ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರಿಂದ ಹಲ್ಲೆ ಆರೋಪ ಮಾಡಿರುವ ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಅವರ ಎಡಗಾಲು ಮತ್ತು ಬಲ ಕೆನ್ನೆಯ ಮೇಲೆ ಮೂಗೇಟುಗಳಿವೆ ಎಂದು ಅವರ ವೈದ್ಯಕೀಯ ವರದಿ ತಿಳಿಸಿದೆ.
ಸೋಮವಾರ ಸಿಎಂ ನಿವಾಸದಲ್ಲಿ ತನ್ನ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಕುಮಾರ್ ವಿರುದ್ಧ ಮಲಿವಾಲ್ ಎಫ್‌ಐಆರ್ ದಾಖಲಿಸಿದ್ದಾರೆ. ಕುಮಾರ್ ತನ್ನ ಮೇಲೆ ಮತ್ತೆ ಮತ್ತೆ ಪೂರ್ಣ ಬಲದಿಂದ ಹೊಡೆದಿದ್ದಾನೆ ಮತ್ತು ಆಕೆಗೆ "ಏಳರಿಂದ ಎಂಟು ಬಾರಿ ಒದೆದು, ಕಪಾಳ ಮೋಕ್ಷ ಮಾಡಿರುವುದಾಗಿ ಮಲಿವಾಲ್ ಹೇಳಿದ್ದಾರೆ.
ಶುಕ್ರವಾರ ಮಲಿವಾಲ್ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. AIIMS ನಿಂದ ಮಾಡಿದ ಅವರ ವೈದ್ಯಕೀಯ-ಕಾನೂನು ಪ್ರಮಾಣಪತ್ರದ ಪ್ರಕಾರ, ಮಲಿವಾಲ್ ಅವರ ಎಡಗಾಲಿನಲ್ಲಿ ಸರಿ ಸುಮಾರು 3x2 cm ಗಾತ್ರದ ಮೂಗೇಟು ಆಗಿದ್ದರೆ, ಅವರ ಬಲ ಕೆನ್ನೆಯಲ್ಲಿ 2x2 cm ಗಾತ್ರದ ಗಾಯವಾಗಿರುವುದಾಗಿ ಹೇಳಲಾಗಿದೆ.