ಸುಬ್ರಮಣಿಯನ್ ಸ್ವಾಮಿ 
ದೇಶ

'Micro managing backfires': ಮಾಸ್ಕೋ ದಾಳಿ ಕುರಿತು ಪ್ರಧಾನಿ ಮೋದಿ ಆಡಳಿತಕ್ಕೆ Subramanian Swamy ಎಚ್ಚರಿಕೆ

ರಷ್ಯಾದಾಳಿ ಬೆನ್ನಲ್ಲೇ ಮೈಕ್ರೋ ಮ್ಯಾನೇಜಿಂಗ್ ಕುರಿತು ಕೇಂದ್ರದ ಮೋದಿ ಸರ್ಕಾರಕ್ಕೆ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ರಷ್ಯಾದಾಳಿ ಬೆನ್ನಲ್ಲೇ ಮೈಕ್ರೋ ಮ್ಯಾನೇಜಿಂಗ್ ಕುರಿತು ಕೇಂದ್ರದ ಮೋದಿ ಸರ್ಕಾರಕ್ಕೆ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, 'ಮಾಸ್ಕೋದಲ್ಲಿ ಐಸಿಸ್ ದಾಳಿಯ ನಡುವೆ 'ಮೈಕ್ರೋ ಮ್ಯಾನೇಜಿಂಗ್ ಬ್ಯಾಕ್‌ಫೈರ್‌'' (ಹಿನ್ನಡೆ)ಗಳನ್ನು ಅನುಭವಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

'ಮಾಸ್ಕೋ ಬಳಿ ಉಗ್ರರ ದಾಳಿಗೆ 40ಕ್ಕೂ ಹೆಚ್ಚು ಮಂದಿ ಬಲಿಯಾಗಿ, 140 ಮಂದಿ ಗಾಯಗೊಂಡಿದ್ದಾರೆ. ರಷ್ಯನ್ನರನ್ನು ಕೊಂದಿರುವುದಾಗಿ ಎಂದು ಐಸಿಸ್ ಹೇಳಿಕೊಂಡಿದೆ. ದಾಳಿ ಮಾಡಿದ ಉಗ್ರರಲ್ಲಿ ಒಬ್ಬ ಉಗ್ರನೂ ಕೂಡ ಸಿಕ್ಕಿಬಿದ್ದಿಲ್ಲ. ರಷ್ಯಾವನ್ನು ಪುಟಿನ್ ಮೈಕ್ರೋ ಮ್ಯಾನೇಜ್ ಮಾಡಬೇಕಾಗಿತ್ತು.. ಮೋದಿ ! ಎದ್ದೇಳಿ!! ಮೈಕ್ರೋ ಮ್ಯಾನೇಜಿಂಗ್ ಬ್ಯಾಕ್‌ಫೈರ್ಸ್ ಎಂದು ಟ್ವೀಟ್ ಮಾಡಿದ್ದಾರೆ.

2000 ಇಸವಿ ಬಳಿಕ ರಷ್ಯಾದಲ್ಲಿ ನಡೆದ ಮಾರಣಾಂತಿಕ ದಾಳಿ

ರಷ್ಯಾದ ರಾಜಧಾನಿ ಮಾಸ್ಕೋ ಶುಕ್ರವಾರ ರಾತ್ರಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿದ್ದು, ಉಗ್ರ ದಾಳಿಗೆ ಕನಿಷ್ಠ 60 ಮಂದಿ ಸಾವಿಗೀಡಾಗಿ140ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾಸ್ಕೋದಲ್ಲಿ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಜನಸಂದಣಿಯ ಮೇಲೆ ಹಲವಾರು ಬಂದೂಕುಧಾರಿಗಳು ಗುಂಡು ಹಾರಿಸಿದ್ದು, ದಾಳಿಕೋರರು ಮುಖ ಮರೆಮಾಚುವ ಬಟ್ಟೆಗಳನ್ನು ಧರಿಸಿ ಕಟ್ಟಡಕ್ಕೆ ಪ್ರವೇಶಿಸಿದ್ದಾರೆ. ಅಚ್ಚರಿ ಎಂದರೆ ಬಂದೂಕು ದಾರಿಗಳು ಅಷ್ಟು ದೊಡ್ಡ ಪ್ರಮಾಣದ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳನ್ನು ಹೊತ್ತು ರಾಜಧಾನಿಯೊಳಗೆ ಪ್ರವೇಶಿಸಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ.

ಅಂತರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಮಾಸ್ಕೋದಲ್ಲಿ ಪಿಕ್ನಿಕ್ ತಂಡ ಸಂಗೀತ ಕಚೇರಿ ಆಯೋಜಿಸಿತ್ತು. ಆದರೆ ಕಾರ್ಯಕ್ರಮ ಪ್ರಾರಂಭವಾಗುವ ಮೊದಲೇ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಸದ್ದು ಮೊಳಗುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಸುಮಾರು 7 ಸಾವಿರ ಜನ ಓಡಿ ಹೋಗಲು ಯತ್ನಿಸಿದ್ದು, ಅದಕ್ಕೂ ಅವಕಾಶ ನೀಡದಂತೆ ಉಗ್ರರು ಪ್ರವೇಶದ್ವಾರವನ್ನು ಬಂದ್ ಮಾಡಿ ದಾಳಿ ನಡೆಸಿದ್ದಾರೆ. ಬುಲೆಟ್‌ಗಳಿಂದ ತಪ್ಪಿಸಿಕೊಳ್ಳಲು ಜನರು ತಾವು ಕುಳಿತಿದ್ದ ಆಸನಗಳ ಹಿಂದೆ, ನೆಲಮಾಳಿಗೆ ಅವಿತಿದ್ದರೂ ಅವರನ್ನೂ ಬಿಡಗೆ ಗುಂಡು ಹಾರಿಸಿ ಕೊಲ್ಲಲಾಗಿದೆ.

ಈ ವೇಳೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸುತ್ತಲೇ ಉಗ್ರರು ಕಟ್ಟಡದಲ್ಲಿ ಬಾಂಬ್ ಸ್ಫೋಟಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಇಸ್ಲಾಮಿಕ್ ಸ್ಟೇಟ್ (ಐಸಿಸ್) ಈ ಬೃಹತ್ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಟೆಲಿಗ್ರಾಮ್‌ನಲ್ಲಿ ಐಸಿಸ್-ಸಂಯೋಜಿತ ಸುದ್ದಿ ಸಂಸ್ಥೆ ಅಮಾಕ್ ನಲ್ಲಿ ಈ ಕುರಿತು ಕಿರು ಹೇಳಿಕೆ ಬಿಡುಗಡೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

SCROLL FOR NEXT