ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ 99 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಭಾನುವಾರ ಬಿಡುಗಡೆ ಮಾಡಿದೆ.
ಫಡ್ನವೀಸ್ ನಾಗ್ಪುರ ನೈಋತ್ಯ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಾವಂಕುಲೆ ಕಮ್ತಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ರಾಜ್ಯ ಸಚಿವರಾದ ಗಿರೀಶ್ ಮಹಾಜನ್ ಜಮ್ನೇರ್‌ನಿಂದ, ಸುಧೀರ್ ಮುಂಗಂಟಿವಾರ್ ಬಲ್ಲಾರ್‌ಪುರದಿಂದ, ಅಶೋಕ್ ಚವ್ಹಾಣ್ ಪುತ್ರಿ ಶ್ರೀಜಯ ಅಶೋಕ್ ಚವಾಣ್ ಭೋಕರ್‌ನಿಂದ ಸ್ಪರ್ಧಿಸಲಿದ್ದಾರೆ.
ಆಶಿಶ್ ಶೇಲಾರ್ ವಂಡ್ರೆ ವೆಸ್ಟ್‌ನಿಂದ, ಮಂಗಲ್ ಪ್ರಭಾತ್ ಲೋಧಾ ಮಲಬಾರ್ ಹಿಲ್‌ನಿಂದ, ರಾಹುಲ್ ನಾರ್ವೇಕರ್ ಕೊಲಾಬಾದಿಂದ ಮತ್ತು ಛತ್ರಪತಿ ಶಿವೇಂದ್ರ ರಾಜೇ ಭೋಸಲೆ ಸತಾರಾದಿಂದ ಚುನಾವಣೆ ಎದುರಿಸಲಿದ್ದಾರೆ.
ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ. ಹಾಲಿ ವಿಧಾನಸಭೆಯ ಅವಧಿ ನವೆಂಬರ್ 26ಕ್ಕೆ ಕೊನೆಗೊಳ್ಳಲಿದೆ.