ಬೆಂಗಳೂರು: ಇಂಡಿಗೋ ವಿಮಾನದ ಪೈಲಟ್ ಡ್ಯೂಟಿ ಸಮಯ ಮುಗಿದಿದೆ ಎಂದು ಹೇಳಿ ಪ್ರಯಾಣಿಕರಿಂದ ತುಂಬಿದ್ದ ವಿಮಾನವನ್ನು ಹಾರಿಸಲು ನಿರಾಕರಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈಲರ್ ಆಗಿದೆ.
ಹತ್ತು ದಿನಗಳ ಹಿಂದೆ ಪುಣೆಯಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೈಲಟ್‌ನನ್ನು ಟೀಕಿಸಿದ್ದಾರೆ. ಆದರೆ ವಿಮಾನಯಾನ ಉದ್ಯಮದಲ್ಲಿರುವವರು ಪೈಲಟ್ ಕಾನೂನಿನ ಪ್ರಕಾರ ನಡೆದುಕೊಂಡಿದ್ದಾರೆ. ಏಕೆಂದರೆ ದೈನಂದಿನ ಕರ್ತವ್ಯ ಸಮಯ ಮೀರಿ ಕೆಲಸ ಮಾಡಿದರೆ ವಿಮಾನಯಾನ ನಿಯಂತ್ರಕರು ದಂಡ ವಿಧಿಸಬಹುದು ಎಂದಿದ್ದಾರೆ.
ಪೈಲಟ್, ತನ್ನ ಡ್ಯೂಟಿ ಟೈಮ್ ಮುಗಿದಿದೆ. ವಿಮಾನ ಟೇಕಾಫ್ ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಮಹಿಳಾ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಜಗಳವಾಡುವ ಮತ್ತು ಮನವಿ ಮಾಡುವ ಸುಮಾರು 200 ಪ್ರಯಾಣಿಕರಿಂದ ತುಂಬಿದ್ದ ಫ್ಲೈಟ್‌ನೊಳಗೆ ಆಘಾತಕ್ಕೊಳಗಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಏತನ್ಮಧ್ಯೆ, ಆಕ್ರೋಶಗೊಂಡ ಪ್ರಯಾಣಿಕರು ವಿಮಾನ ಹಾರಿಸುವಂತೆ ಒತ್ತಾಯಿಸುತ್ತಿರುವಾಗ ಪೈಲಟ್ ಕಾಕ್‌ಪಿಟ್ ಬಾಗಿಲನ್ನು ಮುಚ್ಚುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.
ಅಂತಿಮವಾಗಿ ಗಂಟೆಗಳ ನಂತರ ವಿಮಾನವನ್ನು(6E 361) ಬೇರೆ ಪೈಲಟ್‌ನಿಂದ ಹಾರಿಸಲಾಯಿತು ಮತ್ತು ಐದು ಗಂಟೆಗಳ ನಂತರ ಬೆಂಗಳೂರು ತಲುಪಿತು.
ಘಟನೆಯನ್ನು ಖಚಿತಪಡಿಸಿದ ಇಂಡಿಗೋ, “ಸೆಪ್ಟೆಂಬರ್ 24, 2024 ರಂದು ಪುಣೆಯಿಂದ ಬೆಂಗಳೂರಿಗೆ ಹಾರಾಟ ನಡೆಸಲು ಉದ್ದೇಶಿಸಲಾದ 6E 361 ವಿಮಾನವು ವಿಮಾನ ಕರ್ತವ್ಯದ ಸಮಯದ ಮಿತಿಗಳಿಗೆ ಸಂಬಂಧಿಸಿದ ಕಾರ್ಯಾಚರಣೆಯ ಕಾರಣಗಳಿಂದ ವಿಳಂಬವಾಗಿದೆ. ವಿಳಂಬದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ ಮತ್ತು ಗ್ರಾಹಕರಿಗೆ ಸಹಾಯ ಮಾಡಲು ನಮ್ಮ ತಂಡ ಲಭ್ಯವಿತ್ತು. ಈ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಪೈಲಟ್ ನಿರ್ಧಾರ ಸಂಪೂರ್ಣವಾಗಿ ಸರಿ ಇದೆ. ಪೈಲಟ್‌ಗೆ ಪ್ರತಿದಿನವೂ ಕರ್ತವ್ಯದ ಸಮಯ ನಿಗದಿಯಾಗಿರುತ್ತದೆ. ಅದನ್ನು ಉಲ್ಲಂಘಿಸಿ ಸಿಕ್ಕಿಬಿದ್ದರೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಅವರನ್ನು ಕರ್ತವ್ಯದಿಂದ ತೆಗೆದುಹಾಕಬಹುದು, ವಿಚಾರಣೆ ನಡೆಸಬಹುದು ಮತ್ತು ಹೆಚ್ಚಿನ ದಂಡವನ್ನು ವಿಧಿಸಬಹುದು ಎಂದು ವಿಮಾನಯಾನ ಮೂಲವೊಂದು TNIE ಗೆ ತಿಳಿಸಿದೆ.