ಮಾಸ್ಕೋ ಉಗ್ರ ದಾಳಿ ಖಂಡಿಸಿದ ವಿಎಚ್ ಪಿ
ಮಾಸ್ಕೋ ಉಗ್ರ ದಾಳಿ ಖಂಡಿಸಿದ ವಿಎಚ್ ಪಿ 
ದೇಶ

Moscow terror Attack: ಇಸ್ಲಾಮಿಕ್ ಜಿಹಾದಿ ಭಯೋತ್ಪಾದಕರ ಹೇಯ ಕೃತ್ಯ- VHP

Srinivasamurthy VN

ನವದೆಹಲಿ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ಉಗ್ರ ದಾಳಿಯನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದ್ದು, ಇಸ್ಲಾಮಿಕ್ ಜಿಹಾದಿ ಭಯೋತ್ಪಾದಕರ ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ವಿಎಚ್ ಪಿ, 'ಮಾಸ್ಕೋ ಕನ್ಸರ್ಟ್ ಹಾಲ್ ಮೇಲಿನ ದಾಳಿಯಿಂದ 133 ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಈ ಹೇಯ ಕೃತ್ಯ ಖಂಡನೀಯ. ಭಾರತ ಮಾತ್ರವಲ್ಲ, ಇಡೀ ಜಗತ್ತು ಇಸ್ಲಾಮಿಕ್ ಜಿಹಾದಿ ಭಯೋತ್ಪಾದನೆಯಿಂದ ಬಳಲುತ್ತಿದೆ ಎಂಬುದನ್ನು ಈ ಕೃತ್ಯ ಮತ್ತೊಮ್ಮೆ ಸಾಬೀತುಪಡಿಸಿದೆ' ಎಂದು ಹೇಳಿದೆ.

ಈ ಕುರಿತು ವಿಎಚ್ ಪಿ ಅಂತರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ಮಾತನಾಡಿದ್ದು, ಪವಿತ್ರ ರಂಜಾನ್ ಸಮಯದಲ್ಲಿ ದಾಳಿ ನಡೆಸಿದ್ದು ತುಂಬಾ ದುಃಖಕರವಾಗಿದೆ. ಇದನ್ನು ಅವರು ಧಾರ್ಮಿಕ ತಿಂಗಳು ಎಂದು ಕರೆಯುತ್ತಾರೆ. ಜಿಹಾದಿ ಚಿಂತನೆ ಮತ್ತು ಭಯೋತ್ಪಾದನೆ ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆ ಎಂದು ಮಾನವೀಯತೆಗೆ ಸವಾಲು ಹಾಕುವ ಮೂಲಕ ಇಡೀ ಜಗತ್ತನ್ನು ಮತ್ತೆ ಎಚ್ಚರಿಸಿದೆ. ಭಯೋತ್ಪಾದನೆಯ ವಿರುದ್ಧ ಇಡೀ ಜಗತ್ತು ಒಗ್ಗೂಡಿ ಪ್ರತಿಜ್ಞೆ ಮಾಡಬೇಕಿದೆ ಎಂದು ಹೇಳಿದ್ದಾರೆ.

SCROLL FOR NEXT