ಕಚ್ : ಭಾರತವು ತನ್ನ ಗಡಿಭಾಗದ ಒಂದು ಇಂಚು ಭೂಮಿಯನ್ನು ಕೂಡ ಬಿಟ್ಟುಕೊಡುವುದಿಲ್ಲ, ದೇಶ ರಕ್ಷಣೆ ವಿಷಯದಲ್ಲಿ ಜನರಿಗೆ ಈ ದೇಶದ ಮಿಲಿಟರಿ ಶಕ್ತಿ ಮೇಲೆ ಬಲವಾದ ನಂಬಿಕೆಯಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತಿನ ಕಚ್ ಪ್ರದೇಶದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ನಂತರ ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಭಾರತವು ತನ್ನ ಗಡಿಭಾಗದಲ್ಲಿರುವ ಒಂದಿಂಚು ಭೂಮಿಯನ್ನು ಸಹ ಬಿಟ್ಟುಕೊಡುವುದಿಲ್ಲ, ನೆಲದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅದಕ್ಕಾಗಿಯೇ ನಮ್ಮ ನೀತಿಗಳು ನಮ್ಮ ಸಶಸ್ತ್ರ ಪಡೆಗಳ ಸಂಕಲ್ಪದೊಂದಿಗೆ ಹೊಂದಿಕೊಂಡಿವೆ ಎಂದು ಹೇಳಿದರು.
ನಾವು ನಮ್ಮ ಸೈನಿಕರ ದೃಢತೆಯನ್ನು ನಂಬುತ್ತೇವೆ ಹೊರತು ನಮ್ಮ ಶತ್ರುಗಳ ಮಾತನ್ನಲ್ಲ, ನಿಮ್ಮಿಂದ ದೇಶವು ಸುರಕ್ಷಿತವಾಗಿದೆ ಎಂದು ಭಾರತದ ಜನರು ಭಾವಿಸುತ್ತಿದ್ದಾರೆ ಎಂದರು.
ಜಗತ್ತು ನಿಮ್ಮನ್ನು ನೋಡಿದಾಗ ಅದು ಭಾರತದ ಶಕ್ತಿಯನ್ನು ನೋಡುತ್ತದೆ, ಆದರೆ ಶತ್ರುಗಳು ನಿಮ್ಮನ್ನು ನೋಡಿದಾಗ, ಅವರು ತಮ್ಮ ಕೆಟ್ಟ ಯೋಜನೆಗಳಿಂದ ಅಂತ್ಯ ಮಾಡುವುದು ಹೇಗೆ ಎಂದು ಯೋಚಿಸುತ್ತಾರೆ ಎಂದರು.