ನವದೆಹಲಿ: ಅಕ್ಟೋಬರ್ 5 ರಂದು ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆಯನ್ನು AAP ಅಂತಿಮಗೊಳಿಸಿದ್ದು, ಐದು ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದೆ ಎಂದು ಪಕ್ಷದ ಮೂಲಗಳು ಭಾನುವಾರ ತಿಳಿಸಿವೆ. ಸೋಮವಾರ ಮೈತ್ರಿ ಘೋಷಣೆಯಾಗುವ ಸಾಧ್ಯತೆಯಿರುವುದಾಗಿ AAP ಮೂಲಗಳು ಹೇಳಿವೆ.
"ಕಾಂಗ್ರೆಸ್‌ನ ದೀಪಕ್ ಬಬಾರಿಯಾ ಮತ್ತು ಎಎಪಿ ನಾಯಕ ರಾಘವ್ ಚಡ್ಡಾ ನಡುವಿನ ಮಾತುಕತೆ ಸಕಾರಾತ್ಮಕ ದಿಕ್ಕಿನಲ್ಲಿ ಸಾಗಿದ್ದು, ನಾಳೆ ವೇಳೆಗೆ ಮೈತ್ರಿ ಅಂತಿಮಗೊಳ್ಳುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಐದು ಸ್ಥಾನಗಳಲ್ಲಿ ಸ್ಪರ್ಧಿಸಲು ಎಎಪಿ ಒಪ್ಪಿಗೆ ನೀಡಿದೆ ಎಂದು ಎಎಪಿ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಮಾತನಾಡಿದ ಎಎಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ, ಕಾಂಗ್ರೆಸ್ ಮತ್ತು AAP ಎರಡೂ ತಮ್ಮ ವೈಯಕ್ತಿಕ ಆಕಾಂಕ್ಷೆಗಳನ್ನು ಬದಿಗಿಟ್ಟು ಹರಿಯಾಣ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ.
ಮೈತ್ರಿ ಬಗ್ಗೆ ಪಕ್ಷಗಳು ಇನ್ನೂ ಒಮ್ಮತಕ್ಕೆ ಬರದಿದ್ದರೂ, ಮಾತುಕತೆಗಳು ಸಕಾರಾತ್ಮಕ" ದಿಕ್ಕಿನಲ್ಲಿ ಸಾಗಿದ್ದು, ಉತ್ತಮ ಫಲಿತಾಂಶದ ಭರವಸೆಯಿದೆ. ಆದಾಗ್ಯೂ, win-win ಪರಿಸ್ಥಿತಿ ಇಲ್ಲದಿದ್ದರೆ" ಎಎಪಿ ಮೈತ್ರಿಯೊಂದಿಗೆ ಮುಂದುವರಿಯುವುದಿಲ್ಲ ಎಂದು ಅವರು ಹೇಳಿದರು.
ಮಾತುಕತೆಗಳು ಸಕಾರಾತ್ಮಕವಾಗಿ ಸಾಗುತ್ತಿದ್ದು, ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆಗಳನ್ನು ಎದುರಿಸಲು ಕೆಲಸ ಮಾಡುತ್ತಿವೆ. ಪ್ರತ್ಯೇಕ ಪಕ್ಷ ಮತ್ತು ಅಭ್ಯರ್ಥಿಗಳ ಆಕಾಂಕ್ಷೆಗಳನ್ನು ಬದಿಗಿಟ್ಟು ಒಗ್ಗಟ್ಟು ಮತ್ತು ಹರಿಯಾಣದ ಜನರ ಬೇಡಿಕೆಗಳಿಗೆ ಆದ್ಯತೆ ನೀಡುತ್ತೇವೆ ಎಂದು ಅವರು ಪಿಟಿಐ ವಿಡಿಯೋಗಳಿಗೆ ತಿಳಿಸಿದ್ದಾರೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಸೆಪ್ಟೆಂಬರ್ 12 ಕೊನೆಯ ದಿನವಾಗಿದೆ.