ಕೇಂದ್ರ ಗೃಹ ಸಚಿವ ಅಮಿತ್ ಶಾ. 
ದೇಶ

ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿ, ಇಲ್ಲವೇ ಪರಿಣಾಮ ಎದುರಿಸಿ: ನಕ್ಸಲರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಹಿಂಸಾಚಾರ ಬಿಟ್ಟು ಶರಣಾಗಿ, ಇಲ್ಲದಿದ್ದರೆ ಕಾರ್ಯಾಚರಣೆ ನಡೆಸಬೇಕಾಗುತ್ತದೆ. 2026ರ ಮಾರ್ಚ್‌ ವೇಳೆಗೆ ನಕ್ಸಲಿಸಂ ಕೊನೆಗಾಣಿಸಲಾಗುತ್ತದೆ.

ನವದೆಹಲಿ: ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿ, ಇಲ್ಲವೇ ಪರಿಣಾಮ ಎದುರಿಸಿ ಎಂದು ನಕ್ಸಲರಿಗೆ ಕೇಂದ್ರ ಸರ್ಕಾರ ಶುಕ್ರವಾರ ಎಚ್ಚರಿಕೆ ನೀಡಿದೆ.

ಸರ್ಕಾರಕ್ಕೆ ಶರಣರಾಗಿರುವ 55 ನಕ್ಸಲರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಹಿಂಸಾಚಾರ ಬಿಟ್ಟು ಶರಣಾಗಿ, ಇಲ್ಲದಿದ್ದರೆ ಕಾರ್ಯಾಚರಣೆ ನಡೆಸಬೇಕಾಗುತ್ತದೆ. 2026ರ ಮಾರ್ಚ್‌ ವೇಳೆಗೆ ನಕ್ಸಲಿಸಂ ಕೊನೆಗಾಣಿಸಲಾಗುತ್ತದೆ ಎಂದು ಹೇಳಿದರು.

ನಕ್ಸಲ್ ಹಿಂಸಾಚಾರ ಮತ್ತು ಸಿದ್ಧಾಂತವನ್ನು ದೇಶದಿಂದ ತೊಡೆದು ಹಾಕಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ. ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಗಮನಾರ್ಹ ಯಶಸ್ಸನ್ನು ಸಾಧಿಸಿವೆ ಪ್ರಸ್ತುತ ಈ ಸಮಸ್ಯೆ ಛತ್ತೀಸ್‌ಗಢದ ಕೇವಲ ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿದೆ.

ಈ ಹಿಂದೆ ಪಶುಪತಿನಾಥದಿಂದ (ನೇಪಾಳ) ತಿರುಪತಿ (ಆಂಧ್ರಪ್ರದೇಶ)ವರೆಗೂ ನಕ್ಸಲ್‌ ಕಾರಿಡಾರ್ ಸ್ಥಾಪಿಸಲು ಮಾವೋವಾದಿಗಳು ಯೋಜಿಸಿದ್ದರು. ಇದನ್ನು ಮೋದಿ ಸರ್ಕಾರ ನಾಶಪಡಿಸಿತು.

ಶರಣಾಗುವಂತೆ ನಾನು ಪದೇ ಪದೇ ನಕ್ಸಲರಿಗೆ ಮನವಿ ಮಾಡುತ್ತಿದ್ದೇನೆ. ನೀವು ಕೇಳದಿದ್ದರೆ, ನಿಮ್ಮನ್ನು ಕೊನೆಗೊಳಿಸಲು ಶೀಘ್ರದಲ್ಲೇ ಸಂಪೂರ್ಣ ಕಾರ್ಯಾಚರಣೆ ನಡೆಸಲಾಗುವುದು ಎಂದು ಪುನರುಚ್ಛರಿಸಿದರು.

ಶೀಘ್ರದಲ್ಲೇ ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರದೊಂದಿಗೆ ಸಂಪರ್ಕ ಮಾಡಿ ಛತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶಗಳ ಜನರಿಗೆ ಕಲ್ಯಾಣ ಯೋಜನೆಯನ್ನು ರೂಪಿಸಲಿದೆ. ಉದ್ಯೋಗ, ಆರೋಗ್ಯ, ರಕ್ಷಣೆ ಮತ್ತು ಇತರ ಕ್ಷೇತ್ರಗಳಲ್ಲಿ ಕಲ್ಯಾಣ ಕ್ರಮಗಳ ಮೂಲಕ ನಾವು ನಿಮಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ