ಮಾಜಿ -CJI ಚಂದ್ರಚೂಡ್ 
ದೇಶ

ಮಾಜಿ CJI ಚಂದ್ರಚೂಡ್ ಈ ಕ್ರಿಕೆಟಿಗರ ಅಭಿಮಾನಿಯಂತೆ!

ಸದ್ಯದ ಪರಿಸ್ಥಿತಿಯಲ್ಲಿ ನನಗೆ ಇಬ್ಬರು ಫೇವರಿಟ್‌ಗಳಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ. ಹಿಂದಿನ ಕ್ರಿಕೆಟಿಗರಲ್ಲಿ ರಾಹುಲ್ ದ್ರಾವಿಡ್ ಅವರ ಅಭಿಮಾನಿ. ಅವರು ಯಾವಾಗಲೂ ಸ್ಥಿರವಾದ ಪ್ರದರ್ಶನ ನೀಡುತ್ತಿದ್ದರು

ನವದೆಹಲಿ: ದೇಶದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಭಾನುವಾರ ತಮ್ಮ ನೆಚ್ಚಿನ ಆಟ, ಕ್ರಿಕೆಟರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಕ್ರಿಕೆಟ್ ಅವರ ನೆಚ್ಚಿನ ಆಟವಂತೆ. ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗರು ಎಂದು ಹೇಳಿಕೊಂಡಿದ್ದಾರೆ.

NDTV ಇಂಡಿಯಾದ ಸಂವಿಧಾನ @75 ಕಾನ್ಕ್ಲೇವ್‌ನಲ್ಲಿ ಮಾತನಾಡಿದ ಅವರು, ಸಮಯ ಇಲ್ಲದಿದ್ದರೂ ಅವರು ಸಾಧ್ಯವಾದಷ್ಟು ಭಾರತೀಯ ಕ್ರಿಕೆಟ್ ನೋಡಲು ಪ್ರಯ್ನಿಸುವುದಾಗಿ ತಿಳಿಸಿದರು. ನನ್ನ ನೆಚ್ಚಿನ ಆಟ ಕ್ರಿಕೆಟ್. ಆದರೆ ನನಗೆ ಆಡಲು ಸಮಯ ಸಿಗುತ್ತಿಲ್ಲ. ನನಗೀಗ, ಕ್ರಿಕೆಟ್ ಆಡಲು ಸ್ವಲ್ಪ ವಯಸ್ಸಾಗಿದೆ. ನೇರ ಪ್ರಸಾರ ನೋಡಲು ಬರುವುದಿಲ್ಲ, ಆದರೆ ಪ್ರತಿ ರಾತ್ರಿ ವಿರಾಟ್ ಕೊಹ್ಲಿ ಹೇಗೆ ಆಡಿದ್ದಾರೆ, ರವಿಚಂದ್ರನ್ ಅಶ್ವಿನ್ ಹೇಗೆ ಬೌಲಿಂಗ್ ಮಾಡಿದ್ದಾರೆ, ಜಸ್ಪ್ರೀತ್ ಬುಮ್ರಾ ಚೆನ್ನಾಗಿ ಬೌಲ್ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಐದರಿಂದ ಏಳು ನಿಮಿಷಗಳ ಮುಖ್ಯಾಂಶಗಳನ್ನು ನೋಡುತ್ತೇನೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ನನಗೆ ಇಬ್ಬರು ಫೇವರಿಟ್‌ಗಳಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ. ಹಿಂದಿನ ಕ್ರಿಕೆಟಿಗರಲ್ಲಿ ರಾಹುಲ್ ದ್ರಾವಿಡ್ ಅವರ ಅಭಿಮಾನಿ. ಅವರು ಯಾವಾಗಲೂ ಸ್ಥಿರವಾದ ಪ್ರದರ್ಶನ ನೀಡುತ್ತಿದ್ದರು ಎಂದು ಮಾಜಿ ಸಿಜೆಐ ಹೇಳಿದರು.

ಚಂದ್ರಚೂಡ್ ಅವರು ಸಿಜೆಐ ಆಗಿ ಎರಡು ವರ್ಷಗಳ ಅವಧಿ ಮುಗಿದ ನಂತರ ನವೆಂಬರ್ 10 ರಂದು ನಿವೃತ್ತರಾದರು. ಅವರ ಬಳಿಕ ನ್ಯಾಯಾಧೀಶರಾದ ಸಂಜೀವ್ ಖನ್ನಾ CJI ಆಗಿದ್ದಾರೆ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ 500 ಕ್ಕೂ ಹೆಚ್ಚು ತೀರ್ಪುಗಳನ್ನು ನೀಡಿದ್ದಾರೆ. ಅಯೋಧ್ಯೆ ಭೂ ವಿವಾದದ ತೀರ್ಪುಗಳು, 370 ನೇ ವಿಧಿ ಮತ್ತು ಒಪ್ಪಿಗೆಯ ಸಲಿಂಗ ಸಂಬಂಧಗಳ ಅಪರಾಧೀಕರಣ ಸೇರಿದಂತೆ 38 ಸಂವಿಧಾನಿಕ ಪೀಠದ ಸಮಸ್ಯೆಗಳ ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂದೋರ್‌ನಲ್ಲಿ ಅತಿಸಾರದಿಂದ ನಾಲ್ವರು ಸಾವು, 1400ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಕಲುಷಿತ ನೀರು ಕಾರಣ ಎಂದು ಪ್ರಯೋಗಾಲಯ ದೃಢ

ಐದು ತಿಂಗಳ ಮಗುವಿನ ಜೀವತೆಗೆದ ಹನಿ ನೀರು: ವಿವಾಹವಾಗಿ 10 ವರ್ಷದ ನಂತರ ಜನಿಸಿದ್ದ ಕಂದಮ್ಮ!

ಚೆನ್ನೈನಲ್ಲಿಂದು 3ನೇ ಆವೃತ್ತಿಯ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ

ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಕೇಸು ದಾಖಲು-Video

'ತಿನ್ನೋದು ಭಾರತದಲ್ಲಿ, ಹಾಡಿ ಹೊಗಳೋದು ಪಾಕಿಸ್ತಾನ, ಬಾಂಗ್ಲಾದೇಶನಾ': ಶಾರೂಕ್ ಖಾನ್ ವಿರುದ್ಧ ಬಿಜೆಪಿ ಕಿಡಿ!

SCROLL FOR NEXT