ಮುಖ್ತಾರ್ ಅನ್ಸಾರಿ ನಿವಾಸದ ಮುಂದಿರುವ ಭದ್ರತಾ ಸಿಬ್ಬಂದಿ. 
ದೇಶ

ಜೈಲಿನಲ್ಲಿ ಸ್ಲೋ ಪಾಯ್ಸನ್ ನೀಡಿ ಹತ್ಯೆ: ಮುಖ್ತಾರ್ ಅನ್ಸಾರಿ ಸಾವು ಕುರಿತು ಪುತ್ರ ಉಮರ್ ಅನ್ಸಾರಿ ಹೇಳಿಕೆ

ಉತ್ತರ ಪ್ರದೇಶದ ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು ಕುರಿತು ಪುತ್ರ ಉಮರ್ ಅನ್ಸಾರಿ ಸ್ಫೋಟಕ ಹೇಳಿಕೆ ನೀಡಿದ್ದು, ತಂದೆಯನ್ನು ವಿಷಪ್ರಾಶನ ಮಾಡಿಸಿ, ಸಾವನ್ನಪ್ಪುವಂತೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಹೇಳಿದ್ದಾರೆ.

ಲಖನೌ: ಉತ್ತರ ಪ್ರದೇಶದ ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು ಕುರಿತು ಪುತ್ರ ಉಮರ್ ಅನ್ಸಾರಿ ಸ್ಫೋಟಕ ಹೇಳಿಕೆ ನೀಡಿದ್ದು, ತಂದೆಯನ್ನು ವಿಷಪ್ರಾಶನ ಮಾಡಿಸಿ, ಸಾವನ್ನಪ್ಪುವಂತೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಹೇಳಿದ್ದಾರೆ.

ಮುಖ್ತಾರ್ ಅನ್ಸಾರಿ ಅವರು ಹೃದಯಾಘಾತದಿಂದ ಆರೋಗ್ಯ ಹದಗೆಟ್ಟ ಕಾರಣ ಗುರುವಾರ ನಿಧನರಾಗಿದ್ದಾರೆ. ಜೈಲಿನಲ್ಲಿದ್ದ ದರೋಡೆಕೋರನನ್ನು ಗಾಜಿಪುರದ ಬಂದಾದಲ್ಲಿರುವ ಬಂದಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.

ಮಂಗಳವಾರ ಸಹ, ಅನ್ಸಾರಿ ಅವರು ಹೊಟ್ಟೆ ನೋವಿನ ಬಗ್ಗೆ ಹೇಳಿಕೊಂಡಾಗ ಆಸ್ಪತ್ರೆಗೆ ಕರೆದೊಯ್ದು ಸುಮಾರು 14 ಗಂಟೆಗಳ ಕಾಲ ದಾಖಲಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಈ ನಡುವೆ ತಂದೆ ಸಾವು ಕುರಿತು ಹೇಳಿಕೆ ನೀಡಿರುವ ಉಮರ್ ಅನ್ಸಾರಿ. ತಂದೆಯ ಸಾವಿನ ಬಗ್ಗೆ ನನಗೆ ಅಧಿಕಾರಿಗಳ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಮಾಧ್ಯಮಗಳ ಮೂಲಕ ನನಗೆ ವಿಷಯ ತಿಳಿದಿದೆ. ಎರಡು ದಿನಗಳ ಹಿಂದೆ ನಾನು ಅವರನ್ನು ಭೇಟಿಯಾಗಲು ಬಂದಿದ್ದೆ. ಆದರೆ. ನನಗೆ ಅವಕಾಶ ನೀಡಲಿಲ್ಲ. ನಾವು ಮೊದಲೇ ಹೇಳಿದಂತೆ ಸ್ಲೋ ಪಾಯ್ಸನ್ ನೀಡಿದ ಆರೋಪದ ಬಗ್ಗೆ ಮತ್ತೆ ಹೇಳುತ್ತೇವೆ. ಮಾರ್ಚ್ 19 ರಂದು ಅವರು ರಾತ್ರಿಯ ಊಟದಲ್ಲಿ ವಿಷ ಸೇವಿಸಿದ್ದಾರೆ. ನಾವು ನ್ಯಾಯಾಂಗದ ಮೊರೆ ಹೋಗುತ್ತೇವೆ, ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಹಏಳಿದ್ದಾರೆ.

ತಂದೆಯವರ ಮೃತದೇಹವನ್ನು ಬಂಡಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆ ನಂತರ ನಮಗೆ ಹಸ್ತಾಂತರ ಮಾಡುತ್ತಾರೆ. ನಂತರ ನಾವು ಮುಂದಿನ ಪ್ರಕ್ರಿಯೆಯನ್ನು(ಶವಸಂಸ್ಕಾರ) ನಡೆಸುತ್ತೇವೆ. ನನ್ನ ತಂದೆಗೆ ಸ್ಲೋ ಪಾಯ್ಸನ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದಕ್ಕೂ ಮೊದಲು, ಅನ್ಸಾರಿಯವರ ಸಹೋದರ ಮತ್ತು ಘಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಅವರು ಮಂಗಳವಾರ ಅಧಿಕಾರಿಗಳು ಅವರನ್ನು ಜೈಲಿನಲ್ಲಿ “ಸ್ಲೋ ಪಾಯ್ಸನಿಂಗ್” ಗೆ ಒಳಪಡಿಸಿದ್ದಾರೆ ಎಂದು ಆರೋಪಿಸಿದ್ದರು, ಇದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.

ಬಾಂದಾ ಜೈಲಿನಲ್ಲಿ ಮುಖ್ತಾರ್ ಅನ್ಸಾರಿಗೆ ಜೀವ ಬೆದರಿಕೆ ಇದೆ. ಅವರಿಗೆ ಆಹಾರದಲ್ಲಿ ವಿಷ ಪದಾರ್ಥ ಬೆರೆಸಿ ನೀಡಲಾಗಿದೆ ಎಂದು ಅವರ ವಕೀಲರು ಈ ತಿಂಗಳ ಆರಂಭದಲ್ಲಿ ಕೋರ್ಟ್‌ನಲ್ಲಿ ಹೇಳಿದ್ದರು.

ಮೃತ ಗ್ಯಾಂಗ್‌ಸ್ಟರ್‌ನ ಕುಟುಂಬದವರ ಆರೋಪದ ಕುರಿತು ತನಿಖೆ ನಡೆಸುವಂತೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದ ಮಾವು ಕ್ಷೇತ್ರದಿಂದ 5 ಬಾರಿ ಶಾಸಕರಾಗಿದ್ದ ಅನ್ಸಾರಿ ವಿರುದ್ಧ 61 ಕ್ರಿಮಿನಲ್ ಪ್ರಕರಣಗಳಿದ್ದವು. ಅವುಗಳಲ್ಲಿ 15 ಕೊಲೆ ಪ್ರಕರಣಗಳು. 1980ರ ದಶಕದಲ್ಲಿ ಗ್ಯಾಂಗ್ ಒಂದನ್ನು ಸೇರಿ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ ಅನ್ಸಾರಿ, 1990ರಲ್ಲಿ ತನ್ನದೇ ಗ್ಯಾಂಗ್ ಸ್ಥಾಪಿಸಿದ್ದ. ಮಾವು, ಗಾಜಿಪುರ, ವಾರಾಣಸಿ ಮತ್ತು ಜೌನ್ಪುರ ಜಿಲ್ಲೆಗಳಲ್ಲಿ ಸುಲಿಗೆ ಹಾಗೂ ಅಪಹರಣಗಳಲ್ಲಿ ಈ ಗ್ಯಾಂಗ್ ಸಕ್ರಿಯವಾಗಿತ್ತು.

1996ರಲ್ಲಿ ಮೊದಲ ಬಾರಿ ಶಾಸಕರಾದ ಅನ್ಸಾರಿಯ ಅಡಗುದಾಣದಲ್ಲಿ 2004ರಲ್ಲಿ ಮೆಷಿನ್ ಗನ್ ಪತ್ತೆಯಾದ ಹಿನ್ನೆಲೆಯಲ್ಲಿ ಆತನ ವಿರುದ್ಧ ಭಯೋತ್ಪಾದನಾ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಅದರ ಮರು ವರ್ಷದಿಂದ ಆತ ಜೈಲಿನಲ್ಲಿದ್ದ. 2023ರ ಏಪ್ರಿಲ್‌ನಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈ ಕೊಲೆ ಪ್ರಕರಣದಲ್ಲಿ 10 ವರ್ಷ ಶಿಕ್ಷೆ ವಿಧಿಸಲಾಗಿತ್ತು. 1990ರ ನಕಲಿ ಗನ್ ಲೈಸೆನ್ಸ್ ಪ್ರಕರಣದಲ್ಲಿ ಈ ವರ್ಷದ ಮಾರ್ಚ್ 13ರಂದು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಮೊದಲು ಬಹುಜನ ಸಮಾಜ ಪಕ್ಷದಿಂದ ಶಾಸಕನಾಗಿದ್ದ ಅನ್ಸಾರಿ, 2002 ಮತ್ತು 2007ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ. 2012ರಲ್ಲಿ ಮೂವರು ಅನ್ಸಾರಿ ಸಹೋದರರು ಸೇರಿ ಕ್ವಾಮಿ ಏಕ್ತಾ ದಳ ಎಂಬ ಪಕ್ಷ ಸ್ಥಾಪಿಸಿದ್ದ. 2016ರಲ್ಲಿ ಮತ್ತೆ ಬಿಎಸ್‌ಪಿ ಸೇರಿ, ಐದನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT