ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ  
ದೇಶ

ಭಾರತದಲ್ಲಿ ಪ್ರತಿ ಕುಟುಂಬದ ಆಹಾರ ತ್ಯಾಜ್ಯ ವರ್ಷದಲ್ಲಿ 55 ಕೆಜಿ; ಗ್ರಾಮೀಣಕ್ಕಿಂತ ನಗರ ಪ್ರದೇಶದಲ್ಲೇ ಹೆಚ್ಚು!

Sumana Upadhyaya

ನವದೆಹಲಿ: ವಿಶ್ವಸಂಸ್ಥೆಯ ಆಹಾರ ತ್ಯಾಜ್ಯ ಸೂಚ್ಯಂಕ ವರದಿಯ ಪ್ರಕಾರ ಭಾರತವು ವಿಶ್ವದ ಅತಿ ಹೆಚ್ಚು ಹಸಿವಿನಿಂದ ಬಳಲುತ್ತಿರುವ ಜನರನ್ನು ಹೊಂದಿದ್ದು, ಭಾರತದಲ್ಲಿ ಪ್ರತಿ ವರ್ಷ 78.2 ಮಿಲಿಯನ್ ಟನ್ ಆಹಾರ ವ್ಯರ್ಥವಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಶೂನ್ಯ ತ್ಯಾಜ್ಯದ ಅಂತಾರಾಷ್ಟ್ರೀಯ ದಿನದ ಮೊದಲು ವಿಶ್ವಸಂಸ್ಥೆ ಆರ್ಥಿಕ ಕಾರ್ಯಕ್ರಮ ಈ ವರದಿ ಪ್ರಕಟಿಸಿದ್ದು, ಭಾರತದಲ್ಲಿ ಪ್ರತಿ ಕುಟುಂಬದ ಆಹಾರ ತ್ಯಾಜ್ಯವು ವರ್ಷಕ್ಕೆ 55 ಕೆ.ಜಿಯಷ್ಟಿದೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾರತದಲ್ಲಿ ಆಹಾರ ತ್ಯಾಜ್ಯ ಕಡಿಮೆ ಎಂದು ತೋರಿಸುತ್ತದೆ.

ದಕ್ಷಿಣ ಏಷ್ಯಾದಲ್ಲಿ, ಭೂತಾನ್ (19ಕೆಜಿ/ವರ್ಷ) ದೇಶದಲ್ಲಿ ಅತಿ ಕಡಿಮೆ ತಲಾ ಆಹಾರ ತ್ಯಾಜ್ಯವನ್ನು ಹೊಂದಿದ್ದರೆ ಪಾಕಿಸ್ತಾನವು ಅತಿ ಹೆಚ್ಚು (130ಕೆಜಿ/ವರ್ಷಕ್ಕೆ) ಆಹಾರ ತ್ಯಾಜ್ಯ ಮಾಡುತ್ತದೆ. ಗ್ಲೋಬಲ್ ಹಂಗರ್ ಇಂಡೆಕ್ಸ್ 2023 ವರದಿಯ ಪ್ರಕಾರ ವಿಶ್ವದ 783 ಮಿಲಿಯನ್ ಜನಸಂಖ್ಯೆಯಲ್ಲಿ ಭಾರತವು 233.9 ಮಿಲಿಯನ್ ಜನರನ್ನು ಹೊಂದಿರುವುದರಿಂದ ಭಾರತದಲ್ಲಿ ಆಹಾರ ಹೆಚ್ಚು ವ್ಯರ್ಥವಾಗುತ್ತಿದ್ದು ಇದೊಂದು ಗಂಭೀರ ಸಮಸ್ಯೆಯಾಗಿದೆ.

ಭಾರತವು 125 ದೇಶಗಳಲ್ಲಿ 111 ನೇ ಸ್ಥಾನದಲ್ಲಿದೆ, ಇದು ದೇಶಕ್ಕೆ ಗಂಭೀರ ಹಸಿವಿನ ತೀವ್ರತೆಯ ಮಟ್ಟವನ್ನು ಸೂಚಿಸುತ್ತದೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಉತ್ತರಾಖಂಡ ಮತ್ತು ಜಾರ್ಖಂಡ್‌ನ ವಿವಿಧ ಭಾಗಗಳಲ್ಲಿ ಆಹಾರ ವ್ಯರ್ಥದ ಅಧ್ಯಯನವು ವಿಭಿನ್ನ ಸಂಶೋಧಕರಿಂದ ವಿಭಿನ್ನ ಅವಧಿಗಳಲ್ಲಿ ನಡೆದಿದೆ ಎಂದು ವರದಿ ಹೇಳುತ್ತದೆ. ಕೇರಳ ಮತ್ತು ಕರ್ನಾಟಕ ಅಧ್ಯಯನಗಳನ್ನು ಯುಎನ್-ಹ್ಯಾಬಿಟಾಟ್ಸ್ ನಡೆಸಿತು.

2021 ರ ಮೊದಲ ವರದಿಯ ನಂತರ ಇದು ಯುಎನ್‌ಇಪಿಯ ಎರಡನೇ ವರದಿಯಾಗಿದೆ. ನಿನ್ನೆ ಬಿಡುಗಡೆಯಾದ ಇತ್ತೀಚಿನ ವರದಿಯೊಂದಿಗೆ ಅದರ ಹೋಲಿಕೆಯು ಮನೆಗಳಲ್ಲಿ ಪ್ರತಿ ವರ್ಷ ಆಹಾರ ತ್ಯಾಜ್ಯವು ಜಾಗತಿಕವಾಗಿ ಹೆಚ್ಚಾಗಿದೆ ಎಂದು ತೋರಿಸುತ್ತದೆ. 2019 ರಲ್ಲಿ 74 ಕೆಜಿಯಿಂದ 2022 ರಲ್ಲಿ 79 ಕೆಜಿಗೆ ಆಹಾರ ತ್ಯಾಜ್ಯ ಮನೆಗಳಲ್ಲಿ ಅಧಿಕವಾಗಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ 50 ಕೆಜಿ/ತಲಾ/ವರ್ಷದಿಂದ 55 ಕೆಜಿ/ತಲಾ/ವರ್ಷಕ್ಕೆ ಏರಿಕೆಯಾಗಿದೆ. 2022 ರಲ್ಲಿ ಮಾಲ್ಡೀವ್ಸ್‌ನಲ್ಲಿ 207 ಕೆಜಿ/ತಲಾವಾರು/ವರ್ಷಕ್ಕೆ ಗೃಹ ಮಟ್ಟದಲ್ಲಿ ಪ್ರತಿ ವರ್ಷಕ್ಕೆ ಆಹಾರ ತ್ಯಾಜ್ಯವು ಅತ್ಯಧಿಕವಾಗಿದೆ.

2022 ರಲ್ಲಿ ಎಲ್ಲಾ ಖಂಡಗಳಲ್ಲಿನ ಕುಟುಂಬಗಳು ದಿನಕ್ಕೆ 1 ಶತಕೋಟಿ ಊಟವನ್ನು ವ್ಯರ್ಥ ಮಾಡುತ್ತವೆ ಎಂದು ವರದಿ ಹೇಳುತ್ತದೆ, ಆದರೆ 783 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಮತ್ತು ಮಾನವೀಯತೆಯ ಮೂರನೇ ಒಂದು ಭಾಗದಷ್ಟು ಜನರು ಆಹಾರ ಅಭದ್ರತೆಯನ್ನು ಎದುರಿಸುತ್ತಾರೆ. ಜಾಗತಿಕ ಆರ್ಥಿಕತೆಯ ಮೇಲೆ ಆಹಾರ ನಷ್ಟ ಮತ್ತು ತ್ಯಾಜ್ಯ ಸಂಖ್ಯೆಯು ಸರಿಸುಮಾರು 1 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಆಹಾರ ತ್ಯಾಜ್ಯವು ಜಾಗತಿಕ ದುರಂತವಾಗಿದೆ. ಪ್ರಪಂಚದಾದ್ಯಂತ ಆಹಾರ ವ್ಯರ್ಥವಾಗುವುದರಿಂದ ಲಕ್ಷಾಂತರ ಜನರು ಇಂದು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಯುಎನ್‌ಇಪಿಯ ಕಾರ್ಯನಿರ್ವಾಹಕ ನಿರ್ದೇಶಕ ಇಂಗರ್ ಆಂಡರ್ಸನ್ ಹೇಳಿದರು.

ಇದು ಪ್ರಮುಖ ಅಭಿವೃದ್ಧಿ ಸಮಸ್ಯೆ ಮಾತ್ರವಲ್ಲ, ಅನಗತ್ಯ ತ್ಯಾಜ್ಯದ ಪರಿಣಾಮಗಳು ಹವಾಮಾನ ಮತ್ತು ಪ್ರಕೃತಿಗೆ ಗಣನೀಯ ವೆಚ್ಚವನ್ನು ಉಂಟುಮಾಡುತ್ತಿವೆ ಎಂದು ಆಂಡರ್ಸನ್ ಹೇಳಿದರು.

ವರದಿಗಳು ಆಹಾರ ವ್ಯರ್ಥವು ‘ಶ್ರೀಮಂತ’ ದೇಶದ ಸಮಸ್ಯೆಯಲ್ಲ, ಮೇಲ್ಮಧ್ಯಮ ಮತ್ತು ಕೆಳಮಧ್ಯಮ ಆದಾಯದ ದೇಶಗಳಲ್ಲಿಯೂ ಇದೆ ಎಂದು ಒತ್ತಿಹೇಳುತ್ತದೆ. ತ್ಯಾಜ್ಯದ ಪ್ರಮಾಣದಲ್ಲಿ ದೇಶದಿಂದ ದೇಶಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ.

ಭಾರತದಲ್ಲಿ ಆಹಾರ ತ್ಯಾಜ್ಯ:

  • 78.2 - ಪ್ರತಿ ವರ್ಷ ಮಿಲಿಯನ್ ಟನ್

  • 233.9 ಮಿಲಿಯನ್ - ವಿಶ್ವದ 783 ಮಿಲಿಯನ್ ಜನಸಂಖ್ಯೆ (ಜಾಗತಿಕ ಹಸಿವು ಸೂಚ್ಯಂಕ 2023)

  • 111 ನೇ ಸ್ಥಾನದಲ್ಲಿದೆ - 125 ದೇಶಗಳಲ್ಲಿ, ಹಸಿವಿನ ತೀವ್ರತೆಯ ಮಟ್ಟವನ್ನು ಸೂಚಿಸುತ್ತದೆ

  • ಜಾಗತಿಕ ಆಹಾರ ವ್ಯರ್ಥ (2022) - 1.05 ಬಿಲಿಯನ್ ಟನ್‌ಗಳು

ಹಸಿರುಮನೆ ಹೊರಸೂಸುವಿಕೆ

  • ಉಷ್ಣ ದೇಶಗಳು ಕೋಲ್ಡ್ ಚೈನ್ ಸೌಲಭ್ಯಗಳ ಕೊರತೆಯಿಂದಾಗಿ ಹೆಚ್ಚು ಆಹಾರ ತ್ಯಾಜ್ಯವನ್ನು ಉತ್ಪಾದಿಸುತ್ತವೆ

  • ಆಹಾರದ ನಷ್ಟ ಮತ್ತು ತ್ಯಾಜ್ಯವು ವಾರ್ಷಿಕ ಜಾಗತಿಕ ಹಸಿರುಮನೆ ಅನಿಲ (GHG) ಹೊರಸೂಸುವಿಕೆಯ ಶೇಕಡಾ 8ರಿಂದ 10ರಷ್ಟು ಕಾರಣವಾಗುತ್ತದೆ.

SCROLL FOR NEXT