ಇಂಡಿಯಾ ಗೇಟ್ ಬಳಿ ಯುವತಿಯಿಂದ ಟವಲ್ ರೀಲ್ಸ್ 
ದೇಶ

ಪುರುಷರ ದಿನ: ಬರೀ ಟವೆಲ್‌ ಸುತ್ತಿಕೊಂಡು India Gate ಬಳಿ Dance ಮಾಡಿದ ಯುವತಿ, Video ವೈರಲ್

ಕೋಲ್ಕತ್ತಾ ಮೂಲದ ಮಾಡೆಲ್‌ ಸನ್ನತಿ ಮಿತ್ರಾ (sannati__) ಎಂಬಾಕೆ ದೆಹಲಿಯ ಪ್ರವಾಸಿ ತಾಣ ಇಂಡಿಯಾ ಗೇಟ್‌ ಬಳಿ ಬರೀ ಟವೆಲ್‌ ಸುತ್ತಿ ರೀಲ್ಸ್‌ ಮಾಡಿದ್ದಾರೆ.

ನವದೆಹಲಿ: ವಿಶ್ವ ಪುರುಷರ ದಿನದಂದು ಮಹಿಳಾ ರೂಪದರ್ಶಿಯೊಬ್ಬರು ಇಂಡಿಯಾ ಗೇಟ್ ಬಳಿ ಬರೀ ಟವೆಲ್ ಸುತ್ತಿಕೊಂಡು ನೃತ್ಯ ಮಾಡುವ ಮೂಲಕ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಮೂಲಗಳ ಪ್ರಕಾರ ಕೋಲ್ಕತ್ತಾ ಮೂಲದ ಮಾಡೆಲ್‌ ಸನ್ನತಿ ಮಿತ್ರಾ (sannati__) ಎಂಬಾಕೆ ದೆಹಲಿಯ ಪ್ರವಾಸಿ ತಾಣ ಇಂಡಿಯಾ ಗೇಟ್‌ ಬಳಿ ಬರೀ ಟವೆಲ್‌ ಸುತ್ತಿ ರೀಲ್ಸ್‌ ಮಾಡಿದ್ದಾರೆ.

ನಿನ್ನೆ ಅಂತಾರಾಷ್ಟ್ರೀಯ ಪುರುಷರ ದಿನದ ಅಂಗವಾಗಿ ಆಕೆ ಈ ರೀಲ್ಸ್‌ ಮಾಡಿದ್ದು, ಈ ವಿಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ.

ಅಲ್ಲದೆ ವಿಡಿಯೋದಲ್ಲಿ “ಅಂತರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾಳೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ಸನ್ನತಿ ಒಂದು ಬಿಳಿ ಟವೆಲ್‌ ಸುತ್ತಿಕೊಂಡು ಡಾನ್ಸ್‌ ಮಾಡುವ ದೃಶ್ಯವನ್ನು ಕಾಣಬಹುದು. ಹಿಂದಿ ಹಾಡೊಂದಕ್ಕೆ ಲಿಪ್‌ ಸಿಂಕ್‌ ಮಾಡುತ್ತಾ ಡಾನ್ಸ್‌ ಮಾಡಿದ್ದಾಳೆ.

ವ್ಯಾಪಕ ಆಕ್ರೋಶ

ಸಾವಿರಾರು ಪ್ರವಾಸಿಗರು ಭೇಟಿ ನೀಡುವಂತಹ ಸಾರ್ವಜನಿಕ ಸ್ಥಳದಲ್ಲಿ ಆಕೆ ನಡೆದುಕೊಂಡ ರೀತಿಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ.

ವಿಡಿಯೋ ವೈರಲ್

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 6.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋಗೆ ಪರ-ವಿರೋಧ ಟೀಕೆಗಳು ವ್ಯಕ್ತವಾಗುತ್ತಿದ್ದು, ಒಬ್ಬ ಬಳಕೆದಾರರು 'ಮೊದಲು ಆಕೆಯನ್ನು ಅರೆಸ್ಟ್‌ ಮಾಡಿ' ಎಂದು ಕಿಡಿಕಾರಿದ್ದರೆ ಮತ್ತೋರ್ವ ಬಳಕೆದಾರರು 'ಆಕೆ ತನ್ನ ಎಲ್ಲಾ ಮಿತಿಗಳನ್ನು ಮೀರಿ ವರ್ತಿಸುತ್ತಿದ್ದಾಳೆ' ಟೀಕಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರಚಾರ ಮತ್ತು ಹೆಚ್ಚು ಫಾಲೋವರ್ಸ್ ಮತ್ತು ಲೈಕ್ ಗಳಿಗಾಗಿ ಕೆಲ ಕಟೆಂಟ್ ಕ್ರಿಯೇಟರ್ ಗಳು ಅಶ್ಲೀಲ ವಿಡಿಯೋಗಳನ್ನು ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ ಎಂದು ಮತ್ತೋರ್ವ ಬಳಕೆದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT