ವಾರಣಾಸಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 
ದೇಶ

'ಕಾಶಿ ನನಗೆ ಸೇರಿದ್ದು, ನಾನು ಕಾಶಿಗೆ ಸೇರಿದವನು': ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ನಂತರ ಭೋಜ್‌ಪುರಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.

ವಾರಣಾಸಿ: ಕಾಶಿ 'ಪೂರ್ವಾಂಚಲ್‌ನ ಆರ್ಥಿಕ ನಕ್ಷೆ' ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ, ಕಳೆದ 10 ವರ್ಷಗಳಲ್ಲಿ ವಾರಣಾಸಿಯ ಅಭಿವೃದ್ಧಿ ವೇಗಗೊಂಡಿದೆ. ಕಾಶಿ ಕೇವಲ 'ಪ್ರಾಚೀನ ನಗರವಲ್ಲ, ಪ್ರಗತಿಪರ ನಗರವೂ ​​ಆಗಿದೆ' ಎಂದು ಶುಕ್ರವಾರ ಹೇಳಿದ್ದಾರೆ.

ವಾರಣಾಸಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ನಂತರ ಭೋಜ್‌ಪುರಿಯಲ್ಲಿ ವಾರಣಾಸಿಯ ಜನರನ್ನು ಉದ್ದೇಶಿಸಿ ಮಾತನಾಡಿದರು.

'ಕಾಶಿಯ ನನ್ನ ಕುಟುಂಬ ಸದಸ್ಯರಿಗೆ ನಾನು ನಮಸ್ಕರಿಸುತ್ತೇನೆ. ನಿಮ್ಮೆಲ್ಲರಿಂದ ನನಗೆ ದೊರೆತ ಪ್ರೀತಿ ಮತ್ತು ಗೌರವಕ್ಕೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ಕಾಶಿ ನನಗೆ ಸೇರಿದ್ದು, ನಾನು ಕಾಶಿಗೆ ಸೇರಿದವನು. ಸಂಕಟಮೋಚನ ಮಹಾರಾಜರ ಕಾಶಿಯಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ' ಎಂದು ಪ್ರಧಾನಿ ಮೋದಿ ಹೇಳಿದರು.

'ನಾಳೆ ಹನುಮ ಜಯಂತಿ ಆಚರಿಸಲಾಗುವುದು ಮತ್ತು ಇಂದು, ಸಂಕಟಮೋಚನ ಮಹಾರಾಜರ ಕಾಶಿಯಲ್ಲಿ ನಿಮ್ಮೆಲ್ಲರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿದೆ. ಅಭಿವೃದ್ಧಿಯ ಹಬ್ಬವನ್ನು ಆಚರಿಸಲು ಕಾಶಿಯ ಜನರು ಇಂದು ಇಲ್ಲಿ ಸೇರಿದ್ದಾರೆ. ಕಳೆದ 10 ವರ್ಷಗಳಲ್ಲಿ ವಾರಣಾಸಿಯ ಅಭಿವೃದ್ಧಿ ವೇಗ ಪಡೆದುಕೊಂಡಿದೆ. ಕಾಶಿ ಈಗ ಕೇವಲ ಪ್ರಾಚೀನ ನಗರವಾಗಿ ಉಳಿದುಕೊಂಡಿಲ್ಲ, ಬದಲಿಗೆ ಪ್ರಗತಿಪರ ನಗರವೂ ​​ಆಗಿದೆ. ಕಾಶಿ ಈಗ ಪೂರ್ವಾಂಚಲ್‌ನ ಆರ್ಥಿಕ ನಕ್ಷೆಯ ಕೇಂದ್ರದಲ್ಲಿದೆ. ಸಂಪರ್ಕ ಹೆಚ್ಚಿಸಲು ಅನೇಕ ಮೂಲಸೌಕರ್ಯ ಯೋಜನೆಗಳು, ಪ್ರತಿ ಮನೆಗೂ 'ನಲ್ ಸೀ ಜಲ್' ಒದಗಿಸುವುದು, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಕ್ರೀಡಾ ಸೌಲಭ್ಯಗಳ ವಿಸ್ತರಣೆ ಮತ್ತು ಪ್ರತಿ ಪ್ರದೇಶ, ಪ್ರತಿ ಕುಟುಂಬ ಮತ್ತು ಪ್ರತಿಯೊಬ್ಬ ಯುವಕರಿಗೂ ಉತ್ತಮ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಇಂದು ಉದ್ಘಾಟನೆಗೊಂಡ ಈ ಯೋಜನೆಗಳದ್ದಾಗಿವೆ' ಎಂದು ಅವರು ಹೇಳಿದರು.

'ಜನರಿಗೆ ಸೌಲಭ್ಯಗಳು ಬಂದಾಗ ಅದು ಅಭಿವೃದ್ಧಿಯ ಸಂಕೇತವಾಗಿರುತ್ತದೆ. 10-11 ವರ್ಷಗಳ ಹಿಂದೆ ಇಡೀ ಪೂರ್ವಾಂಚಲ್‌ನಲ್ಲಿ ಚಿಕಿತ್ಸೆ ಪಡೆಯಲು ಸಮಸ್ಯೆಗಳು ಇದ್ದವು. ಇಂದು ಪರಿಸ್ಥಿತಿ ವಿಭಿನ್ನವಾಗಿದ್ದು, ನನ್ನ ಕಾಶಿ ಈಗ ಆರೋಗ್ಯದ ರಾಜಧಾನಿಯಾಗುತ್ತಿದೆ. ಇಂದು, ದೆಹಲಿ ಮತ್ತು ಮುಂಬೈನಲ್ಲಿರುವ ದೊಡ್ಡ ಆಸ್ಪತ್ರೆಗಳು ನಿಮ್ಮ ಮನೆಯ ಹತ್ತಿರದಲ್ಲಿವೆ. ಇದುವೇ ಅಭಿವೃದ್ಧಿ. ನೀವು ಮೂರನೇ ಬಾರಿಗೆ ನಮ್ಮನ್ನು ಆಶೀರ್ವದಿಸಿದಾಗ, ನಾವು ಸೇವಕರಾಗಿ ನಮ್ಮ ಕರ್ತವ್ಯವನ್ನು ಪ್ರೀತಿಯಿಂದ ಪೂರೈಸಿದ್ದೇವೆ. ಹಿರಿಯ ನಾಗರಿಕರ ಉಚಿತ ಚಿಕಿತ್ಸೆ ಪಡೆಯಬಹುದು ಎಂಬುದು ನನ್ನ ಖಾತರಿಯಾಗಿತ್ತು. ಇದರ ಫಲಿತಾಂಶವೇ ಆಯುಷ್ಮಾನ್ ವೇ ವಂದನಾ ಯೋಜನೆ. ಈ ಯೋಜನೆ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ಒದಗಿಸುವುದಲ್ಲದೆ, ಅವರ ಗೌರವಕ್ಕಾಗಿಯೂ ಆಗಿದೆ. ಇಂದು, ಭಾರತವು ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಒಟ್ಟಿಗೆ ಹೊತ್ತುಕೊಂಡು ಮುಂದುವರಿಯುತ್ತಿದೆ. ಕಾಶಿ ಇದಕ್ಕೆ ಅತ್ಯುತ್ತಮ ಮಾದರಿಯಾಗುತ್ತಿದೆ. ಇಲ್ಲಿ ಗಂಗಾ ನದಿಯ ಹರಿವು ಮತ್ತು ಭಾರತದ ಪ್ರಜ್ಞೆಯ ಹರಿವು ಕೂಡ ಇದೆ' ಎಂದರು.

'ಇಂದು ಜ್ಯೋತಿಬಾ ಫುಲೆ ಅವರ ಜನ್ಮ ದಿನಾಚರಣೆಯೂ ಆಗಿದೆ. ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ತಮ್ಮ ಇಡೀ ಜೀವನವನ್ನು ಮಹಿಳೆಯರ ಸಬಲೀಕರಣ ಮತ್ತು ಸಮಾಜದ ಸುಧಾರಣೆಗಾಗಿ ಕೆಲಸ ಮಾಡಲು ಮುಡಿಪಾಗಿಟ್ಟರು. ಇಂದು, ನಾವು ಮಹಿಳೆಯರನ್ನು ಸಬಲೀಕರಣಗೊಳಿಸುವ ಅವರ ಆಂದೋಲನವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ. ಅದಕ್ಕೆ ಹೊಸ ಶಕ್ತಿಯನ್ನು ನೀಡುತ್ತಿದ್ದೇವೆ' ಎಂದು ಪ್ರಧಾನಿ ತಿಳಿಸಿದರು.

ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ 3,880 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT