ಸಾಂದರ್ಭಿಕ ಚಿತ್ರ 
ದೇಶ

ಗುಜರಾತ್: ಕಚ್ ನಲ್ಲಿ 3.3 ತೀವ್ರತೆಯ ಭೂಕಂಪನ! ಯಾವುದೇ ಹಾನಿ ಇಲ್ಲ

ಬೆಳಿಗ್ಗೆ 10.05 ರ ಹೊತ್ತಿಗೆ ಕಂಪನ ಸಂಭವಿಸಿದ್ದು, ರಾಪರ್ ನ ಪಶ್ಚಿಮ ನೈರುತ್ಯಕ್ಕೆ 12 ಕಿಮೀ ದೂರದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಗಾಂಧಿನಗರ ಮೂಲದ ಐಎಸ್‌ಆರ್ ತಿಳಿಸಿದೆ.

ಅಹಮದಾಬಾದ್: ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 3.3 ತೀವ್ರತೆಯ ಭೂ ಕಂಪನ ಸಂಭವಿಸಿದೆ ಎಂದು ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್‌ಆರ್) ತಿಳಿಸಿದೆ. ಭೂಕಂಪನದಿಂದ ಜಿಲ್ಲೆಯಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ 10.05 ರ ಹೊತ್ತಿಗೆ ಕಂಪನ ಸಂಭವಿಸಿದ್ದು, ರಾಪರ್ ನ ಪಶ್ಚಿಮ ನೈರುತ್ಯಕ್ಕೆ 12 ಕಿಮೀ ದೂರದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಗಾಂಧಿನಗರ ಮೂಲದ ಐಎಸ್‌ಆರ್ ತಿಳಿಸಿದೆ.

ಇದು ಈ ತಿಂಗಳಿನಲ್ಲಿ ಸೌರಾಷ್ಟ್ರ-ಕಚ್ ಪ್ರದೇಶದಲ್ಲಿ ಇಲ್ಲಿಯವರೆಗೂ ದಾಖಲಾದ 3 ಕ್ಕಿಂತ ಹೆಚ್ಚು ತೀವ್ರತೆಯ ನಾಲ್ಕನೇ ಕಂಪನವಾಗಿದೆ ಎಂದು ಐಎಸ್ಆರ್ ಮಾಹಿತಿ ನೀಡಿದೆ.

ಗುಜರಾತ್‌ನಲ್ಲಿ ಭೂಕಂಪನದ ಅಪಾಯ ತುಂಬಾ ಹೆಚ್ಚಾಗಿದೆ. ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (GSDMA) ಒದಗಿಸಿದ ಮಾಹಿತಿಯ ಪ್ರಕಾರ, ಕಳೆದ 200 ವರ್ಷಗಳಲ್ಲಿ ಇಲ್ಲಿ ಒಂಬತ್ತು ಪ್ರಮುಖ ಭೂಕಂಪನ ಆಗಿದೆ.

2001 ರ ಕಚ್ ಭೂಕಂಪ ಕಳೆದ ಎರಡು ಶತಮಾನಗಳಲ್ಲಿ ಭಾರತದಲ್ಲಿ ಸಂಭವಿಸಿದ ಮೂರನೇ ಅತಿದೊಡ್ಡ ಮತ್ತು ಎರಡನೇ ವಿನಾಶಕಾರಿ ಭೂಕಂಪವಾಗಿದೆ ಎಂದು ಹೇಳಿದೆ.

2001 ರ ಜನವರಿ 26 ರಂದು ಗುಜರಾತ್ ಕಚ್‌ನ ಭಚೌ ಬಳಿ 6.9 ತೀವ್ರತೆಯ ಭೂಕಂಪನ ಆಗಿತ್ತು. ಇದು ಇಡೀ ರಾಜ್ಯದ ಮೇಲೆ ಪರಿಣಾಮ ಬೀರಿತು. ಇದರಿಂದ ಸುಮಾರು 13,800 ಜನರು ಸಾವನ್ನಪ್ಪಿದ್ದರೆ, 1.67 ಲಕ್ಷ ಜನರು ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT