ಕೇದಾರನಾಥ 
ದೇಶ

ನಾಳೆ ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ದೇವಾಲಯಗಳು ಓಪನ್

ಉತ್ತರಾಖಂಡದ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳು ಶುಕ್ರವಾರ(ಮೇ 10) ಭಕ್ತರಿಗಾಗಿ ತೆರೆಯಲಿವೆ.

ಡೆಹಗಾಡೂನ್: ಉತ್ತರಾಖಂಡದ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳು ಶುಕ್ರವಾರ(ಮೇ 10) ಭಕ್ತರಿಗಾಗಿ ತೆರೆಯಲಿವೆ.

ಹಿಮಾಲಯದಲ್ಲಿ ನೆಲೆಗೊಂಡಿರುವ ಈ ಪ್ರಸಿದ್ಧ ದೇವಾಲಯಗಳು ಪ್ರತಿ ವರ್ಷ ಚಳಿಗಾಲದ ಪ್ರಾರಂಭವಾಗುತ್ತಿದ್ದಂತೆ ಮುಚ್ಚಲ್ಪಡುತ್ತವೆ. ಏಕೆಂದರೆ ಹಿಮಪಾತದಿಂದಾಗಿ ಈ ಅವಧಿಯಲ್ಲಿ ದೇವಾಲಗಳನ್ನು ಬಂದ್ ಮಾಡಲಾಗುತ್ತದೆ ಮತ್ತು ಬೇಸಿಗೆ ಆರಂಭದೊಂದಿಗೆ ಪುನಃ ತೆರೆಯಲ್ಪಡುತ್ತವೆ.

ಕೇದಾರನಾಥ ಮತ್ತು ಯಮುನೋತ್ರಿ ದೇವಸ್ಥಾನಗಳನ್ನು ನಾಳೆ ಬೆಳಗ್ಗೆ 7 ಗಂಟೆಗೆ ತೆರೆಯಲಾಗುವುದು ಮತ್ತು ಗಂಗೋತ್ರಿ ದೇವಸ್ಥಾನವನ್ನು ಮಧ್ಯಾಹ್ನ 12.20 ಕ್ಕೆ ತೆರೆಯಲಾಗುವುದು ಎಂದು ದೇವಾಲಯ ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 12 ರಂದು ಬೆಳಗ್ಗೆ 6 ಗಂಟೆಗೆ ಉತ್ತರಾಖಂಡದ 'ಚಾರ್ಧಾಮ್ ಯಾತ್ರೆ'ಯ ಭಾಗವಾಗಿರುವ ಬದರಿನಾಥ್ ದೇವಸ್ಥಾನ ತೆರೆಯಲಾಗುತ್ತದೆ.

ಕೇದಾರನಾಥವನ್ನು 20 ಕ್ವಿಂಟಾಲ್ ಹೂವಿನಿಂದ ಅಲಂಕರಿಸಲಾಗುತ್ತಿದೆ ಎಂದು ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯ ಮಾಧ್ಯಮ ಪ್ರಭಾರಿ ಹರೀಶ್ ಗೌರ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಎಚ್ಚರಿಕೆಗೆ ತಲೆಬಾಗದ ಇರಾನ್​: ಸೌದಿ ನೆಲೆಯಲ್ಲಿ ಕ್ಷಿಪಣಿ ದಾಳಿ; ಅಮೆರಿಕಾದ 5 ಟ್ಯಾಂಕರ್ ವಿಮಾನಗಳಿಗೆ ಹಾನಿ..!

West Asia conflict effect: LPG ಕೊರತೆ ತೀವ್ರ; ಮನೆಗಳಲ್ಲಿ PNG, ಹೋಟೆಲ್ ಗಳು ಕಲ್ಲಿದ್ದಲು ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ

ಹೊಸ ಖಮೇನಿ ಭಯೋತ್ಪಾದಕ ನಾಯಕ; ಆತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಮಿಲಿಯನ್ ಡಾಲರ್ ಬಹುಮಾನ: ಅಮೆರಿಕ

ಒಡಿಶಾ 'ಕೈ' ಶಾಸಕರಿಗೆ' ಟ್ರಬಲ್ ಶೂಟರ್ ಡಿಕೆಶಿ ಆತಿಥ್ಯ: 'ಆಪರೇಷನ್ ಕಮಲ' ತಡೆಗೆ ಕೈಗೊಂಡ ಮುನ್ನೆಚ್ಚರಿಕಾ ಕ್ರಮ; ಕಾಂಗ್ರೆಸ್ ಸಮರ್ಥನೆ

ಬೇಸಿಗೆಯಲ್ಲಿ ಬತ್ತಿದ ಬೋರ್ ವೆಲ್ ಗಳು: ಬೆಂಗಳೂರಿನ ಧೋಬಿ ಘಾಟ್ ಗಳಲ್ಲಿ ನೀರಿನ ಅಭಾವ!

SCROLL FOR NEXT