ಸೋಡಿಯಂ ಕುರಿತ ಅಧ್ಯಯನ (ಸಂಗ್ರಹ ಚಿತ್ರ) online desk
ದೇಶ

WHO ಶಿಫಾರಸು ಮಾಡಿದ ಸೋಡಿಯಂ ಸೇವನೆಯಿಂದ ಭಾರತದಲ್ಲಿ 3 ಲಕ್ಷ ಸಾವು ತಡೆಯಬಹುದು: ಅಧ್ಯಯನ

ಉಪ್ಪಿನ ಪ್ರಮುಖ ಅಂಶವಾದ ಹೆಚ್ಚಿನ ಮಟ್ಟದ ಸೋಡಿಯಂ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಆಹಾರದ ಅಪಾಯಗಳಲ್ಲಿ ಒಂದಾಗಿದೆ.

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾಡೆಲಿಂಗ್ ಅಧ್ಯಯನದ ಪ್ರಕಾರ, WHO ಶಿಫಾರಸು ಮಾಡಿದ ಸೋಡಿಯಂ ಸೇವನೆಯ ಮಟ್ಟವನ್ನು ಅನುಸರಿಸುವುದರಿಂದ 10 ವರ್ಷಗಳಲ್ಲಿ ಹೃದ್ರೋಗ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಸಂಭವಿಸುವ ಸಾವುಗಳ ಪೈಕಿ 3 ಲಕ್ಷ ಸಾವುಗಳನ್ನು ತಪ್ಪಿಸಬಹುದು ಎಂದು ತಿಳಿದುಬಂದಿದೆ.

ಉಪ್ಪಿನ ಪ್ರಮುಖ ಅಂಶವಾದ ಹೆಚ್ಚಿನ ಮಟ್ಟದ ಸೋಡಿಯಂ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಆಹಾರದ ಅಪಾಯಗಳಲ್ಲಿ ಒಂದಾಗಿದೆ. ಅಧಿಕ-ಆದಾಯದ ದೇಶಗಳಲ್ಲಿ, ಪ್ಯಾಕೇಜ್ ಮಾಡಿದ ಆಹಾರಗಳು ಸೋಡಿಯಂ ಸೇವನೆಯ ಪ್ರಮುಖ ಮೂಲವಾಗಿದೆ. ಈ ಪ್ರವೃತ್ತಿಯು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ.

ಆದಾಗ್ಯೂ, ಹೈದರಾಬಾದ್‌ನ ದಿ ಜಾರ್ಜ್ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್‌ನ ಸೇರಿದಂತೆ ಸಂಶೋಧಕರು, ಭಾರತ ಪ್ರಸ್ತುತ ರಾಷ್ಟ್ರೀಯ ಸೋಡಿಯಂ ಕಡಿತ ತಂತ್ರವನ್ನು ಹೊಂದಿಲ್ಲ ಎಂಬುದನ್ನು ಗಮನಿಸಿದ್ದಾರೆ. ಭಾರತೀಯರು ಡಬ್ಲ್ಯುಎಚ್‌ಒ ಶಿಫಾರಸು ಮಾಡಿದ ಸೇವನೆಗಿಂತ ಸುಮಾರು ಎರಡು ಪಟ್ಟು ಹೆಚ್ಚು ಸೇವಿಸುತ್ತಾರೆ, ಪ್ಯಾಕ್ ಮಾಡಲಾದ ಆಹಾರಗಳ ಹೆಚ್ಚುತ್ತಿರುವ ಬಳಕೆಯಿಂದ ಕೂಡಿದೆ.

WHO ಸೋಡಿಯಂ ಸೇವನೆಯನ್ನು ದಿನಕ್ಕೆ ಎರಡು ಗ್ರಾಂಗಳೊಳಗೆ ಸೀಮಿತಗೊಳಿಸಲು ಅಂದರೆ ದಿನಕ್ಕೆ ಒಂದು ಟೀಚಮಚ ಅಥವಾ ಐದು ಗ್ರಾಂ ಉಪ್ಪುಗಿಂತ ಕಡಿಮೆ ಬಳಸಲು ಸಲಹೆ ನೀಡುತ್ತದೆ.

ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಒಂದು ದಶಕಗಳ ಕಾಲ ಈ ಸೋಡಿಯಂ ಸೇವನೆಯ ಮಾರ್ಗಸೂಚಿಗಳನ್ನು ಅನುಸರಿಸುವುದರಿಂದ ಗಮನಾರ್ಹವಾದ ಸಂಭಾವ್ಯ ಆರೋಗ್ಯ ಪ್ರಯೋಜನಗಳು ಮತ್ತು ವೆಚ್ಚ ಉಳಿತಾಯವಾಗುವುದನ್ನು ಎತ್ತಿ ತೋರಿಸಿದೆ.

ಅಧ್ಯಯನದಲ್ಲಿ ಸೂಚಿಸಿರುವ ಪ್ರಮಾಣದಲ್ಲಿ ಸೋಡಿಯಂ ಸೇವನೆ, 17 ಲಕ್ಷ ಹೃದಯರಕ್ತನಾಳದ ಘಟನೆಗಳು ಅಂದರೆ ಹೃದಯಾಘಾತ ಮತ್ತು ಪಾರ್ಶ್ವವಾಯುನಂತಹ ಘಟನೆಗಳನ್ನು ತಡೆಗಟ್ಟುತ್ತವೆ ಮತ್ತು 7 ಲಕ್ಷ ಹೊಸ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ ಜೊತೆಗೆ ಅಂದಾಜು USD 800 ಮಿಲಿಯನ್ ಉಳಿತಾಯ ಮಾಡಬಹುದಾಗಿದೆ.

ಜನರು ಪ್ಯಾಕ್ ಮಾಡಿದ ಆಹಾರವನ್ನು ಹೆಚ್ಚು ಸೇವಿಸುತ್ತಿರುವ ಹಿನ್ನೆಲೆಯಲ್ಲಿ ಮಾಡೆಲಿಂಗ್ ಫಲಿತಾಂಶಗಳು WHO ನ ಸೋಡಿಯಂ ಮಾನದಂಡಗಳ ಅನುಷ್ಠಾನವನ್ನು ಕಡ್ಡಾಯಗೊಳಿಸಲು ಭಾರತಕ್ಕೆ ಬಲವಾದ ಸಾಧ್ಯಕ್ಷಗಳನ್ನು ನೀಡಿದೆ.

ಸಾಂಕ್ರಾಮಿಕವಲ್ಲದ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ WHO ನ ಜಾಗತಿಕ ಗುರಿಗಳು 2025 ರ ವೇಳೆಗೆ ಸೋಡಿಯಂ ಸೇವನೆಯಲ್ಲಿ 30 ಪ್ರತಿಶತದಷ್ಟು ಕಡಿತವನ್ನು ಒಳಗೊಂಡಿವೆ.

UK, ಅರ್ಜೆಂಟೀನಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಇತರ ದೇಶಗಳು ಪ್ಯಾಕೇಜ್ ಮಾಡಿದ ಆಹಾರಗಳಲ್ಲಿ ಸೋಡಿಯಂ ಅಂಶದ ಗುರಿಗಳನ್ನು ಯಶಸ್ವಿಯಾಗಿ ನಿಗದಿಪಡಿಸಿವೆ ಮತ್ತು ಉತ್ಪನ್ನಗಳನ್ನು ಮರುರೂಪಿಸುವ ನಿಟ್ಟಿನಲ್ಲಿ ತಯಾರಕರು ತೊಡಗಿಸಿಕೊಂಡಿದ್ದಾರೆ. ಈ ವಿಧಾನವು ಅವರ ಜನಸಂಖ್ಯೆಯಾದ್ಯಂತ ಸೋಡಿಯಂ ಸೇವನೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.

ಭಾರತದಲ್ಲಿ, ಹೆಚ್ಚಿನ ಮಟ್ಟದ ಸೋಡಿಯಂ ಸೇವನೆಯನ್ನು ತಿಳಿಸುವ ಸೀಮಿತ ವ್ಯವಸ್ಥೆಗಳಿವೆ ಎಂದು ಸಂಶೋಧಕರು ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) 2018 ರಲ್ಲಿ ಆರಂಭಿಸಿದ ‘ಈಟ್ ರೈಟ್ ಇಂಡಿಯಾ’ ಉಪಕ್ರಮವು ಸೋಡಿಯಂ ಸೇವನೆಯನ್ನು ಕಡಿಮೆ ಮಾಡುವುದು ಸೇರಿದಂತೆ ಆರೋಗ್ಯಕರ ಆಹಾರದ ಕುರಿತು ಸಾರ್ವಜನಿಕರಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ.

ಆದಾಗ್ಯೂ, ರಾಷ್ಟ್ರವ್ಯಾಪಿ ಸೋಡಿಯಂ ಸೇವನೆಯ ಮೇಲೆ ಪ್ಯಾಕೇಜ್ ಮಾಡಿದ ಆಹಾರಗಳಿಗೆ ಸೋಡಿಯಂ ಗುರಿಗಳನ್ನು ಅಳವಡಿಸಿಕೊಳ್ಳುವ ಪರಿಣಾಮ ಅಸ್ಪಷ್ಟವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT