ಅಜಿತ್ ದೋವಲ್ online desk
ದೇಶ

Ukraine war: ಶಾಂತಿ ಮಾತುಕತೆಗಾಗಿ ರಷ್ಯಾಗೆ Ajit Doval ಭೇಟಿ

ಕಳೆದ ಎರಡು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಮತ್ತು ಉಕ್ರೇನ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆಗಳು ಆರಂಭವಾಗಿವೆ.

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಇತ್ತ ಉಭಯ ದೇಶಗಳ ನಡುವಿನ ಶಾಂತಿ ಮಾತುಕತೆ ಕುರಿತ ಸಂಧಾನಕ್ಕಾಗಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ರಷ್ಯಾಗೆ ದೌಡಾಯಿಸಿದ್ದಾರೆ.

ಮೂಲಗಳ ಪ್ರಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಈ ವಾರ ರಷ್ಯಾ-ಉಕ್ರೇನ್ ಯುದ್ಧಕ್ಕೆ ಶಾಂತಿಯುತ ಪರಿಹಾರವನ್ನು ಸಾಧಿಸುವ ಕುರಿತು ಮಾತುಕತೆಗಾಗಿ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಎರಡು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಮತ್ತು ಉಕ್ರೇನ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆಗಳು ಆರಂಭವಾಗಿವೆ.

ಶಾಂತಿ ಪ್ರಯತ್ನಗಳಲ್ಲಿ ಭಾರತದ ಪ್ರಧಾನಿ ಮೋದಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಈ ಜುಲೈನಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದ ಮೋದಿ ಅವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ "ಇದು ಯುದ್ಧದ ಯುಗವಲ್ಲ" ಎಂದು ಪುನರುಚ್ಚರಿಸಿದ್ದರು.

ಒಂದು ತಿಂಗಳ ನಂತರ, ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಕೀವ್‌ನಲ್ಲಿ ಭೇಟಿಯಾಗಿದ್ದರು. ಈ ವೇಳೆ ಶಾಂತಿಗಾಗಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದರು.

ಗುರುವಾರ, ರಷ್ಯಾದ ನಗರವಾದ ವ್ಲಾಡಿವೋಸ್ಟಾಕ್‌ನಲ್ಲಿ ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ ಪ್ಯಾನೆಲ್ ಚರ್ಚೆಯಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಸಂಘರ್ಷದ ಕುರಿತು ಭಾರತ, ಬ್ರೆಜಿಲ್ ಮತ್ತು ಚೀನಾದೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶಾದ್ಯಂತ 'ಗ್ಯಾಸ್ ಟ್ರಬಲ್': ಪ್ರಮುಖ ನಗರಗಳಲ್ಲಿ LPG ಕೊರತೆಯ ಭೀತಿ; ಸಮಸ್ಯೆ ಬಗೆಹರಿಸಲು ಅಗತ್ಯ ಸರಕುಗಳ ಕಾಯ್ದೆ ಬಳಸಿದ ಕೇಂದ್ರ!

KPCC ಅಧ್ಯಕ್ಷರಾಗಿ ಆರು ವರ್ಷ: ಡಿ ಕೆ ಶಿವಕುಮಾರ್ ಔತಣಕೂಟ ಆಯೋಜನೆ; ಸಿಎಂ ಸೇರಿ ಸಚಿವರು, ಶಾಸಕರು ಭಾಗಿ, ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ತೀವ್ರ

No friendship only business: ತೈಲ ಬೇಕಾದರೆ..; ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಟ್ಟ ರಷ್ಯಾ!

1998-2025ರವರೆಗೆ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯನೇ ಹೆಚ್ಚು ಸಾಲ ಮಾಡಿದ್ದಾರೆ: ಆರ್.ಅಶೋಕ್

ಆತ ಅಪ್ಪಿಕೊಳ್ಳುತ್ತಾರೆ, ಕಣ್ಣು ಹೊಡೆಯುತ್ತಾರೆ; ಪ್ರಿಯಾಂಕಾ ಉತ್ತಮ ವಿಪಕ್ಷ ನಾಯಕಿಯಾಗಬಹುದು: ರಾಹುಲ್ ವಿರುದ್ಧ ಕಿರಣ್ ರಿಜಿಜು ಟೀಕಾ ಪ್ರಹಾರ

SCROLL FOR NEXT