ಸಾಂದರ್ಭಿಕ ಚಿತ್ರ 
ದೇಶ

ದೇಶದಲ್ಲಿ 10 ಜನರ ಪೈಕಿ ಮೂವರಲ್ಲಿ ನಾನ್-ಆಲ್ಕೋಲಿಕ್ ಫ್ಯಾಟಿ ಲಿವರ್ ಡಿಸೀಸ್‌: ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

ಕೇಂದ್ರ ಸರ್ಕಾರ ಶುಕ್ರವಾರ NAFLD ನ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದು ಜಾಗತಿಕವಾಗಿ ಸಾಮಾನ್ಯ ದೀರ್ಘಕಾಲದ ಪಿತ್ತಜನಕಾಂಗದ ಕಾಯಿಲೆಯಾಗಿದ್ದು, ಪ್ರಪಂಚದಾದ್ಯಂತ ಮೂರನೇ ಒಂದು ಭಾಗದಷ್ಟು ಯುವಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ.

ನವದೆಹಲಿ: ದೇಶದಲ್ಲಿ 10 ಜನರ ಪೈಕಿ ಒಬ್ಬರಿಂದ ಮೂವರಲ್ಲಿ ನಾನ್-ಆಲ್ಕೋಲಿಕ್ ಫ್ಯಾಟಿ ಲಿವರ್ ಡಿಸೀಸ್‌ (ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ) ಇರಬಹುದು. ಇದು ದೇಶದಲ್ಲಿ ಯಕೃತ್ತಿನ ಕಾಯಿಲೆಗೆ ಗಮನಾರ್ಹ ಕಾರಣವಾಗಿ ಹೊರ ಹೊಮ್ಮುತ್ತಿದೆ. ವಯಸ್ಸು, ಲಿಂಗ, ವಾಸಿಸುವ ಪ್ರದೇಶ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿ ಶೇ. 9 ರಿಂದ ಶೇ. 32 ರವರೆಗೆ ಸಮುದಾಯದ ಹರಡುವಿಕೆಯೊಂದಿಗೆ NAFLD ಸೈಲೆಂಟ್ ಸಾಂಕ್ರಾಮಿಕವಾಗಿ ಊಹಿಸಲಾಗುತ್ತಿದೆ.

ಕೇಂದ್ರ ಸರ್ಕಾರ ಶುಕ್ರವಾರ NAFLD ನ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದು ಜಾಗತಿಕವಾಗಿ ಸಾಮಾನ್ಯ ದೀರ್ಘಕಾಲದ ಪಿತ್ತಜನಕಾಂಗದ ಕಾಯಿಲೆಯಾಗಿದ್ದು, ಪ್ರಪಂಚದಾದ್ಯಂತ ಮೂರನೇ ಒಂದು ಭಾಗದಷ್ಟು ಯುವಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ.

ರೋಗಿಗಳ ಆರೈಕೆ ಮತ್ತು NAFLD ಗೆ ಸಂಬಂಧಿಸಿದ ಫಲಿತಾಂಶಗಳನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಎರಡು ದಾಖಲೆಗಳನ್ನು ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ, NAFLD ಅನ್ನು ಗಮನಾರ್ಹವಾದ ಸಾಂಕ್ರಾಮಿಕವಲ್ಲದ ಕಾಯಿಲೆ ಎಂದು ಗುರುತಿಸುವಲ್ಲಿ ಭಾರತ ಮುಂದಾಳತ್ವ ವಹಿಸಿದೆ ಎಂದು ಹೇಳಿದರು.

ಜಾಗತಿಕವಾಗಿ ಸಾಂಕ್ರಾಮಿಕವಲ್ಲದ NAFLD ಕಾಯಿಲೆಯಿಂದ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದರೆ ಭಾರತದಲ್ಲಿ ಶೇ.66ಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ. ಚಯಾಪಚಯ ರೋಗಗಳ ಪ್ರಮುಖ ಕಾರಣಗಳಲ್ಲಿ ಯಕೃತ್ತು ಸಮಸ್ಯೆ ಒಂದಾಗಿದೆ. ಹೆಚ್ಚುತ್ತಿರುವ ಹೊರೆ ಮತ್ತು ಅದನ್ನು ಪರಿಹರಿಸುವ ತುರ್ತು ಅಗತ್ಯವನ್ನು ಅರಿತುಕೊಂಡ ಭಾರತವು 2021 ರಲ್ಲಿ NAFLDನ್ನು ರಾಷ್ಟ್ರೀಯ ಕಾರ್ಯಕ್ರಮವಾಗಿ ಸಂಯೋಜಿಸಿತು.

"NAFLD ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿ ಹೊರಹೊಮ್ಮುತ್ತಿದೆ. ಇದು ಸ್ಥೂಲಕಾಯತೆ, ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಚಯಾಪಚಯ ಅಸ್ವಸ್ಥತೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. 10 ಜನರ ಪೈಕಿ ಒಬ್ಬರಿಂದ ಮೂವರಲ್ಲಿ ಇದು ಕಾಣಿಸಿಕೊಂಡು ರೋಗದ ಪರಿಣಾಮವನ್ನು ತೋರಿಸುತ್ತದೆ ಎಂದು ಅವರು ಹೇಳಿದರು. NAFLD ಪಿತ್ತಜನಕಾಂಗದ ಜೀವಕೋಶಗಳಲ್ಲಿ ಹೆಚ್ಚುವರಿ ಕೊಬ್ಬಿನ ಶೇಖರಣೆಯಿಂದ ಉಂಟಾಗುವ ಯಕೃತ್ತಿನ ಅಸ್ವಸ್ಥತೆಯಾಗಿದೆ. ಇದು ಆಲ್ಕೊಹಾಲ್ ಸೇವನೆಯಿಂದ ಉಂಟಾಗುವುದಿಲ್ಲ. ಪಿತ್ತಜನಕಾಂಗವು ಸ್ವಲ್ಪ ಕೊಬ್ಬನ್ನು ಹೊಂದಿರುವುದು ಸಾಮಾನ್ಯವಾಗಿದೆ.

ಆದಾಗ್ಯೂ, ಯಕೃತ್ತಿನ ತೂಕದ ಶೇ. 5ಕ್ಕಿಂತ ಹೆಚ್ಚು ಕೊಬ್ಬು ಇದ್ದರೆ ಅದನ್ನು ಫ್ಯಾಟಿ ಲಿವರ್ (ಸ್ಟೀಟೋಸಿಸ್) ಎಂದು ಕರೆಯಲಾಗುತ್ತದೆ. ಇದು ಸ್ಥೂಲಕಾಯತೆ, ಟೈಪ್ 2 ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಇತರ ಚಯಾಪಚಯ ಸಮಸ್ಯೆಗಳ ಜೊತೆಗೆ NAFLD ಯ ಹರಡುವಿಕೆಯು ಹೆಚ್ಚುತ್ತಿದೆ ಎಂದು ಚಂದ್ರ ಹೇಳಿದರು. ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ಅನೇಕ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಇವುಗಳಿಗೆ ಸಂಬಂಧಿಸಿದ್ದು, ಯಕೃತ್ತಿನ ಆರೋಗ್ಯ, ಆರೋಗ್ಯಕರ ಪಿತ್ತಜನಕಾಂಗವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳುತ್ತದೆ.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಪಿಲಿಯರಿ ಸೈನ್ಸಸ್ (ILBS) ಕುಲಪತಿ ಡಾ. ಎಸ್ ಕೆ ಸರಿನ್ ದೇಶದಲ್ಲಿ ಶೇ 30 ರಿಂದ 40 ರಷ್ಟು ಯಕೃತ್ತಿನ ಕ್ಯಾನ್ಸರ್ ಫ್ಯಾಟಿ ಲಿವರ್‌ನಿಂದ ಉಂಟಾಗುತ್ತದೆ ಎಂದು ಹೇಳಿದರು.

ಪರಿಷ್ಕೃತ ಮಾರ್ಗಸೂಚಿಗಳು: ಬದಲಾಗುತ್ತಿರುವ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯಿಂದಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದು ಹೆಚ್ಚಾ ಗುತ್ತಿದೆ. NAFLD ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳನ್ನು ಆರಂಭಿಕವಾಗಿ ಗುರುತಿಸಿ, ಚಿಕಿತ್ಸೆ ನೀಡುವುದು ಅತ್ಯಗತ್ಯವಾಗಿದೆ ಎಂದು ಮಾರ್ಗಸೂಚಿಗಳು ತಿಳಿಸಿವೆ.

ಸ್ಥೂಲಕಾಯ (ಶೇ 60 ರಿಂದ 90) ಮೆಟಬಾಲಿಕ್ ಸಿಂಡ್ರೋಮ್‌ಗಳು, ಇದರಲ್ಲಿ ಹೊಟ್ಟೆಯ ಬೊಜ್ಜು, ಅಧಿಕ ರಕ್ತದೊತ್ತಡ, ಅಧಿಕ ರಕ್ತದ ಸಕ್ಕರೆ ಮತ್ತು ಅಸಹಜ ರಕ್ತದ ಲಿಪಿಡ್ ಮಟ್ಟಗಳು (ಶೇ. 53) ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹ (ಶೇ. 40 ರಿಂದ 80) ಅಧಿಕ ರಕ್ತದೊತ್ತಡ, ಜಡ ಜೀವನಶೈಲಿ; ಮತ್ತು ಹೆಚ್ಚಿನ ಕ್ಯಾಲೋರಿ ಆಹಾರಗಳು, ಹೆಚ್ಚಾಗಿ ಕೊಬ್ಬಿನಾಂಶದ ಆಹಾರ, ಸಕ್ಕರೆ ಸೇವನೆ ಅಪಾಯಕಾರಿ ಅಂಶಗಳಾಗಿವೆ ಎಂದು ಪರಿಷ್ಕೃತ ಮಾರ್ಗಸೂಚಿಗಳು ಹೇಳುತ್ತವೆ.

ಈ ಕಾಯಿಲೆ ಬಾರದಂತೆ ತಡೆಗಟ್ಟಲು ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್‌ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚಾಗಿ ತಿನ್ನಬೇಕು ಎಂದು ಡಾ ಸರಿನ್ ಹೇಳಿದರು.

ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ-ತೀವ್ರತೆಯ ಏರೋಬಿಕ್ ವ್ಯಾಯಾಮ ಮತ್ತು ವಾರಕ್ಕೆ ಎರಡು ಬಾರಿ ನಿಯಮಿತ ದೈಹಿಕ ಚಟುವಟಿಕೆ ಅತ್ಯಗತ್ಯ. ಆದಷ್ಟು ಒಬ್ಬರೇ ಕುಳಿತುಕೊಳ್ಳುವುದನ್ನು ಕಡಿಮೆ ಮಾಡಬೇಕು ಮತ್ತು ಮತ್ತಷ್ಟು ಯಕೃತ್ತಿನ ಹಾನಿ ತಡೆಗಟ್ಟಲು ಆಲ್ಕೋಹಾಲ್ ಅನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಈ ಮಾರ್ಗಸೂಚಿಗಳು NAFLD ನಿರ್ವಹಿಸಲು ಮತ್ತು ರೋಗ ಹೆಚ್ಚಾಗದಂತೆ ತಡೆಗಟ್ಟುತ್ತದೆ. ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸುತ್ತದೆ ಎಂದು ಮಾರ್ಗಸೂಚಿಗಳು ಹೇಳುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT