ಗುರುಗ್ರಾಮ: ಪಾರ್ಕಿಂಗ್ ವಿವಾದದಲ್ಲಿ ಯುವನಕೋರ್ವ ನೆರೆಮನೆಯವರಿಂದ ಹತ್ಯೆಗೀಡಾಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಘಟನೆಯ ಮೃತ ವ್ಯಕ್ತಿಯ ತಾಯಿ ಹಾಗೂ ಸಹೋದರನಿಗೆ ಗಾಯಗಳಾಗಿವೆ.
ರಿಷಭ್ ಜಸುಜಾ ಕೆಲಸದಿಂದ ವಾಪಸ್ಸಾಗಿ ಮನೋಜ್ ಭಾರದ್ವಾಜ್ ನಿವಾಸದೆದುರು ಕಾರು ನಿಲ್ಲಿಸಿದ್ದರು. ಇದು ಜಸೌಜಾ ಸಹೋದರರು ಹಾಗೂ ಮನೋಜ್ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಮನೋಜ್, ಪಾರ್ಕಿಂಗ್ ವಿಚಾರವಾಗಿ ರಿಷಭ್ ಜೊತೆ ಈ ಹಿಂದೆವಾಗ್ವಾದಗಳಲ್ಲಿ ತೊಡಗಿದ್ದರು. ಈ ಬಾರಿಯೂ ಕಾರು ನಿಲ್ಲಿಸಿದಾಗ ರಿಷಭ್ ಮನೋಜ್ ಸಹೋದರರೊಂದಿಗೆ ವಾಗ್ವಾದಕ್ಕೆ ಮುಂದಾಗಿದ್ದಾರೆ.
ಮನೋಜ್ ರಿಷಭ್ ಹಾಗೂ ಆತನ ಸಹೋದರ ರಂಜಕ್ ಮೇಲೆ ಹಲ್ಲೆಗೆ ನಡೆಸಿದ್ದಾನೆ. ಉದ್ದೇಶಪೂರ್ವಕವಾಗಿ ತನ್ನ ಹುಂಡೈ ಕ್ರೆಟಾವನ್ನು ಸಹೋದರತ್ತ ನುಗ್ಗಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ರಿಷಬ್ ಸ್ಥಳದಲ್ಲೇ ಮೃತಪಟ್ಟರೆ, ರಂಜಾಕ್ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆ ನಡೆದ ತಕ್ಷಣ ದಾಳಿಕೋರ ಸ್ಥಳದಿಂದ ಪರಾರಿಯಾಗಿದ್ದಾನೆ. ಗುರುಗ್ರಾಮ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಹಿಡಿಯಲು ಶೋಧ ಕಾರ್ಯ ಆರಂಭಿಸಿದ್ದಾರೆ.