ದಲಿತ ಯುವಕ ಅತುಲ್ ಕುಮಾರ್ 
ದೇಶ

ಯಶಸ್ಸಿಗೆ ಪರಿಶ್ರಮವೇ ಹೆದ್ದಾರಿ, ಇಲ್ಲ ಅಡ್ಡದಾರಿ: ಸುಪ್ರೀಂ ಕೋರ್ಟ್ ನೆರವಿನಿಂದ IIT ಸೀಟು ಪಡೆದ ದಲಿತ ಯುವಕ! (ಸಂದರ್ಶನ)

Nagaraja AB

ಇತ್ತೀಚಿಗೆ ಸುಪ್ರೀಂ ಕೋರ್ಟ್ IIT ಧನಬಾದ್ ಸೀಟು ಹಂಚಿಕೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವ ಮೂಲಕ ಉತ್ತರ ಪ್ರದೇಶದ 18 ವರ್ಷದ ದಲಿತ ಯುವಕ ಅತುಲ್ ಕುಮಾರ್ ಅವರು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಕೋರ್ಸ್ ಸೇರಲು ಅವಕಾಶ ಮಾಡಿಕೊಟ್ಟಿತ್ತು. ಬಡ ಕುಟುಂಬಕ್ಕೆ ಸೇರಿದ ಕುಮಾರ್ ತಂದೆ ದಿನಗೂಲಿ ನೌಕರನಾಗಿದ್ದು, 17,500 ಶುಲ್ಕ ಪಾವತಿಸಲು ಗಡುವು ಮೀರಿದ ನಂತರ ಐಐಟಿ ಧನ್‌ಬಾದ್‌ನಲ್ಲಿ ಸೀಟು ಕಳೆದುಕೊಂಡಿದ್ದರು.

TNIE ಪತ್ರಕರ್ತ ಸುಚಿತ್ರಾ ಕಲ್ಯಾಣ್ ಮೊಹಂತಿ ಅವರೊಂದಿಗಿನ ಸಂದರ್ಶನದಲ್ಲಿ, ಕುಮಾರ್ ತಮ್ಮ ಹೋರಾಟದ ಪ್ರಯಾಣ ಮತ್ತು ಆರ್ಥಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಆಯ್ದ ಭಾಗಗಳು ಇಲ್ಲಿದೆ.

ಸುಪ್ರೀಂ ಕೋರ್ಟ್ ನಿಮ್ಮ ರಕ್ಷಣೆಗೆ ಬರದಿದ್ದರೆ ಏನಾಗಬಹುದಿತ್ತು?

ಸುಪ್ರೀಂ ಕೋರ್ಟ್ ನನ್ನ ರಕ್ಷಣೆಗೆ ಬಂದು ಸಹಾಯ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ನಾನು ಐಐಟಿ ಧನಬಾದ್‌ಗೆ ಪ್ರವೇಶ ಪಡೆಯಲು ಸಿಜೆಐ ಅವರ ಆದೇಶ ತುಂಬಾ ನೆರವಾಗಿದೆ. ಅವರು ಇಲ್ಲದಿದ್ದರೆ, ನಾನು ಸೀಟು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಯಶಸ್ವಿ ಅಭ್ಯರ್ಥಿಗೆ ಯಾವುದೇ ಅಡಚಣೆ ಉಂಟಾಗಬಾರದು ಎಂದು ಸಿಜೆಐ ಹೇಳಿದ್ದರು. ನಮ್ಮ ಸಿಜೆಐ ಸರ್ ಅವರಿಗೆ ನಾನು ಋಣಿಯಾಗಿದ್ದೇನೆ. ಕೃತಜ್ಞನಾಗಿದ್ದೇನೆ. ಅವರಿಂದಾಗಿ ನನಗೆ ಮತ್ತೆ ಅಲ್ಲಿ ಸೀಟು ಸಿಕ್ಕಿತು.

ನಿಮ್ಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಹಾನುಭೂತಿಯ ಆದೇಶ ನೀಡದಿದ್ದರೆ ನಿಮಗೆ ಬೇರೆ ಆಯ್ಕೆಗಳಿತ್ತಾ?

ಒಂದು ವೇಳೆ ಸುಪ್ರೀಂ ಕೋರ್ಟ್ ಈ ರೀತಿ ಆದೇಶ ನೀಡಿದ್ದರೆ, ನನ್ನ ಜೀವನದಲ್ಲಿ ಸ್ವಲ್ಪ ವಿಷಾದವಿರುತಿತ್ತು. ಐಐಟಿ ಧನ್‌ಬಾದ್‌ನಿಂದ ನನ್ನ ಬಿ ಟೆಕ್ ಮಾಡಲು ಸಾಧ್ಯವಾಗಲಿಲ್ಲ ಅನ್ನುವ ಕೊರಗು ಕಾಡುತಿತ್ತು. ಮತ್ತೊಂದೆಡೆ, ನಾನು JEE ಮೇನ್ಸ್ 2025 ಪರೀಕ್ಷೆಗೆ ಕುಳಿತುಕೊಳ್ಳಲು ಪ್ರಯತ್ನಿಸಬಹುದಿತ್ತು.

ನೀವು ಉತ್ತಮ ಅಂಕ ಗಳಿಸಿ, ಉತ್ತಮ ಸಂಸ್ಥೆಯಲ್ಲಿ ಪ್ರವೇಶ ಪಡೆಯುತ್ತೀರಿ ಎಂದು ನಿರೀಕ್ಷಿಸಿದ್ರಾ?

ಸಿದ್ಧತೆಗಳಲ್ಲಿ ಕೆಲವು ಏರಿಳಿತಗಳಿತ್ತು. ಪ್ರಸಕ್ತ ವರ್ಷದ ಪ್ರಶ್ನೆಗಳನ್ನು ಊಹಿಸುವುದು ಕಷ್ಟ. ಆದರೆ ನನ್ನ ಕಠಿಣ ಪರಿಶ್ರಮದ ಫಲವಾಗಿ ಆಳವಾದ ತಯಾರಿ ನಡೆಸಿ, ಉತ್ತಮ ಅಂಕಗಳನ್ನು ಗಳಿಸಿದೆ. ಯಶಸ್ಸಿಗೆ ಶಾರ್ಟ್ ಕಟ್ ಇಲ್ಲ.

ನಿಮ್ಮಂತಹ ಅನೇಕ ಪ್ರತಿಭೆಗಳಿದ್ದಾರೆ. ಅವರ ಆರ್ಥಿಕ ತೊಂದರೆಗಳಿಂದಾಗಿ, ಅವರು ತುಂಬಾ ಬಳಲುತ್ತಿದ್ದಾರೆ…

ಅಂತಹ ಪ್ರತಿಭೆಗಳು ಮತ್ತು ಸಾಧಕರಿಗೆ ಸರ್ಕಾರ ಸಹಾಯ ಮಾಡಬೇಕು. ಎನ್‌ಜಿಒಗಳೂ ತಮ್ಮ ಕೈಲಾದಷ್ಟು ಕೆಲಸ ಮಾಡಬೇಕು. ನನ್ನ ತಂದೆಯ ಬಗ್ಗೆ ನಾನು ಹೇಳಬೇಕೆಂದರೆ: ಅವರ ಗಂಭೀರ ಆರ್ಥಿಕ ಸಮಸ್ಯೆಗಳ ಹೊರತಾಗಿಯೂ ಅವರು ಯಾವಾಗಲೂ ನನಗೆ ಒಂದು ಮಾರ್ಗವನ್ನು ತೋರಿಸಿದ್ದರು.

ನಿಮ್ಮ ಅಧ್ಯಯನಕ್ಕೆ ಪೋಷಕರು ಹೇಗೆ ಕೊಡುಗೆ ನೀಡಿದ್ದಾರೆ?

ನನ್ನ ಪರಿಸ್ಥಿತಿಯನ್ನು ಲೆಕ್ಕಿಸದೆ ನನ್ನ ಪೋಷಕರು ನನ್ನ ಅಧ್ಯಯನವನ್ನು ತುಂಬು ಹೃದಯದಿಂದ ಬೆಂಬಲಿಸಿದ್ದಾರೆ. ಅವರು ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ನನಗೆ ಒಂದು ಗುರಿ ಇತ್ತು, ಕಷ್ಟಪಟ್ಟು ಅಧ್ಯಯನ ಮಾಡಿದೆ.

ನಿಮ್ಮ ನೆಚ್ಚಿನ ವಿಷಯ ಯಾವುದು?

12ನೇ ತರಗತಿವರೆಗೆ ಅದು ಗಣಿತವಾಗಿತ್ತು. ಆದರೆ advanced JEEಗೆ ಕೋಚಿಂಗ್ ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ಗಣಿತಕ್ಕೆ ಸಂಬಂಧಿಸಿದ ತೊಂದರೆಗಳು ಇನ್ನಷ್ಟು ಗಂಭೀರವಾದವು. ಆ ನಂತರ ಕೆಮಿಸ್ಟ್ರಿ ನನ್ನ ನೆಚ್ಚಿನ ವಿಷಯವಾಯಿತು. ಆದರೆ ನಾನು ಗಣಿತವನ್ನು ನಿರ್ಲಕ್ಷಿಸಲಿಲ್ಲ.

ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಯೋಜನೆ ಏನು?

ನನ್ನ ಬಿ ಟೆಕ್ ನಂತರ, ಉತ್ತಮ ಸ್ಥಾನದಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡಲು ಬಯಸುತ್ತೇನೆ ಮತ್ತು ಕೆಲವು ವರ್ಷಗಳನ್ನು ಪೂರ್ಣಗೊಳಿಸಿದ ನಂತರ, ನನ್ನ ಬಳಿ ಸ್ವಲ್ಪ ಹಣವಿದ್ದರೆ ಸ್ಟಾರ್ಟ್-ಅಪ್ ಪ್ರಾರಂಭಿಸಲು ಪ್ರಯತ್ನಿಸುತ್ತೇನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT