾ
ಬಿಆರ್ ಎಸ್ ನಾಯಕಿ ಕವಿತಾ 
ದೇಶ

ದೆಹಲಿ ಅಬಕಾರಿ ಪ್ರಕರಣ: BRS ನಾಯಕಿ ಕವಿತಾಗೆ ಮಾರ್ಚ್ 26 ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Shilpa D

ದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದ ಆರೋಪಿ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರ ಜಾರಿ ನಿರ್ದೇಶನಾಲಯದ ಕಸ್ಟಡಿಯನ್ನು ನ್ಯಾಯಾಲಯವು ಮಾರ್ಚ್ 26 ರವರೆಗೆ ವಿಸ್ತರಿಸಿದೆ.

ತನಿಖಾ ಸಂಸ್ಥೆ ಆಕೆಯ ಕಸ್ಟಡಿ ಅವಧಿಯನ್ನು ಐದು ದಿನಗಳ ಕಾಲ ವಿಸ್ತರಿಸುವಂತೆ ಕೋರಿತ್ತು. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರು ‘ಸೌತ್ ಗ್ರೂಪ್’ನ ಪ್ರಮುಖ ಸದಸ್ಯೆಯಾಗಿದ್ದಾರೆ ಎಂದು ಇಡಿ ಆರೋಪಿಸಿದೆ.

ಬಿಆರ್‌ಎಸ್ ನಾಯಕಿ ಕವಿತಾ ಪರ ವಕೀಲರು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ತೆಲಂಗಾಣ ವಿಧಾನ ಪರಿಷತ್ ಸದಸ್ಯೆ ಕವಿತಾ (46) ಅವರನ್ನು ಮಾರ್ಚ್ 15 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಅವರ ನಿವಾಸದಿಂದ ಕೇಂದ್ರ ತನಿಖಾ ಸಂಸ್ಥೆ ಬಂಧಿಸಿತ್ತು. ಏತನ್ಮಧ್ಯೆ, ಇಡಿ ಅಧಿಕಾರಿಗಳು ಕವಿತಾ ಅವರ ಹತ್ತಿರದ ಸಂಬಂಧಿಕರ ಮನೆಯಲ್ಲಿ ಶನಿವಾರ ಶೋಧ ನಡೆಸಿದ್ದರು.

SCROLL FOR NEXT