ದೆಹಲಿ: ದೆಹಲಿಯಲ್ಲಿ ಬಸ್ ನಲ್ಲಿ ಪಟಾಕಿ ಕೊಂಡೊಯ್ಯುತ್ತಿದ್ದಾಗ ಬೆಂಕಿ ತಗುಲಿ ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿವೆ.
ಪಟಾಕಿ ಕೊಂಡೊಯ್ಯುತ್ತಿದ್ದ ವ್ಯಕ್ತಿ ಹಾಗೂ ಆತನ ಸಹ ಪ್ರಯಾಣಿಕನಿಗೆ ಗಾಯಗಳಾಗಿವೆ. ದ್ವಾರಕಾದ ಛಾವಾಲಾ ಪ್ರದೇಶದಲ್ಲಿ ಅವರು ಹೊತ್ತೊಯ್ಯುತ್ತಿದ್ದ ಕೆಲವು ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಬಸ್‌ನಲ್ಲಿದ್ದ ವ್ಯಕ್ತಿ ಮತ್ತು ಅವರ ಸಹ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವಿಚಾರಣೆ ನಡೆಸಿದಾಗ, ಆ ವ್ಯಕ್ತಿ ಸಣ್ಣ ಪ್ರಮಾಣದ ಪಟಾಕಿಗಳನ್ನು ಹೊತ್ತೊಯ್ಯುತ್ತಿದ್ದದ್ದು ಬಸ್‌ನಲ್ಲಿ ಬೆಂಕಿ ಹತ್ತಿಕೊಂಡಿತು ಎಂದು ಅಧಿಕಾರಿ ಹೇಳಿದರು.
ಸ್ಫೋಟವನ್ನು ಸೂಚಿಸುವ ಯಾವ ವಸ್ತುವೂ ಇಲ್ಲಿಯವರೆಗೆ ಕಾಣಿಸಿಕೊಂಡಿಲ್ಲ ಎಂದು ಅವರು ಹೇಳಿದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.