ಆತ್ಮಹತ್ಯೆ online desk
ದೇಶ

ಚೆನ್ನೈ: 4ನೇ ಮಹಡಿಯಿಂದ ಬಿದ್ದ ಮಗು ರಕ್ಷಣೆ ಪ್ರಕರಣ; ನಿರ್ಲಕ್ಷ್ಯ ಕುರಿತು ಟೀಕೆ ಬೆನ್ನಲ್ಲೇ ತಾಯಿ ಆತ್ಮಹತ್ಯೆಗೆ ಶರಣು!

ಚೆನ್ನೈನ ಅಪಾರ್ಟ್​ಮೆಂಟ್​ನ ಬಾಲ್ಕನಿಯೊಂದರಿಂದ ಬೀಳುತ್ತಿದ್ದ ಮಗುವನ್ನು ರಕ್ಷಣೆ ಮಾಡಿ ವಾರಗಳ ಬಳಿಕ ಮಗುವಿನ ತಾಯಿ ಶವವಾಗಿ ಪತ್ತೆಯಾಗಿದ್ದಾರೆ.

ಚೆನ್ನೈ: ಚೆನ್ನೈನ ಅಪಾರ್ಟ್​ಮೆಂಟ್​ನ ಬಾಲ್ಕನಿಯೊಂದರಿಂದ ಬೀಳುತ್ತಿದ್ದ ಮಗುವನ್ನು ರಕ್ಷಣೆ ಮಾಡಿ ವಾರಗಳ ಬಳಿಕ ಮಗುವಿನ ತಾಯಿ ಶವವಾಗಿ ಪತ್ತೆಯಾಗಿದ್ದಾರೆ.

ಏಪ್ರಿಲ್​ 28ರಂದು ಎಂಟು ತಿಂಗಳ ಪುಟ್ಟ ಮಗು ಅಪಾರ್ಟ್​ಮೆಂಟ್​ನ ಮೇಲ್ಛಾವಣಿಯ ಶೀಟ್​ ಮೇಲೆ ನೇತಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಘಟನೆಯಲ್ಲಿ ಮಗುವನ್ನು ರಕ್ಷಣೆ ಮಾಡಲಾಗಿತ್ತು.

ಬಳಿಕ ಮಗುವನ್ನು ರಕ್ಷಣೆ ಮಾಡಿದವರನ್ನು ಪ್ರಶಂಸೆ ಮಾಡಲಾಯಿತಾದರೂ ಮಗುವಿನ ತಾಯಿಯ ನಿರ್ಲಕ್ಷ್ಯದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು.

ಇದರಿಂದ ಮನನೊಂದ ಮಗುವಿನ ತಾಯಿ ಟೆಕ್ಕಿ ರಮ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾರಮಡೈಯಲ್ಲಿರುವ ತವರು ಮನೆಯಲ್ಲಿ ಭಾನುವಾರ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ರಮ್ಯಾ ಚೆನ್ನೈನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಪತಿ ವೆಂಕಟೇಶ್ ಕೂಡ ಐಟಿ ಉದ್ಯೋಗಿ. ಎರಡು ವಾರಗಳ ಹಿಂದೆ ರಮ್ಯಾ ಮತ್ತು ಅವರ ಪತಿ ತಮ್ಮ ಮಗುವಿನೊಂದಿಗೆ ಕರಾಮಡೈನಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು.

ಭಾನುವಾರದಂದು ಪೋಷಕರು ಶುಭ ಸಮಾರಂಭದಲ್ಲಿ ಭಾಗವಹಿಸಲು ಮನೆಯಿಂದ ತೆರಳಿದ್ದರು. ಇತ್ತ ರಮ್ಯಾ ಮನೆಯಲ್ಲಿ ಒಬ್ಬಳೇ ಇದ್ದರು. ಇದೇ ಸಮಯವನ್ನು ನೋಡಿಕೊಂಡ ರಮ್ಯಾ, ಆತ್ಮಹತ್ಯೆಗೆ ಶರಣಾಗಿದ್ದಾರೆನ್ನಲಾಗಿದೆ.

ಇನ್ನು ಸಮಾರಂಭ ಮುಗಿಸಿ ಹಿಂದಿರುಗಿದ ಪೋಷಕರಿಗೆ ಆಘಾತವಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಮ್ಯಾರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಏನಿದು ಘಟನೆ?

ಏಪ್ರಿಲ್ 28 ರಂದು ರಮ್ಯಾ ಅವರ 7 ತಿಂಗಳ ಮಗು ಕೈಜಾರಿ 4ನೇ ಮಹಡಿಯಿಂದ ಮೊದಲ ಮಹಡಿಯ ಶೆಡ್ ಮೇಲೆ ಬಿದ್ದಿತ್ತು. ಬಳಿಕ ಸ್ಥಳೀಯರು ಸೇರಿ ಮಗುವನ್ನು ರಕ್ಷಿಸಿದ್ದರು. ಇದಾದ ಬಳಿಕ ರಮ್ಯಾ ಸ್ಥಳೀಯರಿಂದ ಹಾಗೂ ಸಾಮಾಜಿಕ ಜಾಲದಲ್ಲಿ ಭಾರೀ ಟಿಕೆಗೆ ಒಳಗಾಗಿದ್ದರು.

ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ತಾಯಿಯ ನಿರ್ಲಕ್ಷ್ಯವೇ ಕಾರಣ. ತಾಯಿ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ. ಹೀಗಾಗಿ ಈ ಘಟನೆ ನಡೆಯಲು ತಾಯಿಯೇ ನೇರ ಕಾರಣ ಎಂದೆಲ್ಲ ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗಿತ್ತು. ಇದರಿಂದ ರಮ್ಯ ಮನೊಂದಿದ್ದರು.

ಇಷ್ಟು ಮಾತ್ರವಲ್ಲದೇ ಕೆಲ ಸುದ್ದಿ ವಾಹಿನಿಗಳಿಗೆ ಬೈಟ್‌ ಕೊಟ್ಟಿದ್ದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಕೂಡ ತಾಯಿಯ ವೈಫಲ್ಯವೇ ಈ ಘಟನೆಗೆ ಕಾರಣ ಎಂದು ಬಿಂಬಿಸುವಂತಹ ಹೇಳಿಕೆಗಳನ್ನು ನೀಡಿದ್ದರು.

ಈ ಎಲ್ಲಾ ಅವಮಾನಗಳು, ಹೇಳಿಕೆಗಳು ರಮ್ಯಾ ಅವರನ್ನು ಖಿನ್ನತೆಗೆ ದೂಡಿತು. ಅಂತಿಮವಾಗಿ ಅವರ ಸಾವಿಗೆ ಕಾರಣವಾಗಿದೆ. ಪ್ರಕರಣ ಸಂಬಂಧ ಕರಮಡೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT