ಭಗತ್ ಸಿಂಗ್ 
ದೇಶ

'Bhagat Singh ಭಯೋತ್ಪಾದಕ' ಎಂದ ಪಾಕಿಸ್ತಾನ: ಬಿಜೆಪಿ, ಎಎಪಿ ತೀವ್ರ ಆಕ್ರೋಶ, ದಾಖಲೆ ಸರಿಪಡಿಸುವಂತೆ ಆಗ್ರಹ!

ಶಾಹೀದ್ ಭಗತ್ ಸಿಂಗ್ ಅವರ ಗೌರವಾರ್ಥವಾಗಿ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಶಾದ್ಮನ್ ಚೌಕ್ ಗೆ ಅವರ ಹೆಸರನ್ನು ಮರುನಾಮಕರಣ ಮಾಡುವ ಯೋಜನೆಯನ್ನು ಪಾಕಿಸ್ತಾನ ರದ್ದುಪಡಿಸಿದ್ದು ಮಾತ್ರವಲ್ಲದೇ ಅವರನ್ನು ಉಗ್ರಗಾಮಿ ಎಂದು ಕರೆದಿದೆ.

ಲಾಹೋರ್: ಸ್ವಾತಂತ್ರ್ಯ ಹೋರಾಟಗಾರ ಶಾಹೀದ್ ಭಗತ್ ಸಿಂಗ್ ಅವರನ್ನು ಪಾಕಿಸ್ತಾನ ಉಗ್ರಗಾಮಿ ಎಂದು ಅಪಮಾನ ಮಾಡಿರುವ ಘಟನೆ ವರದಿಯಾಗಿದ್ದು, ಪಾಕಿಸ್ತಾನದ ವಿರುದ್ಧ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಶಾಹೀದ್ ಭಗತ್ ಸಿಂಗ್ ಅವರ ಗೌರವಾರ್ಥವಾಗಿ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಶಾದ್ಮನ್ ಚೌಕ್ ಗೆ ಅವರ ಹೆಸರನ್ನು ಮರುನಾಮಕರಣ ಮಾಡುವ ಯೋಜನೆಯನ್ನು ಪಾಕಿಸ್ತಾನ ರದ್ದುಪಡಿಸಿದ್ದು ಮಾತ್ರವಲ್ಲದೇ ಅವರನ್ನು ಉಗ್ರಗಾಮಿ ಎಂದು ಕರೆದಿದೆ.

ಪಾಕಿಸ್ತಾನದ ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರು ನೀಡಿದ ವರದಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ರನ್ನು 'ಭಯೋತ್ಪಾದಕ' ಎಂದು ಹಣೆಪಟ್ಟಿ ನೀಡಿದ ಬಳಿಕ ಲಾಹೋರ್‌ನಲ್ಲಿರುವ ಶಾದ್ಮನ್ ಚೌಕ್ ಗೆ ಅವರ ಹೆಸರನ್ನು ಮರುನಾಮಕರಣ ಮಾಡುವ ಯೋಜನೆಯನ್ನು ರದ್ದು ಪಡಿಸಲಾಗಿತ್ತು. ಇದೀಗ ಪಾಕಿಸ್ತಾನದ ಈ ನಡೆಯನ್ನು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ.

ಪಾಕಿಸ್ತಾನದಲ್ಲಿ ಭಗತ್ ಸಿಂಗ್ ರನ್ನು ಗೌರವಿಸುವುದು ಹಾಗಿರಲಿ.. ಆದರೆ ಅವರಿಗೆ ಅಪಮಾನ ಮಾಡುವುದು ಸರಿಯಲ್ಲ. ಈ ವಿಚಾರದಲ್ಲಿ ಕೂಡಲೇ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕು. ಅಲ್ಲದೆ ಪಾಕಿಸ್ತಾನದಿಂದ ವರದಿ ತರಿಸಿಕೊಳ್ಳಿ ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ. ಅಲ್ಲದೆ ಭವಿಷ್ಯದಲ್ಲಿ ಭಗತ್ ಸಿಂಗ್ ಅವರ ಬಗ್ಗೆ ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ತಡೆಯಲು ಈ ಟೀಕೆಗಳನ್ನು ದಾಖಲೆಗಳಿಂದ ತೆಗೆದುಹಾಕುವಂತೆ ಲಾಹೋರ್ ಹೈಕೋರ್ಟ್‌ಗೆ ಮನವಿ ಮಾಡಿದೆ.

ಏತನ್ಮಧ್ಯೆ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಕೂಡ ಪಾಕಿಸ್ತಾನದ ಈ ಕ್ರಮವನ್ನು ಖಂಡಿಸಿದ್ದು, 'ಅವಿಭಜಿತ ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ವೀರನನ್ನು ನಿಂದಿಸಲು ಭಯೋತ್ಪಾದಕರಿಗೆ ಆಶ್ರಯ ನೀಡುವುದಕ್ಕೆ ಹೆಸರುವಾಸಿಯಾದ ರಾಷ್ಟ್ರವು ಮುಂದಾಗಿದೆ. ಇದು ಕೇವಲ ಅದರ "ಬೂಟಾಟಿಕೆ" ಎಂದು ಕರೆದಿದೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್ ಸಿಂಗ್ ಅವರಂತಹ ವ್ಯಕ್ತಿಗಳನ್ನು ಗುರುತಿಸುವಲ್ಲಿ ಪಾಕಿಸ್ತಾನದ ದ್ವಂದ್ವ ನೀತಿಯ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಏಕಕಾಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದಾರೆ. ನಿಜವಾದ ಹೀರೋಗೆ ಅಗೌರವ ತೋರಿದ ಪಾಕಿಸ್ತಾನಕ್ಕೆ ನಾಚಿಕೆಯಾಗಬೇಕು ಎಂದು ಪಂಜಾಬ್ ಬಿಜೆಪಿ ವಕ್ತಾರ ಪ್ರೀತ್ಪಾಲ್ ಸಿಂಗ್ ಬಲಿವಾಲ್ ಹೇಳಿದ್ದಾರೆ.

ಭಗತ್ ಸಿಂಗ್ ಕ್ರಾಂತಿಕಾರಿಯಲ್ಲ.. ಉಗ್ರ ಎಂದಿದ್ದ ಪಾಕ್ ಮಾಜಿ ಸೇನಾಧಿಕಾರಿ

ಇನ್ನು ಪಾಕಿಸ್ತಾನದ ಮೆಟ್ರೋಪಾಲಿಟನ್ ಕಾರ್ಪೊರೇಷನ್ ಆಫ್ ಲಾಹೋರ್ ಸಂಸ್ಛೆಯು ಲಾಹೋರ್ ನ ಶಾದ್ಮನ್ ಚೌಕ್ ಗೆ ಭಗತ್ ಸಿಂಗ್ ಹೆಸರಿಡುವ ನಿರ್ಧಾರವನ್ನು ರದ್ದು ಮಾಡಿರುವ ಕುರಿತು ಲಾಹೋರ್ ಹೈಕೋರ್ಟ್‌ಗೆ ಮಾಹಿತಿ ನೀಡಿದ ಬಳಿಕ ಈ ವಿವಾದ ಭುಗಿಲೆದ್ದಿತು.

ಪಾಕಿಸ್ತಾನದ ನಿವೃತ್ತ ಸೇನಾಧಿಕಾರಿ ನಿವೃತ್ತ ಕಮೋಡೋರ್ ತಾರಿಕ್ ಮಜೀದ್ ಎಂಬಾತ, 'ಭಗತ್ ಸಿಂಗ್ ಒಬ್ಬ ಕ್ರಾಂತಿಕಾರಿ ಅಲ್ಲ, ಆದರೆ ಬ್ರಿಟಿಷ್ ಪೊಲೀಸ್ ಅಧಿಕಾರಿಯನ್ನು ಕೊಂದ "ಅಪರಾಧಿ" ಮತ್ತು ಇಂದಿನ ಪರಿಭಾಷೆಯಲ್ಲಿ ಆತ "ಭಯೋತ್ಪಾದಕ".. ಭಗತ್ ಸಿಂಗ್ ಇಬ್ಬರು ಸಹಚರರೊಂದಿಗೆ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ 1931 ರಲ್ಲಿ ಗಲ್ಲಿಗೇರಿಸಲಾಯಿತು ಎಂದು ಪ್ರತಿಪಾದಿಸಿದ್ದ.

ತಾರಿಕ್ ಮಜೀದ್ ನ ಈ ವರದಿಯ ನಂತರ ಶಾದ್ಮನ್ ಚೌಕ್ ಗೆ ಭಗತ್ ಸಿಂಗ್ ಹೆಸರಿಡುವ ನಿರ್ಧಾರವನ್ನು ರದ್ದು ಮಾಡುವ ನಿರ್ಧಾರಕ್ಕೆ ಬರಲಾಯಿತು ಎಂದು ಪಾಕಿಸ್ತಾನದ ಮೆಟ್ರೋಪಾಲಿಟನ್ ಕಾರ್ಪೊರೇಷನ್ ಆಫ್ ಲಾಹೋರ್ ಸಂಸ್ಛೆ ಕೋರ್ಟ್ ಗೆ ಹೇಳಿತ್ತು.

ಭಗತ್ ಸಿಂಗ್ ಗಾದ ಅಪಮಾನ ಸಹಿಸಲಸಾಧ್ಯ

ದೆಹಲಿಯ ಆನಂದ್‌ಪುರ ಸಾಹಿಬ್‌ನ ಸಂಸದ ಮತ್ತು ಎಎಪಿ ನಾಯಕ ಮಲ್ವಿಂದರ್ ಸಿಂಗ್ ಕಾಂಗ್, ಪಾಕಿಸ್ತಾನದ ಕ್ರಮಗಳನ್ನು ಖಂಡಿಸಿದ್ದು, "ಅತ್ಯಂತ ಅಗೌರವ" ಎಂದು ಕರೆದಿದ್ದಾರೆ. ಈ ಬಗ್ಗೆ ಭಾರತ ಸರ್ಕಾರ ಮಧ್ಯಪ್ರವೇಶಿಸಿ ಪಾಕಿಸ್ತಾನದಿಂದ ವಿವರಣೆ ಪಡೆಯಬೇಕು ಎಂದು ಒತ್ತಾಯಿಸಿದರು. “ಭಗತ್ ಸಿಂಗ್ ಅವಮಾನವನ್ನು ನಾವು ಸಹಿಸುವುದಿಲ್ಲ. ಕೇಂದ್ರ ಸರ್ಕಾರವು ಈ ವಿಷಯವನ್ನು ಪಾಕಿಸ್ತಾನದೊಂದಿಗೆ ಚರ್ಚಿಸಬೇಕು. ಅಂತಹ ಅವಹೇಳನಕಾರಿ ಹೇಳಿಕೆಗಳನ್ನು ಅವರ ದಾಖಲೆಗಳಿಂದ ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಬೇಕು.

ಭಗತ್ ಸಿಂಗ್ ಮತ್ತು ಡಾ ಅಂಬೇಡ್ಕರ್ ಅವರ ವಿಚಾರಧಾರೆಗಳು ಮತ್ತು ಅವರ ಚಿಂತನೆಗಳು ನಮ್ಮ ಮೂಲಭೂತ ತತ್ವಗಳಾಗಿವೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಮೊದಲು ಭಗತ್ ಸಿಂಗ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ವೀರರಾಗಿದ್ದು, ಇಡೀ ರಾಷ್ಟ್ರಕ್ಕಾಗಿ ಹುತಾತ್ಮರಾಗಿದ್ದರು. ಕೇವಲ 23 ನೇ ವಯಸ್ಸಿನಲ್ಲಿ, ಭಗತ್ ಸಿಂಗ್ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಅವರ ಪರಂಪರೆಯು ಧೈರ್ಯದಿಂದ ಕೂಡಿದೆ ಮತ್ತು ಸ್ವತಂತ್ರ ಭಾರತಕ್ಕಾಗಿ ಅವರ ದೃಷ್ಟಿಕೋನವು ಪೀಳಿಗೆಗೆ ಸ್ಫೂರ್ತಿ ನೀಡಿದೆ. ಆ ಪರಂಪರೆಯನ್ನು ಅಳಿಸಲು ಪಾಕಿಸ್ತಾನದ ಪ್ರಯತ್ನವನ್ನು ನಾವು ಖಂಡಿಸುತ್ತೇವೆ ಎಂದು ಕಾಂಗ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT