ಹೀಟ್ ವೇವ್ ಗೆ ಉತ್ತರ ಭಾರತ ತತ್ತರ 
ದೇಶ

Heatwaveಗೆ ತತ್ತರಿಸಿದ ಉತ್ತರ ಭಾರತ: ರಾಜಸ್ತಾನದ ಬಾರ್ಮರ್ ನಲ್ಲಿ 48.8 ಡಿಗ್ರಿ ತಾಪಮಾನ, 5 ಸಾವು!

ಬೇಸಿಗೆ ಧಗೆ ಮತ್ತು ಹೀಟ್ ವೇವ್ ಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ದಿನೇ ದಿನೇ ಏರಿಕೆಯಾಗುತ್ತಿರುವ ತಾಪಮಾನ ಜನರನ್ನು ಹೈರಾಣಾಗಿಸಿದೆ.

ನವದೆಹಲಿ: ಬೇಸಿಗೆ ಧಗೆ ಮತ್ತು ಹೀಟ್ ವೇವ್ ಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ದಿನೇ ದಿನೇ ಏರಿಕೆಯಾಗುತ್ತಿರುವ ತಾಪಮಾನ ಜನರನ್ನು ಹೈರಾಣಾಗಿಸಿದೆ.

ಹೌದು.. ಕಳೆದೊಂದು ವಾರದಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಉಷ್ಣ ಹವೆ ವ್ಯಾಪಕ ತಾಪಮಾನ ಏರಿಕೆಗೆ ಕಾರಣವಾಗಿದ್ದು, ದೆಹಲಿ, ರಾಜಸ್ತಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನ ಈಗಾಗಲೇ 45 ಡಿಗ್ರಿ ದಾಟಿದೆ. ಅಂತೆಯೇ ರಾಜಸ್ತಾನದಲ್ಲಿ ಉಷ್ಣಹವೆಗೆ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ರಾಜಸ್ತಾನದ ಜಲೋರ್ ಜಿಲ್ಲಾ ಆಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ನಿಂದ ಅನಾರೋಗ್ಯಕ್ಕೆ ತುತ್ತಾಗಿ ದಾಖಲಾಗಿದ್ದ ರೋಗಿಗಳ ಪೈಕಿ ಓರ್ವ ಮಹಿಳೆ ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಮೂವರು ಜಲೋರ್ ಜಿಲ್ಲೆಯವರಾಗಿದ್ದರೆ, ನಾಲ್ಕನೆಯವರು ಗುಜರಾತ್‌ನ ಪಕ್ಕದ ದಿಫಾ ಗ್ರಾಮದವರಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಆರ್ ಎಸ್ ಭಾರ್ತಿ ತಿಳಿಸಿದ್ದಾರೆ.

ಅಂತೆಯೇ ಬೋಲತ್ರಾದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಆತ ಕೂಡ ಹೀಟ್ ಸ್ಟ್ರೋಕ್ ನಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಸುಶೀಲ್ ಕುಮಾರ್ ತಿಳಿಸಿದ್ದಾರೆ.

ಕಳೆದ ಹತ್ತು ದಿನಗಳಿಂದ, ರಾಜಸ್ಥಾನ ಬಿರುಸಿನ ಶಾಖದ ವಾತಾವರಣದಿಂದ ತತ್ತರಿಸುತ್ತಿದೆ. ನಗರಗಳು ಮತ್ತು ಹೆದ್ದಾರಿಗಳಲ್ಲಿ ಸಾಮಾನ್ಯ ಜೀವನ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ರಾಜಸ್ತಾನದ ಫಲೋಡಿಯಲ್ಲಿ ಗರಿಷ್ಠ 48.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜೈಸಲ್ಮೇರ್ ನಲ್ಲಿ 47.5, ಜಲೋರ್ 47.3, ಜೋಧ್‌ಪುರ 47.4, ಭಿಲ್ವಾರ 46 ಮತ್ತು ಜೈಪುರದಲ್ಲಿ 44 ಡಿಗ್ರಿ ಸೆಲ್ಸಿಯಸ್ ಮತ್ತು ಬಾರ್ಮರ್ ನಲ್ಲಿ 48.8 ಡಿಗ್ರಿ ತಾಪಮಾನ ದಾಖಲಾಗಿದೆ.

ಮಹಾರಾಷ್ಟ್ರದ ಔರಾಂಗಾಬಾದ್ ನಲ್ಲಿ ಗರಿಷ್ಠ 43.5 ಡಿಗ್ರಿ ತಾಪಮಾನ ದಾಖಲಾಗಿದ್ದು, ಮಾಲೇಗಾಂವ್, ಬ್ರಹ್ಮಪುರಿ, ಬೀಡ್, ಅಮರಾವತಿ ಮತ್ತು ಯವತ್ಮಾಲ್ ನಲ್ಲಿ ತಾಪಮಾನ 42 ಡಿಗ್ರಿ ಗಡಿ ದಾಟಿದೆ. ಮಧ್ಯ ಪ್ರದೇಶದಲ್ಲೂ ದಮೋಹ್, ಧರ್, ಖಾರ್ಗಾಂವ್, ಖಂಡ್ವಾ, ಉಜ್ಜೈನ್, ಶಿವಪುರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ 45 ಡಿಗ್ರಿ ದಾಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT