1.5 ಕೋಟಿ ರೂ ನಗದು ED ವಶಕ್ಕೆ 
ದೇಶ

L2: ಎಂಪೂರನ್ ಚಿತ್ರ ನಿರ್ಮಾಪಕನಿಗೆ ಸಂಕಷ್ಟ: 1.5 ಕೋಟಿ ರೂ ನಗದು ED ವಶಕ್ಕೆ

ಶುಕ್ರವಾರ ಪ್ರಾರಂಭಿಸಲಾದ ಶೋಧ ಕಾರ್ಯಾಚರಣೆ ಶನಿವಾರ ಕೊನೆಗೊಂಡಿವೆ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ತಿರುವನಂತಪುರಂ: ಮಲಯಾಳಂ ಚಲನಚಿತ್ರ L2: ಎಂಪೂರನ್ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್ ಒಡೆತನದ ಚಿಟ್ ಫಂಡ್ ಕಂಪನಿಯಲ್ಲಿ ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪದ ಮೇಲೆ ದಾಳಿ ನಡೆಸಿದ ನಂತರ 1.5 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ.

ಶುಕ್ರವಾರ ಪ್ರಾರಂಭಿಸಲಾದ ಶೋಧ ಕಾರ್ಯಾಚರಣೆ ಶನಿವಾರ ಕೊನೆಗೊಂಡಿವೆ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಕೇರಳದ ಕೋಝಿಕ್ಕೋಡ್‌ನ ಒಂದು ಸ್ಥಳ ಮತ್ತು ತಮಿಳುನಾಡಿನ ಚೆನ್ನೈನ ಎರಡು ಸ್ಥಳಗಳಲ್ಲಿ ಶ್ರೀ ಗೋಕುಲಂ ಚಿಟ್ಸ್ ಮತ್ತು ಫೈನಾನ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್‌ನ ವಸತಿ ಮತ್ತು ವ್ಯವಹಾರ ಆವರಣದಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, FEMA 'ಉಲ್ಲಂಘನೆ'ಯಲ್ಲಿ 1.50 ಕೋಟಿ ರೂಪಾಯಿ ನಗದು ಮತ್ತು 'ಆಪಾದಿತ' ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.

ED ಆರೋಪಗಳ ಕುರಿತು ಗೋಪಾಲನ್ ಅಥವಾ ಅವರ ಕಂಪನಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 'ಲೂಸಿಫರ್' ಟ್ರೈಲಾಜಿಯ ಎರಡನೇ ಭಾಗವಾಗಿರುವ್L2: ಎಂಪೂರನ್ ಸುತ್ತಲಿನ ಇತ್ತೀಚಿನ ವಿವಾದದ ಹಿನ್ನೆಲೆಯಲ್ಲಿ ED ಶೋಧ ಕಾರ್ಯಾಚರಣೆ ನಡೆದಿರುವುದು ಗಮನಾರ್ಹವಾಗಿದೆ.

ಮಲಯಾಳಂ ಸಿನಿಮಾ ನಿರ್ಮಾಣಗಳಲ್ಲಿ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದೆಂದು ಹೇಳಲಾದ L2: ಎಂಪೂರನ್ ಮಾರ್ಚ್ 27 ರಂದು ಬಿಡುಗಡೆಯಾಯಿತು ಮತ್ತು ಬಲಪಂಥೀಯ ರಾಜಕೀಯದ ಟೀಕೆ ಮತ್ತು 2002 ರ ಗುಜರಾತ್ ಗಲಭೆಯ ಉಲ್ಲೇಖದ ಮೂಲಕ ವಿವಾದಕ್ಕೂ ಗುರಿಯಾಗಿತ್ತು.

ಆಶಿರ್ವಾದ್ ಸಿನಿಮಾಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆಂಥೋನಿ ಪೆರುಂಬವೂರ್ ಮತ್ತು ಸುಬಾಸ್ಕರನ್ ಚಿತ್ರದ ಇತರ ನಿರ್ಮಾಪಕರಾಗಿದ್ದಾರೆ.

ಪೆರುಂಬವೂರ್ ಪ್ರಕಾರ, ವಿವಾದದ ನಂತರ ಚಿತ್ರದಿಂದ ಎರಡು ನಿಮಿಷಗಳಿಗಿಂತ ಸ್ವಲ್ಪ ಹೆಚ್ಚು ದೃಶ್ಯಗಳನ್ನು ತೆಗೆದುಹಾಕಲಾಗಿದೆ.

ಶ್ರೀ ಗೋಕುಲಂ ಚಿಟ್ಸ್ ಮತ್ತು ಫೈನಾನ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್, ಸಕ್ಷಮ ಪ್ರಾಧಿಕಾರದ ಸೂಕ್ತ ಅನುಮತಿಯಿಲ್ಲದೆ, ಭಾರತದ ಹೊರಗೆ ವಾಸಿಸುವ ವ್ಯಕ್ತಿಗಳಿಂದ ಚಿಟ್ ಫಂಡ್‌ಗಳಿಗೆ ಚಂದಾದಾರಿಕೆಯನ್ನು ಸಂಗ್ರಹಿಸುತ್ತಿದೆ ಎಂದು 'ನಿರ್ದಿಷ್ಟ' ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿದೆ ಎಂದು ED ಹೇಳಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿ ಈ ವ್ಯಕ್ತಿಗಳಿಂದ ಚಂದಾದಾರಿಕೆ ಮೊತ್ತವನ್ನು ನಗದು ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ'.

'ಇದು ಆರ್‌ಬಿಐ ಹೊರಡಿಸಿದ ಜೂನ್ 11, 2015 ರ ಸುತ್ತೋಲೆ ಸಂಖ್ಯೆ 107 ರೊಂದಿಗೆ ಓದಲಾದ ವಿದೇಶಿ ವಿನಿಮಯ ನಿರ್ವಹಣೆ (ಅನುಮತಿಸಬಹುದಾದ ಬಂಡವಾಳ ಖಾತೆ ವಹಿವಾಟುಗಳು) ನಿಯಮಗಳು, 2000 ರ ನಿಯಮ 4 (ಬಿ) ರ ಉಲ್ಲಂಘನೆಗೆ ಕಾರಣವಾಯಿತು' ಎಂದು ಸಂಸ್ಥೆ ಹೇಳಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT