ನರೇಶ್ ಗೋಯಲ್ 
ದೇಶ

ಕ್ಯಾನ್ಸರ್ ಚಿಕಿತ್ಸೆಗಾಗಿ ನರೇಶ್ ಗೋಯಲ್ ಗೆ ಖಾಯಂ ಜಾಮೀನು

ಈ ವರ್ಷದ ಮೇನಲ್ಲಿ ನ್ಯಾಯಮೂರ್ತಿ ಎನ್‌ಜೆ ಜಮಾದಾರ್ ಅವರ ಏಕ ಸದಸ್ಯ ಪೀಠ ವೈದ್ಯಕೀಯ ಕಾರಣಗಳಿಗಾಗಿ ಗೋಯಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು.

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ, ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್‌ ಅವರಿಗೆ ಬಾಂಬೆ ಹೈಕೋರ್ಟ್ ಸೋಮವಾರ ಖಾಯಂ ಜಾಮೀನು ಮಂಜೂರು ಮಾಡಿದೆ.

ಈ ವರ್ಷದ ಮೇನಲ್ಲಿ ನ್ಯಾಯಮೂರ್ತಿ ಎನ್‌ಜೆ ಜಮಾದಾರ್ ಅವರ ಏಕ ಸದಸ್ಯ ಪೀಠ ವೈದ್ಯಕೀಯ ಕಾರಣಗಳಿಗಾಗಿ ಗೋಯಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ನ್ಯಾಯಮೂರ್ತಿ ಜಮಾದಾರ್ ಅವರು ಇಂದು ಮಧ್ಯಂತರ ಆದೇಶವನ್ನು ಖಾಯಂಗೊಳಿಸಿದ್ದಾರೆ.

ಗೋಯಲ್ (75) ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಜಾಮೀನು ಕೋರಿದ್ದರು. ಜಾರಿ ನಿರ್ದೇಶನಾಲಯ (ಇಡಿ) ಅವರ ಮನವಿಯನ್ನು ವಿರೋಧಿಸಿತ್ತು ಮತ್ತು ಕಸ್ಟಡಿಯಲ್ಲಿರುವಾಗ ಅವರ ಆಯ್ಕೆಯ ಆಸ್ಪತ್ರೆಗೆ ದಾಖಲಿಸಬಹುದು ಮತ್ತು ಚಿಕಿತ್ಸೆ ಪಡೆಯಬಹುದು ಎಂದು ಹೇಳಿತ್ತು. ಆದರೆ ಮೇ ತಿಂಗಳಲ್ಲಿ, ಹೈಕೋರ್ಟ್ ಎರಡು ತಿಂಗಳ ಅವಧಿಗೆ ಗೋಯಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ನಂತರ ಅದನ್ನು ನಾಲ್ಕು ವಾರಗಳವರೆಗೆ ಮತ್ತು ನಂತರ ಮತ್ತೆ ಎರಡು ತಿಂಗಳವರೆಗೆ ವಿಸ್ತರಿಸಲಾಯಿತು.

ಕೆನರಾ ಬ್ಯಾಂಕ್‌ನಿಂದ ಜೆಟ್ ಏರ್‌ವೇಸ್‌ಗೆ 538.62 ಕೋಟಿ ರೂ. ಸಾಲ ಪಡೆದು ವಂಚಿಸಿದ್ದಾರೆ ಮತ್ತು ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಇಡಿ ಸೆಪ್ಟೆಂಬರ್ 2023 ರಲ್ಲಿ ಗೋಯಲ್ ಅವರನ್ನು ಬಂಧಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT