ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಹೆನಾ ಶಹಾಬ್ ಮತ್ತು ಪುತ್ರ ಒಸಾಮಾ 
ದೇಶ

ಸಿವಾನ್‌ ಮಾಜಿ ಸಂಸದ ಶಹಾಬುದ್ದೀನ್ ಪತ್ನಿ, ಪುತ್ರ ಆರ್‌ಜೆಡಿ ಸೇರ್ಪಡೆ

ತಾಯಿ-ಮಗ ಇಬ್ಬರೂ ಲಾಲು, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ತೇಜಸ್ವಿ ಅವರನ್ನು ಶನಿವಾರ ತಡರಾತ್ರಿ ಪಾಟ್ನಾದ ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು.

ಪಾಟ್ನಾ: ಸಿವಾನ್‌ನ ಮಾಜಿ ಸಂಸದ, ದಿ. ಮೊಹಮ್ಮದ್ ಶಹಾಬುದ್ದೀನ್ ಅವರ ಪತ್ನಿ ಹೆನಾ ಶಹಾಬ್ ಮತ್ತು ಪುತ್ರ ಒಸಾಮಾ ಅವರು ಭಾನುವಾರ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರ ಸಮ್ಮುಖದಲ್ಲಿ ರಾಷ್ಟ್ರೀಯ ಜನತಾ ದಳಕ್ಕೆ(ಆರ್‌ಜೆಡಿ) ಸೇರಿದರು.

ತಾಯಿ-ಮಗ ಇಬ್ಬರೂ ಲಾಲು, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ತೇಜಸ್ವಿ ಅವರನ್ನು ಶನಿವಾರ ತಡರಾತ್ರಿ ಪಾಟ್ನಾದ ಅವರ 10 ಸರ್ಕ್ಯುಲರ್ ರಸ್ತೆಯ ನಿವಾಸದಲ್ಲಿ ಭೇಟಿ ಮಾಡಿದ್ದರು.

2024 ರ ಲೋಕಸಭಾ ಚುನಾವಣೆಯಲ್ಲಿ ಹೆನಾ ಶಹಾಬ್ ಅವರು ಸಿವಾನ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಹೆನಾ ಅವರು ಜನತಾ ದಳ(ಯುನೈಟೆಡ್)ದ ಅಭ್ಯರ್ಥಿ ವಿಜಯಲಕ್ಷ್ಮಿ ದೇವಿ ಅವರ ವಿರುದ್ಧ 92,000 ಮತಗಳಿಂದ ಸೋಲು ಅನುಭವಿಸಿದ್ದರು.

ಆರ್‌ಜೆಡಿ ಅಭ್ಯರ್ಥಿ ಅವಧ್ ಬಿಹಾರಿ ಚೌಧರಿ ಮೂರನೇ ಸ್ಥಾನ ಪಡೆದಿದ್ದರು. ಲೋಕಸಭೆ ಚುನಾವಣೆಯಲ್ಲಿ ಹೆನಾ ಸ್ಪರ್ಧೆ ಆರ್‌ಜೆಡಿ ಅಭ್ಯರ್ಥಿ ಚೌಧರಿ ಸೋಲಿಗೆ ಕಾರಣವಾಗಿತ್ತು.

ಸಿವಾನ್‌ನಲ್ಲಿ ಸಾಹೇಬ್ ಎಂದು ಜನಪ್ರಿಯವಾಗಿರುವ ಮೊಹಮ್ಮದ್ ಶಹಾಬುದ್ದೀನ್ ಈ ಪ್ರದೇಶದ ಮುಸ್ಲಿಂ ಸಮುದಾಯದ ಪ್ರಬಲ ನಾಯಕರಾಗಿದ್ದರು. ಶಹಾಬುದ್ದೀನ್ ಸಾವಿನ ನಂತರ ಹೇನಾ ಮತ್ತು ಲಾಲು ಕುಟುಂಬದ ಸಂಬಂಧ ಹಳಸಿತ್ತು.

1996 ರಿಂದ 2004 ರವರೆಗೆ ಸಿವಾನ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮೊಹಮ್ಮದ್ ಶಹಾಬುದ್ದೀನ್ ಅವರು ಜೋಡಿ ಕೊಲೆ ಪ್ರಕರಣದಲ್ಲಿ ದೆಹಲಿಯ ತಿಹಾರ್ ಸೆಂಟ್ರಲ್ ಜೈಲು ಸೇರಿದ್ದರು. 2021 ರಲ್ಲಿ ಜೈಲಿನಲ್ಲಿಯೇ ಕೋವಿಡ್ 19 ಸೋಂಕಿನಿಂದ ನಿಧನರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲರು!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಡಿಕೆ ಶಿವಕುಮಾರ್ ಪತ್ರ!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video