ಪ್ರಧಾನಿ ಮೋದಿ - ರಾಹುಲ್ ಗಾಂಧಿ 
ದೇಶ

ಪ್ರಧಾನಿ ಮೋದಿ ಟೆಂಪೋ ಬಿಲಿಯನೇರ್‌ಗಳ ಕೈಗೊಂಬೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಟೆಂಪೋ ಬಿಲಿಯನೇರ್'ಗಳ ಕೈಗೊಂಬೆ ಚಕ್ರವರ್ತಿ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಟೆಂಪೋ ಬಿಲಿಯನೇರ್'ಗಳ ಕೈಗೊಂಬೆ ಚಕ್ರವರ್ತಿ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

'ಅದಾನಿ ಮತ್ತು ಅಂಬಾನಿ'ಯಿಂದ ಕಾಂಗ್ರೆಸ್ ಗೆ ಟೆಂಪೋಗಳಲ್ಲಿ ಕಂತೆ ಕಂತೆ ಹಣ ಹೋಗಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಾಗ್ದಾಳಿ ಮುಂದುವರೆಸಿದ್ದು, ಲಖನೌದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರ ತಮ್ಮ ಭಾಷಣದ ಆಯ್ದ ಭಾಗಗಳಿರುವ ವೀಡಿಯೊವನ್ನು ಎಕ್ಸ್‌ನಲ್ಲಿ ಇಂದು ಹಂಚಿಕೊಂಡಿದ್ದಾರೆ.

ವೀಡಿಯೋ ಜೊತೆಗೆ, "ನರೇಂದ್ರ ಮೋದಿ ಪ್ರಧಾನಿ ಅಲ್ಲ, ಅವರು ಒಬ್ಬ ಚಕ್ರವರ್ತಿ. 'ಟೆಂಪೋ ಬಿಲಿಯನೇರ್'ಗಳ ಕೈಗೊಂಬೆ ಚಕ್ರವರ್ತಿ' ಎಂದು ಹಿಂದಿಯಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.

ಲಖನೌದಲ್ಲಿ ನಡೆದ ಸಮಾರಂಭದಲ್ಲಿ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು ಮತ್ತು ಅವರೊಬ್ಬ ‘ಚಕ್ರವರ್ತಿ’ ಎಂದಿದ್ದಾರೆ.

"ಮೋದಿ ಒಬ್ಬ ಚಕ್ರವರ್ತಿ.. ಅವರು ಪ್ರಧಾನಿ ಅಲ್ಲ, ಅವರಿಗೆ ಸಚಿವ ಸಂಪುಟ, ಸಂಸತ್ತು ಅಥವಾ ಸಂವಿಧಾನದೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು 21ನೇ ಶತಮಾನದ ಚಕ್ರವರ್ತಿ ಮತ್ತು ಎರಡ್ಮೂರು ಶ್ರೀಮಂತರಿಗಷ್ಟೇ ನಿಜವಾದ ಶಕ್ತಿ ಇದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

'ಅಂಬಾನಿ ಮತ್ತು ಅದಾನಿ' ಜೊತೆ ಕಾಂಗ್ರೆಸ್ 'ಡೀಲ್' ಮಾಡಿಕೊಂಡಿದೆ ಎಂದು ಕಳೆದ ಬುಧವಾರ ಆರೋಪಿಸಿದ್ದ ಪ್ರಧಾನಿ ಮೋದಿ, ಇಬ್ಬರು ಉದ್ಯಮಿಗಳಿಂದ 'ಟೆಂಪೋ ತುಂಬ ಕಪ್ಪು ಹಣ' ಪಡೆದಿದೆ. ಹೀಗಾಗಿ ರಾಹುಲ್ ಗಾಂಧಿ ಅವರ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಸಭಾ ಸದಸ್ಯತ್ವ ನಿರಾಕರಣೆ

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

Siddaramaiah ರಾಜಿನಾಮೆ: 'ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು, ಆದರೆ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ': BC ಪಾಟೀಲ್ ಭಾವುಕ

ಬೆಂಗಳೂರು ಬಲು ದುಬಾರಿ: ನಮ್ ಊರಲ್ಲಿ ಬಟ್ಟೆ ಇಸ್ತ್ರಿಗೆ ಬರೀ 5 ರೂಪಾಯಿ, ಆದ್ರೆ ಇಲ್ಲಿ 20 ರೂಪಾಯಿ!: ನೊಯ್ಡಾ ನಿವಾಸಿ ಅಚ್ಚರಿ!

SCROLL FOR NEXT