ಭೋಪಾಲ್: ಬೆಂಗಳೂರಿಗೆ ತಲುಪುವುದಕ್ಕೆ ನಿಗದಿಯಾಗಿದ್ದ ಸರಕು ಸಾಗಣೆಯ 3 ಬೋಗಿಗಳು ಭೋಪಾಲ್ ಬಳಿಯ ಮಿಸ್ರೋಡ್ ಮತ್ತು ಮಂಡಿದೀಪ್ ನಿಲ್ದಾಣಗಳ ಮಧ್ಯದಲ್ಲಿ ಹಳಿತಪ್ಪಿದೆ.
ಬೋಗಿಗಳು ಹಳಿ ತಪ್ಪಿದ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ 12:45 ಕ್ಕೆ ಈ ಘಟನೆ ನಡೆದಿದ್ದು, ಪಶ್ಚಿಮ ಸೆಂಟ್ರಲ್ ರೈಲ್ವೆ ವ್ಯಾಪ್ತಿಯಲ್ಲಿ ರೈಲು ಸಂಚಾರವನ್ನು ಯಥಾಸ್ಥಿತಿಗೆ ತರಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ದಿಲ್ಲಿಯಿಂದ ಬೆಂಗಳೂರಿಗೆ ಆಟೋಮೊಬೈಲ್‌ಗಳನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ರೈಲಿನ ಮೂರು ವ್ಯಾಗನ್‌ಗಳು ಮಧ್ಯಾಹ್ನ ಹಳಿತಪ್ಪಿವೆ. ರೈಲು ಸಂಚಾರವನ್ನು ಪುನಃಸ್ಥಾಪಿಸಲು ಹಿರಿಯ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ" ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
ಈ ವ್ಯಸ್ತ ರೈಲ್ವೇ ಮಾರ್ಗದ ಮೂರು ಹಳಿಗಳ ಪೈಕಿ ಎರಡರಲ್ಲಿ ಎರಡು ಹಳಿಗಳು ಕಾರ್ಯನಿರ್ವಹಿಸುತ್ತಿರುವುದರಿಂದ, ಈ ಘಟನೆಯಿಂದ ರೈಲು ಸಂಚಾರದಲ್ಲಿ ಗಮನಾರ್ಹ ಅಡಚಣೆ ಉಂಟಾಗಲಿಲ್ಲ ಎಂದು ಅವರು ಹೇಳಿದ್ದಾರೆ.