ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ರಾಜಸ್ಥಾನ: 18 ಗಂಟೆಗಳ ಕಾರ್ಯಾಚರಣೆ, 28 ಅಡಿ ಆಳದ ಬೋರ್ ವೆಲ್ ಗೆ ಬಿದ್ದ ಮಗು ರಕ್ಷಣೆ!

ರಾಜಸ್ಥಾನದ ದೌಸಾದಲ್ಲಿ ಈ ಘಟನೆ ನಡೆದಿದೆ. ರಕ್ಷಣೆ ನಂತರ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

NDRF ರಕ್ಷಿಸಿದ ಬಾಲಕಿ
Nagaraja AB
Updated On : 19 Sept 2024, 12:53 pm

ದೌಸಾ: ಸುಮಾರು 35 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬುಧವಾರ ಬಿದ್ದಿದ್ದ ಎರಡು ವರ್ಷದ ಮಗುವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಗುರುವಾರ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಸ್ಥಾನದ ದೌಸಾದಲ್ಲಿ ಈ ಘಟನೆ ನಡೆದಿದೆ. ರಕ್ಷಣೆ ನಂತರ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳಿಂದ ಬಾಲಕಿ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಎಸ್‌ಪಿ ರಂಜಿತಾ ಶರ್ಮಾ ತಿಳಿಸಿದ್ದಾರೆ.

18 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಬಾಲಕಿಯನ್ನು ಬೋರ್‌ವೆಲ್‌ನಿಂದ ರಕ್ಷಿಸಲು ಸಾಧ್ಯವಾಯಿತು. ಇದು ತುಂಬಾ ಕಷ್ಟದ ಕೆಲಸವಾಗಿತ್ತು. ಆದರೆ NDRF ಮತ್ತು SDRF ತಂಡಗಳ ನೆರವಿನಿಂದ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದ್ದು, ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ಹೇಳಿದರು.

Advertisement

Advertisement

28 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಬಾಲಕಿಯನ್ನು ರಕ್ಷಿಸಲು ಸಮಾನಾಂತರ ಮಾರ್ಗವನ್ನು ಕೊರೆಯಲಾಗಿತ್ತು. 21 ಅಡಿ ಎತ್ತರದಲ್ಲಿ ಆಕೆಯ ಶೂ ಪತ್ತೆಯಾಯಿತು. ಬಳಿಕ ಮೊದಲ ಪ್ರಯತ್ನದಲ್ಲಿಯೇ ಆಕೆಯ ಬಳಿಗೆ ತೆರಳಲಾಯಿತು. ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ನಿರೀಕ್ಷೆಗಿಂತ ಹೆಚ್ಚು ಸಮಯ ಹಿಡಿಯಿತು. ಎನ್‌ಡಿಆರ್‌ಎಫ್‌ನ ಒಟ್ಟು 30 ಜನರು ಮತ್ತು ಎಸ್‌ಡಿಆರ್‌ಎಫ್‌ನ 10 ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದಾರೆ ಎಂದು NDRFನ ಯೋಗೇಶ್ ಕುಮಾರ್ ಹೇಳಿದರು.

Also Read

ಕೊಳವೆ ಬಾವಿ ಗುರಂತ: ಬದುಕಿ ಬಂದ ಸಾತ್ವಿಕ್‌ ಗೆ ಮರು ನಾಮಕರಣ, ಹೆಸರು 'ಸಿದ್ದಲಿಂಗ'!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement