ನವದೆಹಲಿ: ಭಾರತ ಆಗ್ನೇಯ ಏಷ್ಯಾ ರಾಜಧಾನಿಯಾಗಬೇಕೆಂದು ಬಯಸುತ್ತೇನೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಪ್ರಗತಿಯು ಯಾರಿಗೂ ಅಪಾಯವನ್ನುಂಟುಮಾಡುವುದಿಲ್ಲ ಮತ್ತು ಭಾರತ ಮುಂದುವರೆದಂತೆ, ಪ್ರಪಂಚದ ಹೊರೆ ಕಡಿಮೆಯಾಗುತ್ತದೆ ಎಂದು ಒತ್ತಿ ಹೇಳಿದ್ದಾರೆ. ರಿಪಬ್ಲಿಕ್ ಟಿವಿ ಸಂದರ್ಶನದಲ್ಲಿ, ಪ್ರಧಾನಿ ಮೋದಿ ಅವರು ಭಾರತದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು ಮತ್ತು ಭಾರತ ಆಗ್ನೇಯ ಏಷ್ಯಾದ ರಾಜಧಾನಿಯಾಗಲು ಏಕೆ ಸಾಧ್ಯವಿಲ್ಲ ಎಂದು ಕೇಳಿದರು.
ಈಗ ಭಾರತ ಆಗ್ನೇಯ ಏಷ್ಯಾದ ರಾಜಧಾನಿಯಾಗಬೇಕೆಂದು ನಾನು ಬಯಸುತ್ತೇನೆ ಮತ್ತು ನಾವು ಏಕೆ ಆ ಮನೋಭಾವವನ್ನು ಹೊಂದಿರಬಾರದು? ಪ್ರಪಂಚದ ಎಲ್ಲಾ ದೇಶಗಳು ನಮ್ಮೊಂದಿಗೆ ಸೇರಲು ಏಕೆ ಬಯಸಬಾರದು? ಎಂದು ಕೇಳಿದ ಪ್ರಧಾನಿ, ಕೋಲ್ಕತ್ತಾ ಮತ್ತು ಗುವಾಹಟಿ ಬಹಳ ದೊಡ್ಡ ಕೇಂದ್ರಗಳಾಗಬಹುದು ಎಂದು ಹೇಳಿದರು.
ನಾವು ದೈಹಿಕವಾಗಿ ತುಂಬಾ ಹತ್ತಿರವಾಗಿದ್ದೇವೆ. ಗುವಾಹಟಿ ಅಥವಾ ಕೋಲ್ಕತ್ತಾ ಬಹಳ ದೊಡ್ಡ ಕೇಂದ್ರಗಳಾಗಬಹುದು. ಕೋಲ್ಕತ್ತಾವನ್ನು ಇಡೀ ಆಗ್ನೇಯ ಏಷ್ಯಾಕ್ಕೆ ಏಕೆ ದೊಡ್ಡ ಆಕರ್ಷಕ ಸ್ಥಳವನ್ನಾಗಿ ಮಾಡಬಾರದು? ಆ ದಿಕ್ಕಿನಲ್ಲಿ ಯೋಚಿಸುತ್ತೇನೆ ಮತ್ತು ಭಾರತದ ಪ್ರಗತಿಯು ಯಾರಿಗೂ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಭಾವಿಸುತ್ತೇನೆ. ಭಾರತ ಬಲಿಷ್ಠವಾದಾಗ ಜಗತ್ತು ಕೂಡಾ ಉತ್ತಮ ಎಂದು ಭಾವಿಸುತ್ತದೆ. ಭಾರತವು ಪ್ರಗತಿಯಾದಂತೆ ಪ್ರಪಂಚದ ಹೊರೆ ಕಡಿಮೆಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
"ಭಾರತವು ಶಕ್ತಿಯುತವಾದಾಗ, ಜಗತ್ತು ಚಿಂತಿಸುವುದಿಲ್ಲ, ಜಗತ್ತು ಉತ್ತಮವಾಗಿಯೇ ಭಾವಿಸುತ್ತದೆ ಎಂದು ಹೇಳಿದ ಪ್ರಧಾನಿ ಮೋದಿ, ಹೆಚ್ಚಿದ ಜಿಡಿಪಿ ಮತ್ತು ತಲಾ ಆದಾಯ ಸೇರಿದಂತೆ ಭಾರತದ ಸಾಧನೆಗಳನ್ನು ಅವರು ಹಂಚಿಕೊಂಡರು.ಈಗ ಜಿಡಿಪಿ, ತಲಾ ಆದಾಯವನ್ನು ಹೆಚ್ಚಿಸುತ್ತಿದ್ದೇವೆ ಮತ್ತು ಸೌರಶಕ್ತಿ ಉತ್ಪಾದನೆ ಮಾಡುತ್ತಿದ್ದು, ವಿಶ್ವದ ಆರ್ಥಿಕತೆಯಲ್ಲಿ ಭಾರತದ ಗೌರವ ಹೆಚ್ಚಾಗಿದೆ ಎಂದು ಪ್ರಧಾನಿ ತಿಳಿಸಿದರು.